ಸೂಕ್ಷ್ಮ ಮನಸ್ಸಿನ ಹವ್ಯಾಸಿ ಚಿತ್ರಕಲಾವಿದ ಕೀರ್ತಿ ವಿಕಾಸ್


ಬೆಂಗಳೂರು(ಮಾ.೦೯, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬಿಳಿ ಹಾಳೆಯ ಮೇಲೆ ವ್ಯಕ್ತಿ ತನ್ನ ಹೃದಯಾಂತರಾಳದ ಭಾವನೆಗಳನ್ನ ಅನೇಕ ರೀತಿಯಿಂದ ಅಭಿವ್ಯಕ್ತಗೊಳಿಸಬಹುದು. ಒಬ್ಬ ಕವಿ ತನ್ನ ಭಾವನೆಗಳನ್ನ ಪ್ರಖರ ಶಬ್ದ ರೂಪಕ್ಕೆ ತರಬಲ್ಲ, ಒಬ್ಬ ಗಾಯಕ ಮನ ಮಿಡಿಯುವಂತೆ ತನ್ನ ಗಾಯನದ ಮೂಲಕ ಹೊರಹಾಕಬಲ್ಲ, ಹಾಗೆಯೇ ಒಬ್ಬ ಚಿತ್ರ ಕಲಾವಿದ ತನ್ನ ವೈಶಿಷ್ಟವುಳ್ಳ ಚಿತ್ರಗಳ ಮೂಲಕ ತನ್ನಲ್ಲಿರುವ ಭಾವನೆಗಳನ್ನು, ಕಲ್ಪನೆಗಳನ್ನು ಬಿಳಿ ಹಾಳೆಗೆ ವರ್ಗಾಯಿಸಬಲ್ಲ. ಅಂತಹ ನೂರಾರು ಚಿತ್ರ ಕಲಾವಿದರು ನಮ್ಮ ನಿಮ್ಮ ನಡುವೆ ಕಾಣಸಿಗುತ್ತಾರೆ. ಇಂತಹ ಚಿತ್ರಕಲೆಯಲ್ಲಿ ಉತ್ಕೃಷ್ಟತೆಯನ್ನು ಭಾವ ಉಕ್ಕಿಸುವ ತಮ್ಮ ಗೆರೆಗಳಿಂದ ಸದಾ ನವೀನತೆಯನ್ನು ಉಣಬಡಿಸುತ್ತಿರುವ ಹವ್ಯಾಸಿ ಚಿತ್ರ ಕಲಾವಿದ ಬೆಂಗಳೂರಿನ ಕೀರ್ತಿ ವಿಕಾಸ್ ಕೂಡಾ ಒಬ್ಬರು. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಬೆಂಗಳೂರಿನ ನೊಕೀಯಾ ಕಂಪನಿಯಲ್ಲಿ ದುಡಿಯುತ್ತಿರುವ ಇವರು ಮೂಲತಃ ಮಂಗಳೂರು ಮಣ್ಣಗುಡ್ಡ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಶಶಿಧರ್ ಎಂ ಮತ್ತು ಶಿಕ್ಷಕಿ ಕಸ್ತೂರಿ ದಂಪತಿಗಳ ಪುತ್ರ.

