ಸೇವಾಸಂಸ್ಥೆಗಳ ಮಹಾ ಸಮ್ಮಿಲನದಲ್ಲಿ `ಕುಲಾಲ್ ವರ್ಲ್ಡ್’ಗೆ ಗೌರವ ಸನ್ಮಾನ


ಸೇವಾ ಸಂಸ್ಥೆಗಳ ಮಹಾ ಸಂಗಮ ಇವರ ವತಿಯಿಂದ ಕಾವೂರಿನ ಸಪ್ತಗಿರಿ ಸಭಾಭವನದಲ್ಲಿ ನಡೆದ ಸೇವಾ ಸಂಸ್ಥೆಗಳ ಮಹಾ ಸಮ್ಮಿಲನ ಕಾರ್ಯಕ್ರಮದಲ್ಲಿ `ಕುಲಾಲ್ ವರ್ಲ್ಡ್’ ನ ಕಿರು ಅಳಿಲು ಸೇವೆಯನ್ನು ಗುರುತಿಸಿ ಆತ್ಮೀಯತೆಯಿಂದ ಗೌರವಿಸಿದ ಸಂಘಟಕ ಮಿತ್ರರಿಗೆ ಹೃದಯಾಂತರಾಳದ ಕೃತಜ್ಞತೆಗಳು. ನಮ್ಮ ಸೇವೆಯಲ್ಲಿ ನಮಗೆ ಸಹಕಾರ ನೀಡಿ, ಪ್ರೋತ್ಸಾಹಿಸಿ, ಹುರಿದುಂಬಿಸಿ ಬೆನ್ನೆಲುಬಾಗಿ ನಿಂತ  ಕುಲಾಲ್ ವರ್ಲ್ಡ್ ನ ಸಮಸ್ತ ಸದಸ್ಯರಿಗೆ ಈ ಗೌರವವನ್ನು ಪ್ರೀತಿಯಿಂದ ಸಮರ್ಪಿಸುತ್ತಿದ್ದೇವೆ.

sanmana

ಮಂಗಳೂರು(ಮಾ.೧೬, ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಸೇವಾ ಸಂಸ್ಥೆಗಳ ಮಹಾ ಸಂಗಮ ಇವರ ವತಿಯಿಂದ ಕಾವೂರಿನ ಸಪ್ತಗಿರಿ ಸಭಾಭವನದಲ್ಲಿ ನಡೆದ ಸೇವಾ ಸಂಸ್ಥೆಗಳ ಮಹಾ ಸಮ್ಮಿಲನ ಕಾರ್ಯಕ್ರಮದಲ್ಲಿ `ಕುಲಾಲ್ ವರ್ಲ್ಡ್’ ನ ಸಮಾಜಸೇವೆಯನ್ನು ಗುರುತಿಸಿ ಗೌರವಿಸಲಾಯಿತು. `ಕುಲಾಲ್ ವರ್ಲ್ಡ್’ ನ ಪರವಾಗಿ ಗ್ರೂಪ್ ನ ನಿರ್ವಾಹಕರಾದ ರಂಜಿತ್ ಕುಮಾರ್ ಮೂಡಬಿದ್ರೆ ಅವರು ಗೌರವ ಸ್ವೀಕರಿಸಿದರು.

sanman
`ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗವು ಹಲವು ಬಡ ರೋಗಿಗಳನ್ನು ಗುರುತಿಸಿ ಲಕ್ಷಾಂತರ ರೂ. ಧನ ಸಂಗ್ರಹಿಸಿ ನೀಡಿದೆ. ಸೇವಾ ಸಂಸ್ಥೆಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಇತರ ಹಲವು ಸೇವಾ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಸೇವಾ ಧನ ವಿತರಣೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಹ್ಯೂಮಾನಿಟಿ ಟ್ರಸ್ಟ್ ನ ರೋಷನ್ ಬೆಳ್ಮಣ್, ಸಾಮಾಜಿಕ ಕಾರ್ಯಕರ್ತ ಸೌರಾಜ್ ಕುಡ್ಲ, ಸಂಘಟಕ ಚಂದ್ರಶೇಖರ್ ಪೂಜಾರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

sanman4


Related News

ಕೃಷ್ಣಾಪುರ ಕುಲಾಲ ಸಂಘ : ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ...
views 348
ಮಂಗಳೂರು(ಜೂ.೦೬, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಂಘ (ರಿ) ಕೃಷ್ಣಾಪುರ ಇದರ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇ.70 ಕ್ಕಿಂ...
ಮಕ್ಕಳಿಗೆ ಶಿಕ್ಷಣ ಕೊಡಿಸುವವರೆಗೂ ಕುಂಬಾರ ಸಮುದಾಯದ ಬಡತನ ನ...
views 3321
ತುಮಕೂರು: ಕುಂಬಾರರ ಕುಲಕಸುಬು ಕುಂಬಾರಿಕೆ ಮೂಲೆ ಗುಂಪಾಗುತ್ತಿದೆ. ಕುಂಬಾರರ ಮಕ್ಕಳಿಗೆ ಶಿಕ್ಷಣ ಕೊಡಿಸುವವರೆಗೂ ಸಮುದಾಯದಲ್ಲಿ ಬಡತನ ನಿವಾರಣೆ ಆಗುವುದಿಲ್ಲ ಎಂದು ರಾಜ್ಯ ಕುಂಬಾರ...
ಡಿ.24ರಂದು ಅಳದಂಗಡಿ ಶಿರ್ಲಾಲು ಕುಲಾಲ ಸಂಘದ ಕ್ರೀಡಾಕೂಟ ಮತ...
views 445
ಬೆಳ್ತಂಗಡಿ (ಡಿ,೨೨, ಕುಲಾಲ್ ವರ್ಲ್ಡ್ ನ್ಯೂಸ್): ಅಳದಂಗಡಿ ಸಮೀಪದ ಶಿರ್ಲಾಲು ಮೂಲ್ಯರ ಯಾನೆ ಕುಲಾಲರ ಸಂಘದ ವಾರ್ಷಿಕೋತ್ಸವ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟವು ಡಿ.24, ಆದಿತ್ಯವಾರದ...
ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿಗೆ ಸತೀಶ ಕುಲಾಲ್ ...
views 1831
ಉಡುಪಿ : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಉಡುಪಿ ಜಿಲ್ಲೆ ಇದರ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸತೀಶ ಕುಲಾಲ ನಡೂರು ಹಾಗೂ ಕುಂದಾಪುರ ವಿಧಾನಸಭಾ ಕಾರ್ಯಕಾರಿಣಿ ಸಮಿತ...
ಮೈಸೂರು ಜಿಲ್ಲಾ ಕುಂಬಾರ ಮಹಿಳಾ ಸಂಘದ ವತಿಯಿಂದ ಪ್ರತಿಭಾ ಪು...
views 1372
ಮೈಸೂರು : ಸಮುದಾಯದ ಬೆಳವಣಿಗೆಯ ಸಮಯದಲ್ಲಿ ವಿಭಜನೆಗೆ ಅವಕಾಶ ಮಾಡಿಕೊಡಬಾರದು ಎಂದು ಶಾಸಕ ವಾಸು ಹೇಳಿದರು. ಜಿಲ್ಲಾ ಕುಂಬಾರ ಮಹಿಳಾ ಸಂಘದ ವತಿಯಿಂದ ಖಾಸಗಿ ಹೋಟೆಲ್ ನಲ್ಲಿ ಆಯೋಜ...

Leave a Reply

Your email address will not be published. Required fields are marked *