555 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಅರಣ್ಯ ಇಲಾಖೆ


ಬೆಂಗಳೂರು: ಅರಣ್ಯ ಇಲಾಖೆಯು ‘ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2012ರಂತೆ’ ಅರಣ್ಯ ರಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 17, 2016.

ಒಟ್ಟು 555 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2ನೇ ಪಿಯುಸಿ/12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ : ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷಗಳು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1ರ ಅಭ್ಯರ್ಥಿಗಳಿಗೆ 32 ವರ್ಷ. ಪ್ರವರ್ಗ 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ವರ್ಗದವರಿಗೆ 27 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕಗಳು : ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ. ಸೇವಾಶುಲ್ಕ 12 ರೂ., ಪ.ಜಾ/ಪ.ಪಂ/ಪ್ರವರ್ಗ -1ರ ಅಭ್ಯರ್ಥಿಗಳಿಗೆ 50 ರೂ. 12 ರೂ. ಸೇವಾ ಶುಲ್ಕ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಮುದ್ರಿತ ಅರ್ಜಿ ಪ್ರತಿಯನ್ನು ತೆಗೆದುಕೊಂಡು ಇ-ಪಾವತಿ ಅಂಚೆ ಕಚೇರಿಯಲ್ಲಿ ಶುಲ್ಕವನ್ನು ಪಾವತಿ ಮಾಡಬೇಕು.
ಆನ್‌ಲೈನ್ ಮೂಲಕ ಏಪ್ರಿಲ್ 18ರಿಂದ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಮೇ 17, 2016 ಸಂಜೆ 4.30. ಅರ್ಜಿ ಸಲ್ಲಿಸುವ ವಿಧಾನ ಮತ್ತು ಹೆಚ್ಚಿನ ಮಾಹಿತಿಗಳು www.karnatakaforest.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ.


Related News

ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ...
views 851
ಕರ್ನಾಟಕ ಜೀವ ವೈವಿದ್ಯ ಮಂಡಳಿಯು ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಟೆಕ್ನಿಕಲ್ ಎಕ್ಸಿಕ್ಯೂಟಿವ್ (ಸಸ್ಯಶಾಸ್ತ್ರ/ಅನ್ವಯ...
ಸ್ಟಾಫ್ ಸೆಲೆಕ್ಷನ್ ಕಮಿಷನ್ – ಮಲ್ಟಿ ಟಾಸ್ಕಿಂಗ್ ಸ್ಟಾಫ್...
views 835
ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಂಗವಿಕಲ ಅಭ್ಯರ್ಥಿಗಳಿಂದ ಮಲ್ಟಿ ಟಾಸ್ಕಿಂಗ್ ಸ್ಟಾಫ್  ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು ಹುದ್ದೆಗಳ ಸಂಖ್ಯೆ -122 ವ...
ಮಿನಿಸ್ಟ್ರಿ ಆಫ್ ರೈಲ್ವೆ – 18,252 ವಿವಿಧ ಹುದ್ದೆಗೆ ಅರ್ಜ...
views 1004
ಮಿನಿಸ್ಟ್ರಿ ಆಫ್ ರೈಲ್ವೆಯು ವಿವಿಧ ರೈಲ್ವೇ ಬೋರ್ಡ್‌ಗಳಲ್ಲಿ ಖಾಲಿ ಇರುವ ಕಮರ್ಷಿಯಲ್ ಅಪ್ರೆಂಟಿಸ್ , ಟ್ರಾಫಿಕ್ ಅಪ್ರೆಂಟಿಸ್ , ಎನ್‌ಕ್ವೈರಿ ಕಂ ರಿಸರ್ವೇಷನ್ ಕ್ಲರ್ಕ್, ಗೂಡ್ಸ್ ಗಾರ...
KPSC – ಇಂಜಿನಿಯರ್ಸ್ ಗಳ ನೇಮಕಾತಿಗೆ ಅರ್ಜಿ ಆಹ್ವಾನ...
views 841
ಕರ್ನಾಟಕ ಲೋಕ ಸೇವಾ ಆಯೋಗ ಬೆಂಗಳೂರು 846 ಸಹಾಯಕ ಇಂಜಿನಿಯರ್ (ಬ್ಯಾಕ್ ಲಾಗ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಎಸ್.ಟಿ / ಎಸ್.ಸಿ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು...
ಸಿಂಡಿಕೇಟ್‌ ಬ್ಯಾಂಕ್‌ : 311 ಹುದ್ದೆಗಳಿಗೆ (ತಾತ್ಕಾಲಿಕ) ...
views 825
ಸಿಂಡಿಕೇಟ್‌ ಬ್ಯಾಂಕ್‌ 311 ಹುದ್ದೆಗಳನ್ನು (ತಾತ್ಕಾಲಿಕ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/11/2015. ಹುದ್ದೆ ಹೆಸರು: 1) ಅಟೆಂಡರ್‌:...

Leave a Reply

Your email address will not be published. Required fields are marked *