keerti1

ಕೀರ್ತಿ ವಿಕಾಸ್ ತಮ್ಮ ವೃತ್ತಿ ಜೀವನದ ಬಿಡುವಿನ ಸಮಯದಲ್ಲಿ ಚಿತ್ರಕಲೆಯ ವಿವಿಧ ಕಾರ್ಯಗಾರಗಳಿಗೆ ಭೇಟಿ ನೀಡುತ್ತಾ ಅಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಚಿತ್ರಕಲೆಯ ವೃತ್ತಿಪರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತನ್ನ ಹೊಸ ಪ್ರಯತ್ನಗಳ ಮೂಲಕ ಬಿಳಿ ಹಾಳೆಯ ಮೇಲೆ ತನ್ನ ಕುಂಚದಿಂದ ಚಿತ್ರಗಳನ್ನು ಬಿಡಿಸುತ್ತ, ಮೆರಗು ತರುವ ವರ್ಣಗಳನ್ನು ತುಂಬುತ್ತಾ, ಚಿತ್ರಕಲೆಯ್ಲಲೂ ಸಾಧನೆಗೈಯುವ ಮಹಾದಾಸೆ ಹೊಂದಿದ್ದಾರೆ. ಅವರು ಸಾಂಪ್ರದಾಯಿಕ, ಜಲವರ್ಣ, ತೈಲವರ್ಣ, ಆಕ್ರಲಿಕ್, ಪೆನ್ಸಿಲ್ ವರ್ಕ್‌, ಜನಪದ ಶೈಲಿಯ ವರ್ಲಿ ಚಿತ್ರಕಲೆ ಹೀಗೆ ವಿವಿಧ ವಿಭಾಗಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.

keerti2

ಬಾಲ್ಯದಲ್ಲೇ ಚಿಗುರೊಡೆದ ಕಲೆ

ಬಾಲ್ಯದಲ್ಲೇ ಇತರ ಕಲಾವಿದರ ಚಿತ್ರವನ್ನು ನೋಡಿ ಆಕರ್ಷಿತನಾಗಿಡ್ಡ ಕೀರ್ತಿ, ಅದೇ ರೀತಿಯ ಇನ್ನೊಂದು ಚಿತ್ರವನ್ನು ಯಥಾವತ್ತಾಗಿ ಚಿತ್ರಿಸಿ, ಸಹಪಾಠಿಗಳಿಗೆ ತೋರಿಸಿ ಭೇಷ್ ಎನಿಸಿಕೊಂಡಿದ್ದರು. ತನ್ನ ಚಿತ್ರಕ್ಕೆ ಸ್ನೇಹಿತರ, ಪೋಷಕರ ಪ್ರಶಂಸೆ ಪಡೆದು ಆ ಕಲೆಯಲ್ಲಿ ಮಗ್ನನಾಗಿ ಹವ್ಯಾಸವಾಗಿ ಬೆಳೆಸಿಕೊಂಡಿದ್ದ ಅವರು ೯ನೇ ತರಗತಿ ಕಲಿಯುವ ಹೊತ್ತಿಗೆ ಮುಖದ ಚಿತ್ರವನ್ನು ಯಥಾವತ್ತಾಗಿ ಬಿಡಿಸುವಲ್ಲಿ ಪಳಗಿದ್ದರು. ಅಲ್ಲದೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಆದರೆ ಶಾಲಾ ಕಲಿಕೆಯ ಜೊತೆಗೆ ಈ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಗಲಿಲ್ಲ. ಆ ವೇಳೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಲು ಯೋಜಿಸಿದ ಪರಿಣಾಮ ಅವರು ಸಿಇಟಿ ಪರೀಕ್ಷೆಯಲ್ಲಿ 1200ರೊಳಗಿನ ರಾಂಕ್ ಪಡೆದರು. ಇದರ ಪರಿಣಾಮ ಅವರು ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಯಿತು.

keerti7
ಕಾಲೇಜು ಮುಗಿಸಿ ಉದ್ಯೋಗಕ್ಕೆ ಸೇರಿದ ಬಳಿಕ ಕೆಲಸದ ಜಂಜಾಟದ ಮಧ್ಯೆ ತನ್ನಲ್ಲಿದ್ದ ಕಲಾ ಪ್ರತಿಭೆಯೊಂದನ್ನು ಎಲ್ಲೋ ಕಳೆದುಕೊಂಡಂತೆ ಭಾಸವಾಗತೊಡಗಿತು. ತನ್ನೊಳಗಿನ ಕಲಾಭಿರುಚಿ ಅಭಿವ್ಯಕ್ತಗೊಳ್ಳಲು ಮನಸೊಳಗೆ ಸಿದ್ಧತೆ ನಡೆಸಿದರು. ತಡಮಾಡದೇ ತನ್ನ ವಿಪರೀತ ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ತನ್ನೊಳಗೆ ಅಡಗಿಕೊಂಡಿರುವ ಕಲಾತ್ಮಕತೆ ಮತ್ತು ಸೃಜನಾತ್ಮಕತೆಗೆ ಕನ್ನಡಿ ಹಿಡಿಯಲು ಯತ್ನಿಸುವ ಕೀರ್ತಿ ವಿಕಾಸ್, ಕಾಲ್ಪನಿಕ ಚಿತ್ರಗಳನ್ನು ರಚಿಸುವ ಮೂಲಕ ಆತ್ಮತೃಪ್ತಿಯನ್ನು ಪಡೆಯಲು ಯತ್ನಿಸುತ್ತಾರೆ.

