ಸಿನಿ ಕುಂದಾಪ್ರ ಕಿರು ಚಿತ್ರೋತ್ಸವ : ರಾಘವೇಂದ್ರ ಶಿರಿಯಾರರ `ಅಜ್ಜಿ ಮನೆ’ಗೆ ಪ್ರಥಮ ಸ್ಥಾನ


ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೀಜಾಡಿ ಐಶ್ವರ್ಯ ಮೀಡಿಯಾ ಆಯೋಜಿಸಿರುವ ಸಿನಿ ಕುಂದಾಪುರ 2019, ಕುಂದಾಪುರ ಭಾಗದ ಪ್ರಥಮ ಕಿರುಚಿತ್ರ ಸ್ಪರ್ಧೆಯಲ್ಲಿ ಕುಲಾಲ ಸಮಾಜದ ರಾಘವೇಂದ್ರ ಶಿರಿಯಾರ ನಿರ್ದೇಶನದ `ಅಜ್ಜಿ ಮನೆ’ ಪ್ರಥಮ ಸ್ಥಾನ ಪಡೆದಿದೆ.

ajji mane
ಫೆಬ್ರವರಿ 16ರಂದು ಕೋಟೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಿರುಚಿತ್ರ ಸ್ಪರ್ಧೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕುಂದಾಪುರ ಕನ್ನಡ ಭಾಷೆಯನ್ನ ಬಳಸಿ `ಅಜ್ಜಿ ಮನೆ’ ಚಿತ್ರವನ್ನು ಸುಂದರವಾಗಿ ಕಟ್ಟಿಕೊಡಲಾಗಿದ್ದು, ಕುಂದಾಪುರ ಭಾಗದ ಅಜ್ಜಿ ಮನೆಯ ,ಅಜ್ಜಿ ಮತ್ತು ಮೊಮ್ಮಗಳ ಭಾವನೆಗಳ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆ. ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನ ರಾಘವೇಂದ್ರ ಶಿರಿಯಾರ, ಛಾಯಾಗ್ರಹಣಕ್ಕಾಗಿ ರೋಹಿತ್ ಅಂಪಾರು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸ್ಪರ್ಧೆಗೆ ಆಗಮಿಸಿದ 12 ಕಿರುಚಿತ್ರಗಳ ಪೈಕಿ 5 ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 1 ಕಿರುಚಿತ್ರಕ್ಕೆ ಶ್ರೇಷ್ಠ ಚಿತ್ರ, 2 ಕಿರುಚಿತ್ರಗಳಿಗೆ ಉತ್ತಮ ಚಿತ್ರ, ಇನ್ನೆರಡು ಚಿತ್ರಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್‌ಕುಮಾರ್‌ ಸಮಾರಂಭ ಉದ್ಘಾಟಿಸಿ ಶುಭಕೋರಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಯಾಕೂಬ್‌ ಖಾದರ್‌ ಗುಲ್ವಾಡಿ, ಪ್ರಸಿದ್ಧ ಚಲನಚಿತ್ರ ಸಂಕಲನಕಾರ ಬಿ.ಎಸ್‌.ಕೆಂಪರಾಜು ಬೆಂಗಳೂರು, ರಂಗಕರ್ಮಿ ಸದಾನಂದ ಬೈಂದೂರು, ಐಶ್ವರ್ಯ ಮೀಡಿಯಾ ಮುಖ್ಯಸ್ಥ ರಾಘವೇಂದ್ರ ಬೀಜಾಡಿ, ಕೃಷ್ಣಮೂರ್ತಿ ಪಿ.ಕೆ., ರವೀಂದ್ರ ಶೆಟ್ಟಿ, ನಿವೃತ್ತ ಬಿಇಓ ಗೋಪಾಲ ಶೆಟ್ಟಿ, ಶ್ರೀನಿವಾಸ ಗಾಣಿಗ, ಶಶಾಂಕ್‌ ಮಂಜ, ಮಿತ್ರಾ ಮಂಜ ಮತ್ತಿತರರು ಉಪಸ್ಥಿತರಿದ್ದರು.


