ಸ್ವತಂತ್ರ ಕುಂಭ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಮನವಿ


ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಕಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಕುಲಾಲ ಸಮಾಜದ ನಾಯಕರು ಸ್ವತಂತ್ರ ಕುಂಭ ನಿಗಮ ಸ್ಥಾಪಿಸಲು ಬೇಡಿಕೆಯನ್ನು ಮುಂದಿಟ್ಟು ಮನವಿ ಸಲ್ಲಿಸಿದರು.

karla

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಚುನಾವಣೆ ಮುಗಿದ ನಂತರದಲ್ಲಿ ಕುಲಾಲ ನಾಯಕರನ್ನು ಒಳಗೊಂಡ ತಂಡ ಬೆಂಗಳೂರಿನಲ್ಲಿ ತನ್ನನ್ನು ಭೇಟಿ ಮಾಡಿ ವಿಸ್ತಾರವಾದ ಮಾಹಿತಿ ನೀಡಿ ಚರ್ಚಿಸಿದರೆ ಸ್ವತಂತ್ರ ಕುಂಭ ನಿಗಮದೊಂದಿಗೆ ಸಮುದಾಯಕ್ಕೆ ವಿಶೇಷ ಅನುಧಾನವನ್ನು ನೀಡುವ ವ್ಯವಸ್ಥೆಯನ್ನು ಮಾಡುವುದರ ಕುರಿತು ವಿಶೇಷ ಗಮನ ಹರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಮುಖ್ಯಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಕುಂಬಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುವುದರ ಬಗ್ಗೆಯೂ ವಿಶೇಷ ಗಮನ ಹರಿಸುವುದಾಗಿ ಅವರು ಹೇಳಿದರು.

karla1
ಕುಮಾರಸ್ವಾಮಿ ಅವರನ್ನು ಭೇಟಿಯಾದ ತಂಡದಲ್ಲಿ ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಭೋಜ ಕುಲಾಲ್ ಬೇಳಂಜೆ, ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ, ಕುಂಬಾರರ ಗುಡಿಕೈಗಾರಿಕ ಸಹಕಾರಿ ಸಂಘ ಪೆರ್ಡೂರು ಇದರ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಉದಯ್ ಕುಲಾಲ್ ಕುಡ್ತ್ರುರ್ಬೈಲ್, ವಸಂತ ಕುಲಾಲ್ ಮಾಣೈ, ಸದಾನಂದ ಕುಲಾಲ್ ಇದ್ದರು.


[yuzo_related]

Leave a Reply

Your email address will not be published. Required fields are marked *