vikas1

ನಿತ್ಯದ ಬದುಕಿನ ಜಂಜಾಟಗಳಲ್ಲಿ ಕಳೆದು ಹೋಗಿದ್ದ ಕೀರ್ತಿ ಅವರ ಒಳಗೊಳಗೆ ಕಲೆಯ ತುಡಿತ ಮಿಡಿಯುತ್ತಲೇ ಇತ್ತು. ಕಲೆಯ ವಿನಃ ಅವರ ಬದುಕಿನಲ್ಲಿ ಸ್ವಾರಸ್ಯವೂ ಇರಲಿಲ್ಲ, ಅವರಿಗೆ ಅಂತಹ ಯಾಂತ್ರಿಕ ಬದುಕಿನಲ್ಲಿ ಉತ್ಸಾಹವೂ ಇರಲಿಲ್ಲ. ಕಲೆ ಅನ್ನುವುದು ಸೃಜನಶೀಲ ಸಾಧನೆ. ಇದಕ್ಕೆ ಸಾಕಷ್ಟು ಬದ್ಧತೆ ಹಾಗೂ ಸಂಯಮದ ಅಗತ್ಯವಿದೆ. ಮಾನಸಿಕವಾಗಿ ಅತ್ಯಂತ ಹೆಚ್ಚಿನ ಒತ್ತಡ ಹೇರಿದಾಗ, ಕಲ್ಪನೆಯಲ್ಲಿ ತೀವ್ರ ತುಡಿತವಿದ್ದಾಗ ಹಾಗೂ ಆತ್ಮಕ್ಕೆ ಥೆರಪಿ ನೀಡಿದಾಗ ಮಾತ್ರ ಅತ್ಯುತ್ತಮ ಕಲೆಯೊಂದು ಹೊರಹೊಮ್ಮಲು ಸಾಧ್ಯ ಅನ್ನುವುದು ಕೀರ್ತಿ ಅವರ ದೃಢವಾದ ನಂಬಿಕೆ.

keerti4

ಕೇವಲ ಉದ್ಯೋಗವಷ್ಟೇ ಬದುಕಲ್ಲ, ಇದರ ಜೊತೆಗೆ ಇತರರಿಗಿಂತ ಭಿನ್ನವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಯೋಚಿಸಿದ ಅವರು, ತನ್ನ ಆಸಕ್ತಿಯ ಕ್ಷೇತ್ರದಲ್ಲಿ ತರಬೇತಿ ಪಡೆಯಲು ತೀರ್ಮಾನಿಸುತ್ತಾರೆ. ಇದಕ್ಕಾಗಿ ಎಕೆ ಆರ್ ಸ್ಕೂಲ್ ಆಫ್ ಆರ್ಟ್ ಗೆ ಸೇರಿ ಅಲ್ಲಿಯ ಶಿಕ್ಷಕ ಅಶೋಕ್ ಕುಮಾರ್ ರಾಮಸ್ವಾಮಿ ಅವರ ಬೆಂಬಲ ಮತ್ತು ಮಾರ್ಗದರ್ಶನದಿಂದ ಚಿತ್ರಕಲೆಯ ಎಲ್ಲಾ ಮಜಲುಗಳ ಬಗ್ಗೆ ತಿಳಿದುಕೊಂಡು ಮತ್ತಷ್ಟು ನೈಪುಣ್ಯತೆಯನ್ನು ಪಡೆಯುತ್ತಾರೆ. ವಾಟರ್ ಪೇಂಟಿಂಗ್, ಕ್ಯಾನ್ವಾಸ್ ಪೇಂಟಿಂಗ್, ಆರ್ಕ್ ಲಿಕ್, ಆಯಿಲ್ ಪೇಂಟಿಂಗ್ ಬಗ್ಗೆ ಮತ್ತಷ್ಟು ತಿಳಿದುಕೊಂಡು ನಿಸರ್ಗ, ಭಾವಚಿತ್ರ ಮತ್ತಿತರ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಿ ಇಂದು ಓರ್ವ ಉತ್ತಮ ಚಿತ್ರ ಕಲಾವಿದ ಎಂದು ಗುರುತಿಸಿಕೊಂಡಿದ್ದಾರೆ.

