ಸಮಾಜಮುಖೀ ಸೇವೆಯಲ್ಲಿ ಸಾರ್ಥಕ್ಯ ಕಂಡ ಅಪರೂಪದ ಜೋಡಿ !


ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಸದಾನಂದ ಹಾಗೂ ಪುಷ್ಪಾ ದಂಪತಿ

sadanand
ಕುಲಾಲ್ ವರ್ಲ್ಡ್ ಡಾಟ್ ಕಾಮ್ : ವಿವಾಹವಾಗಿ 50 ವಸಂತಗಳನ್ನು ಕಂಡ ಜನಸೇವಕರಾದ ಸದಾನಂದ- ಪುಷ್ಪಾ ದಂಪತಿಗಳು ಮಂಗಳೂರಿನ ಕುಲಾಲ ಸಮುದಾಯದ ಅಪರೂಪದ ಜೋಡಿ. 1969 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಂಗಳೂರು ನಗರದ ಹೃದಯ ಭಾಗವಾದ ರೈಲ್ವೆ ಸ್ಟೇಷನ್ ಬಳಿಯ ಮಾರ್ನಮಿಕಟ್ಟೆಯ ಸುಶೀಲ ಸದನದ ಅಂದಿನ ಖ್ಯಾತ ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದ ಕೃಷ್ಣ ಸ್ನಫ್ ವರ್ಕ್ಸ್ ನ ಮಾಲಕರಾದ ಶ್ರೀ ನಾರ್ಣಪ್ಪರವರ ಹಿರಿಯ ಪುತ್ರ ಅಂದೇ ಕಾನೂನು ಪದವೀಧರರಾಗಿದ್ದ ಶ್ರೀ ಸದಾನಂದರವರು, ಮಂಗಳೂರಿನ ಹೊರವಲಯದ ಬಜಾಲ್ ನ ಉದ್ಯಮಿ ಹಾಗು ಕಂಟ್ರಾಕ್ಟರ್ ಆಗಿದ್ದ ಬಜಾಲ್ ಪೂವಪ್ಪನವರ ಹಿರಿಯ ಪುತ್ರಿಯಾದ ಪುಷ್ಪಾರವರು 2019ಕ್ಕೆ 50 ಸಂವತ್ಸರಗಳನ್ನ ಪೂರೈಸಿ ಬಂಧು ಬಾಂಧವರ ಜೊತೆ ಅದರ ಸಂತಸವನ್ನ ಸಡಗರ ಸಂಭ್ರಮದಿಂದ ಹಂಚಿಕೊಂಡರು.

sadanand2

ಇಡೀ ಕರ್ನಾಟಕ ರಾಜ್ಯದಲ್ಲಿ ಕುಂಬಾರ ಸಮುದಾಯದ ಅತೀ ಹಿರಿಯ ಸಂಘಟನೆಯಾದ ಅವಿಭಜಿತ ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ್ ಸಂಘ 1927 ರಲ್ಲಿ ಆರಂಭವಾಗಿ ಕ್ರಾಂತಿಯನ್ನು ಮಾಡಿರುವುದು ಹೆಚ್ಚಿನವರಿಗೆ ತಿಳಿದಿದೆ. ಎರಡೆರಡು ದೇವಸ್ಥಾನಗಳನ್ನ ನಡೆಸಿಕೊಂಡು ಧಾರ್ಮಿಕ ಸೇವೆಯ ಜೊತೆ ಸಾಮಾಜಿಕ , ಶೈಕ್ಷಣಿಕ ಸೇವೆ ಮಾಡಿಕೊಂಡು ಬರುವಲ್ಲಿ ಈ ಎರಡು ಕುಟುಂಬಗಳು ದೊಡ್ಡಮಟ್ಟದ ಕೊಡುಗೆಯನ್ನು ನೀಡಿವೆ. ಶ್ರೀದೇವಿ ದೇವಸ್ಥಾನ, ಶ್ರೀ ವೀರನಾರಾಯಣ ದೇವಸ್ಥಾನ, ಮಾಣಿಲ ಮಠ ಮುಂತಾದ ದೇವಸ್ಥಾನ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ, ಕರ್ನಾಟಕ ರಾಜ್ಯ ಕುಂಬಾರರ ಮಹಿಳಾ ಸಂಘ, ಕರ್ನಾಟಕ ರಾಜ್ಯ ಕರಾವಳಿ ಕುಲಾಲ್ ಕುಂಬಾರ ಯುವ ವೇದಿಕೆ ಇತ್ಯಾದಿ ಸಂಘಟನೆಗಳಿಗೆ ಬೆನ್ನುಲುಬಾಗಿ ನಿಂತವರಲ್ಲಿ ಈ ಇಬ್ಬರು ದಂಪತಿಗಳು ಪ್ರಮುಖರು. ಮಂಗಳೂರಿನ ದೇವಿ ದೇವಸ್ಥಾನ ವೀರನಾರಾಯಣ ದೇವಸ್ಥಾನ ಮತ್ತು ಮಂಗಳಾ ದೇವಿಯ ಕುಲಾಲ ಭವನಗಳಲ್ಲಿ ಜರುಗಿದ ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘ, ಮಹಿಳಾ ಸಂಘ ಮತ್ತು ಯುವ ವೇದಿಕೆಯ ಮೂರೂ ರಾಜ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿದ್ದುಕೊಂಡು ಕಿರಿಯರಿಗೆ ಮಾರ್ಗದರ್ಶನ ಕೊಟ್ಟ ಹಿರಿಯ ಜೀವ ಇವರಿಬ್ಬರು.