Related News

`ಅಣ್ಣು’ ಕಲಾತ್ಮಕ ಸಿನಿಮಾ ಚಿತ್ರಿಕರಣ ಶುಭಾರಂಭ...
views 1139
ಉಡುಪಿ: ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಕಥೆಗಾರರಾಗಿರುವ ಮಂಜುನಾಥ್ ಕುಲಾಲ್ ಹಿಲಿಯಾಣ ಅವರು ಬರೆದ "ಅಣ್ಣು" ಎಂಬ ನೀಳ್ಗತೆಯನ್ನಾಧರಿಸಿ ರಚಿತಗೊಂ...
ಯಕ್ಷಲೋಕದ ಭರವಸೆಯ ಕಲಾವಿದ ಗಣೇಶ್ ಚಂದ್ರಮಂಡಲ...
views 1637
ಕುಲಾಲ್ ವರ್ಲ್ಡ್ ಡಾಟ್ ಕಾಮ್ : ``ಟಿ.ವಿ, ಸಿನಿಮಾಗಳ ಜನಪ್ರಿಯತೆಯಿಂದ ಯಕ್ಷಗಾನ ಕಲೆ ಇಂದು ಹತ್ತು ಹಲವು ಎಡರು-ತೊಡರುಗಳನ್ನು ಎದುರಿಸುತ್ತಿದೆ. ಯಕ್ಷಗಾನವನ್ನು ತನ್ನ ಪಾರಂಪರಿಕ ...
ಮಧುರ ಕಂಠಸಿರಿಯ ಯುವ ಭಾಗವತ ನಾಗೇಶ್ ಕುಲಾಲ್ ನಾಗರಕೊಡಿಗೆ...
views 2781
(ಕುಲಾಲ್ ವರ್ಲ್ಡ್ ಡಾಟ್ ಕಾಮ್) ಭಾಗವತನೆಂದರೆ ಯಕ್ಷಗಾನದ ಮುಖ್ಯ ಸೂತ್ರಧಾರಿ. ಸಮಸ್ತ ಪ್ರಸಂಗ ಇವರ ನೇತೃತ್ವದಲ್ಲೇ ನಡೆಯುವುದು. ಯಕ್ಷಗಾನ ಪದ್ಯವನ್ನು ರಾಗ ಸಮೇತ ಹಾಡುವುದು ಇವರ ಕ...
ಖ್ಯಾತ ಯಕ್ಷಗಾನ ವೇಷಧಾರಿ ದಿ. ಬಾಬು ಕುಡ್ತಡ್ಕ...
views 819
ವೇಷಧಾರಿ, ಪ್ರಸಂಗಕರ್ತ, ಸಂಘಟಕ ಬಾಬು ಕುಡ್ತಡ್ಕ ಜನಿಸಿದ್ದು 1944ರಲ್ಲಿ. ಇವರು ಕಿಂಞಣ್ಣ ಮೂಲ್ಯ-ಕಾವೇರಿ ದಂಪತಿಯ ಸುಪುತ್ರ. ಕಾವು ಕಣ್ಣನ್, ಬಿ. ದಾಸಪ್ಪ ಇವರಿಂದ ಯಕ್ಷಗಾನಭ್ಯಾ...
ಅಣ್ಣ-ತಂಗಿಯ ಈ ಬಂಧ : `ರಾರಾ’ ಚಿತ್ರದ ಅನುಬಂಧ...
views 1068
ತುಳು ಚಿತ್ರರಂಗದಲ್ಲಿ ಈಗ ಒಂದಷ್ಟು ಹೊಸಬಗೆಯ ಚಿತ್ರಗಳು ಬರುತ್ತಿವೆ. ತುಳುನಾಡಿನ ಜನ ಕೂಡ ಸಿನಿಮಾದತ್ತ ಹೆಚ್ಚು ಒಲವು ತೋರಿದ್ದೂ ಉಂಟು. ಈಗ ಹೊಸ ಸುದ್ದಿಯೆಂದರೆ, ಇದೇ ಮೊದಲ ಬಾರಿಗೆ ...

Leave a Reply

Your email address will not be published. Required fields are marked *