keerti8

ಕೀರ್ತಿ ಅವರು ಪ್ರತಿ ಚಿತ್ರವೂ ಮೊದಲ ಬಾರಿಗೆ ನೋಡುವಾಗ ವ್ಹಾ..! ಎಂದು ಉದ್ಗರಿಸುವಂತೆ ಮಾಡುತ್ತದೆ. ಅವರ ಚಿತ್ರಗಳು ಅನೇಕ ವೈಶಿಷ್ಟ್ಯಗಳಿಂದ ಕೂಡಿದ್ದು, ಅನೇಕ ಪ್ರಂಶಸೆಗಳನ್ನು ಪಡೆದಿವೆ. 2015 ಮತ್ತು 2017 ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ನ ಸ್ಪರ್ಧೆಯಲ್ಲಿ ಭಾಗವಹಿಸಿ ತನ್ನ ಕೌಶಲ್ಯವನ್ನು ತೋರ್ಪಡಿಸಿರುವ ಅವರು, 2016ರಲ್ಲಿ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಜರುಗಿದ ABAI ಫೆಸ್ಟ್ ಸಾಂಪ್ರದಾಯಿಕ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಓಪನ್ ಸ್ಟ್ರೀಟ್ ಈವೆಂಟ್, ಕಾಲುವೆಗಳ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ‘Ripples’ ವತಿಯಿಂದ ಸ್ಯಾಂಕಿ ಟ್ಯಾಂಕಿನಲ್ಲಿ ನಡೆದ ಆರ್ಟ್ ಮ್ಯಾಟರ್ಸ್ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಕೀರ್ತಿ ಅವರು ಬೆಂಗಳೂರು ಆಸುಪಾಸಿಯಲ್ಲಿ ನಡೆದ ಅನೇಕ ಆರ್ಟ್ ಕಾಂಪ್ ಗಳಲ್ಲಿ ತಮ್ಮ ಕಲಾಪ್ರತಿಭಾ ಪ್ರದರ್ಶನ ತೋರ್ಪಡಿಸಿದ್ದಾರೆ.

keerti6

ತನ್ನ ವೃತ್ತಿಯ ಜೊತೆಗೆ ಪ್ರವೃತ್ತಿಗೂ ಸಮಯ ಮೀಸಲಿರಿಸಿ ಸೃಜನಶೀಲ ಕಲೆಯನ್ನು ಹೊರಹಾಕುತ್ತಾ ತಾವು ಮಾಡುತ್ತಿರುವ ಈ ಕೆಲಸವನ್ನು ಅತ್ಯಂತ ಇಷ್ಟಪಡುತ್ತಾರೆ ಹಾಗೂ ಈ ಕಲಾ ರಚನೆಯೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಂಡಿದ್ದಾರೆ. ಕಲೆಯನ್ನು ಪ್ರೀತಿಸುವ ಅವರು ಇದೇ ಕ್ಷೇತ್ರದಲ್ಲಿ ಸಾಧಿಸುವ ಕನಸಿಟ್ಟುಕೊಂಡಿದ್ದಾರೆ. ಅವರ ಕನಸುಗಳು ನನಸಾಗಲಿ, ಕಲಾಕಾರನಾಗಿ ಎಲ್ಲೆಡೆ ಖ್ಯಾತಿ ಹೊಂದಿ, ಯಶಸ್ವಿ ಚಿತ್ರಕಲಾವಿದನಾಗಲಿ ಎಂದು ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಶುಭ ಹಾರೈಕೆ.

