`ಸ್ಪೀಕ್‌ ಫಾರ್‌ ಇಂಡಿಯಾ’ ಸ್ಪರ್ಧೆ : `ಜನಪ್ರಿಯ ಮಾತುಗಾರ’ ಪ್ರಶಸ್ತಿ ಗೆದ್ದ ಪ್ರವೀಣ್ ಕುಂಬಾರ್


ಬೆಂಗಳೂರು(ಫೆ.೧೪, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಭವಿಷ್ಯದ ಯುವ ನಾಯಕರನ್ನು ರೂಪಿಸುವ ಉದ್ದೇಶದಿಂದ ಪ್ರತಿಷ್ಠಿತ ದೈನಿಕಗಳಾದ ಟೈಮ್‌ ಆಫ್‌ ಇಂಡಿಯಾ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ಫೆಡರಲ್‌ ಬ್ಯಾಂಕ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸ್ಪೀಕ್‌ ಫಾರ್‌ ಇಂಡಿಯಾ’ ಅಂತರ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಹಾವೇರಿಯ ಪ್ರವೀಣ್ ಕುಂಬಾರ್ “ಜನಪ್ರಿಯ ಮಾತುಗಾರ” (Most popular speaker) ಎಂಬ ಪ್ರಶಸ್ತಿ ಗೆದ್ದಿದ್ದಾರೆ.

Speak for India Karnataka Edition-2018

ದ ಟೈಮ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳು ಫೆಡರಲ್ ಬ್ಯಾಂಕ್ ಸಹಯೋಗದಲ್ಲಿ ಪ್ರತಿವರ್ಷ ಅಂತರ ಕಾಲೇಜು ಚರ್ಚಾ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಭವಿಷ್ಯದ ಯುವ ನಾಯಕರನ್ನು ರೂಪಿಸುವ ದೇಶದ ಅತಿ ದೊಡ್ಡ ಚರ್ಚಾ ಸ್ಪರ್ಧೆ ಇದಾಗಿದೆ. ಸಮಕಾಲೀನ ವಿಚಾರಗಳ ಬಗ್ಗೆ ಯುವಜನತೆಯ ಅಭಿಪ್ರಾಯಗಳ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸುವ ಮತ್ತು ಪ್ರೋತ್ಸಾಹ ನೀಡುವ ಚರ್ಚಾ ಸ್ಪರ್ಧೆಯಾಗಿದೆ. ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲಿ ಚರ್ಚಾಗೋಷ್ಠಿ ನಡೆಸಲಾಗುತ್ತದೆ.

pk1

ಧಾರವಾಡದ ಸಿಎಸ್ಐ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ ಅಭ್ಯಾಸ ಮಾಡುತ್ತಿರುವ ಪ್ರವೀಣ ಕುಂಬಾರ ಅವರು ಈ ವರ್ಷದ ಚರ್ಚಾಗೋಷ್ಠಿಯಲ್ಲಿ ಕರ್ನಾಟಕ ವಿಭಾಗದಿಂದ ಆಯ್ಕೆಯಾಗಿದ್ದರು. ಸ್ಪರ್ಧೆಯಲ್ಲಿ ತಮ್ಮ ಗಟ್ಟಿ ಧ್ವನಿಯನ್ನು ಎತ್ತಿ ಸಮಕಾಲೀನ ವಿಷಯಗಳ ಬಗ್ಗೆ ನಿರ್ಗಳವಾಗಿ ಚರ್ಚಿಸಿ ಕರ್ನಾಟಕದ ಅಗ್ರ 25 ಮಾತುಗಾರರಲ್ಲಿ ಒಬ್ಬರಾಗಿ ಆಯ್ಕೆಗೊಂಡಿದ್ದ ಅವರು ಅಂತಿಮ ಸುತ್ತಿನಲ್ಲಿ ಜನಪ್ರೀಯ ಮಾತುಗಾರ ನಾಗಿ ಮೂಡಿ ಬಂದಿದ್ದಾರೆ. ಕುಂಬಾರ್ ಅವರು ಅಂತಿಮ ಸುತ್ತನ್ನು ತಲುಪಲು ಮತ್ತು ಗೆಲ್ಲಲು ಆನ್ ಲೈನ್ ಮತದಾನ ಚಲಾಯಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

pk

praa praa1


Related News

ಎಂ.ಕಾಂ ಪರೀಕ್ಷೆಯಲ್ಲಿ ಪವಿತ್ರಾಗೆ 6ನೇ ರ‌್ಯಾಂಕ್‌...
views 871
ಮಂಗಳೂರು(ಜ.೦೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಮೇ ತಿಂಗಳಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಕಾಮ್ ಪರೀಕ್ಷೆಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜ...
ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ : ಮೇಘನಾ.ಎಸ್. ಕುಲಾಲ್ ...
views 206
ಮಂಗಳೂರು(ಜ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಇತ್ತೀಚೆಗೆ ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ (ಎಸ್‌ಡಿಎಸ್‌ಐಕೆ) ಸಂಸ್ಥೆಯು ಮಂಗಳೂರಿನ ನೆಹರೂ ಮೈದಾನದಲ್ಲಿ ಆಯ...
ಕುಶಾಲಪ್ಪ ಕುಲಾಲ್ ನೋಟರಿಯಾಗಿ ನೇಮಕ...
views 910
ಮಂಗಳೂರು: ನ್ಯಾಯವಾದಿ ಕುಶಾಲಪ್ಪ ಕುಲಾಲ್ ಅವರು ದ.ಕ ಜಿಲ್ಲಾ ನೋಟರಿಯಾಗಿ ಭಾರತ ಸರಕಾರದಿಂದ ನೇಮಕಗೊಂಡಿದ್ದಾರೆ. ಮೂಲತಃ ಪುತ್ತೂರಿನವರಾದ ಕುಶಾಲಪ್ಪ ಅವರು  ಮಂಗಳೂರಿನ ಕೊಂಚಾಡಿಯಲ...
ಡ್ರಮ್ಸ್‌ ವಾದನ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ಕರ್ನಾಟಕದ ...
views 475
ಬೆಂಗಳೂರು(ಜ.೧೭, ಕುಲಾಲ್ ವರ್ಲ್ಡ್ ನ್ಯೂಸ್):  ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ನಿಂದ ನಡೆಸುವ ರಿದಂ (ಡ್ರಮ್ಸ್ ವಾದನ) ಪರೀಕ್ಷೆಯಲ್ಲಿ 1,2 ಹಾಗೂ 3 ಗ್ರೇಡ್ ನಲ್ಲಿ ಡಿಸ್ಟಿಂಕ್ಷನ...
ವಿಕಲಾಂಗ ಕಾಪು ದಯಾನಂದ ಮೂಲ್ಯರ ಮನೆಗೆ ಬೋರ್‌ವೆಲ್ ಹಾಕಿಸಿದ...
views 2259
ಕಾಪು : ವಿಕಲಾಂಗ ಕಾಪು ಸಮೀಪದ ದಯಾನಂದ ಮೂಲ್ಯರ ಕುಟುಂಬ ಎದುರಿಸುತ್ತಿದ್ದ ನೀರಿನ ಬವಣೆಗೆ `ಕುಲಾಲ ಚಾವಡಿ' ವಾಟ್ಸಪ್ ಗ್ರೂಪಿನ ಸರ್ವ ಸದಸ್ಯರ ಪ್ರಯತ್ನದ ಫಲವಾಗಿ ಶಾಶ್ವತ ಪರಿಹಾರ...

Leave a Reply

Your email address will not be published. Required fields are marked *