vikaskeerti5vikas5vikas4


Related News

ತುಳು ರಂಗಭೂಮಿಯಲ್ಲಿ ಬೆಳಗುತ್ತಿರುವ ಜ್ಯೋತಿ.. !...
views 2394
(ಕುಲಾಲ್ ವರ್ಲ್ಡ್ ಡಾಟ್ ಕಾಮ್ 17 ಜೂನ್ 2018): ಶ್ರೀಮಂತ ತುಳು ರಂಗಭೂಮಿಯಲ್ಲಿ ಪ್ರತಿಭಾವಂತ ಕಲಾವಿದರಿಗೆ ಕೊರತೆಯಿಲ್ಲ. ಆದರೆ ಮಹಿಳಾ ಕಲಾವಿದೆಯರ ಸಂಖ್ಯೆ ವಿರಳವೆಂದೇ ಹೇಳಬಹುದು. ...
ನಿಶ್ಮಿತಾ ಕೆ ಮೂಲ್ಯಗೆ `ಮಡಿಲು ಸಮ್ಮಾನ್ ಪುರಸ್ಕಾರ 2018&#...
views 186
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಬದಿಯಡ್ಕದ ನೃತ್ಯ ಕೆಲಾವಿದೆ ನಿಶ್ಮಿತಾ ಅವರು ಮಡಿಲು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನೀಡಲಾಗುವ `ಮಡಿಲು ಸಮ್ಮಾನ್ ಪುರಸ್ಕಾರ 2...
ಕಲಾತ್ಮಕ ಸಿನಿಮಾ ರಂಗದ ಭರವಸೆ ರಾಘುವೇಂದ್ರ ಶಿರಿಯಾರ...
views 315
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಕಠಿಣ ಪರಿಶ್ರಮ, ಕೆಲಸದ ಬಗ್ಗೆ ಶ್ರದ್ಧೆ, ಪ್ರಾಮಾಣಿಕ ದುಡಿಮೆ ಇದ್ದರೆ ಪ್ರತಿಯೊಬ್ಬರು ಸಾಧಕರಾಗಬಹುದು ಎನ್...
ಭರವಸೆಯ ವಾಲಿಬಾಲ್ ಪ್ರತಿಭೆ ಸೌರವ್ ಕುಲಾಲ್...
views 1504
ಮಂಗಳೂರು(ನ.೧೯, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಕ್ರೀಡಾ ಮನೋಭಾವ ಬೆಳೆಸಿ, ಪ್ರೋತ್ಸಾಹಿಸಿದರೆ ಅವರಲ್ಲಿ ಅಡಗಿರುವ ಸ್ತುಪ್ತ ಪ್ರತ...
ಸಾಧನೆಯ ಹಾದಿಯಲ್ಲಿ ಯುವ ಚಿತ್ರ ಕಲಾವಿದ ಯೋಗೀಶ್ ಕಡಂದೇಲು...
views 443
ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಲೆ ಎಂಬುದು ಯಾರಿಗೆ ಒಲಿಯುತ್ತದೆ ಎಂಬುದು ಯಾರಿಗೂ ಅರಿವಿಗೆ ಇರದ ಸಂಗತಿ. ಬದುಕಿನಲ್ಲಿ ಕಲೆಯಿಂದಲೇ ನೆಲೆ ಕಂಡುಕೊಂಡವರು ಹಲವರು. ತಮ್ಮ ಬದ...

Leave a Reply

Your email address will not be published. Required fields are marked *