sadanand1

ಸಾಮಾಜಿಕ ಚಿಂತನೆಯ ಇಂತಹ ನಾಯಕರುಗಳು ಇಂದು ಅಪರೂಪ. ಮಂಗಳೂರು ಕುಲಾಲ ಮಾತೃ ಸಂಘದ ಮಹಿಳಾ ಮಂಡಳಿಯ ಪ್ರಥಮ ಅಧ್ಯಕ್ಷರಾಗಿದ್ದ ಶ್ರೀಮತಿ ಪುಷ್ಪಾ ಸದಾನಂದರವರು ಕುಲಾಲ ಸಂಘ ಅಲ್ಲದೇ ಕರಾವಳಿ ವಾಚಕಿಯರ ಮತ್ತು ಬರಹಗಾರರ ಬಳಗದ ಮುಂತಾದ ಹಲವು ಸಂಘಟನೆಯ ಸಕ್ರೀಯ ಸದಸ್ಯರಾಗಿದ್ದರು. ಪುತ್ರ ಸಂದೀಪ್ ಮತ್ತು ಸೊಸೆಯ ಜೊತೆ ಬದುಕುತ್ತಿರುವ ಇವರದ್ದು ಸಂಪೂರ್ಣ ಸಮಾಜಮುಖೀ ಬದುಕು. ಸುಮಾರು 30 ವರ್ಷಗಳ ಹಿಂದೆ ಕೈಯಲ್ಲಿ ಮಂಗಳೂರು ಕೆಎಂಸಿ ಮೆಡಿಕಲ್ ಕಾಲೇಜ್ ನಲ್ಲಿ ಸರಕಾರೀ ಎಂಬಿಬಿಎಸ್ ಸೀಟು ಹಿಡಿದುಕೊಂಡು ಬಡ ಕುಟುಂಬದ ಹಿನ್ನಲೆಯಿಂದ ಮಂಗಳೂರಿಗೆ ಬಂದಿದ್ದ ನನಗೆ ಧೈರ್ಯ ತುಂಬಿದ ಹಲವು ಹಿರಿಯರಲ್ಲಿ ಈ ದಂಪತಿಗಳು ಪ್ರಮುಖರು. ಅಂದು ಕುಲಾಲ್ ಮಾತೃ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಸದಾನಂದರು ನಗರದ ಹಂಪನಕಟ್ಟೆಯ ಅವರ ಉದ್ದಿಮೆಯ ಕಚೇರಿಗೆ ಬರ ಮಾಡಿಸಿಕೊಂಡು ನನಗೆ ಧೈರ್ಯ ತುಂಬಿದ್ದನ್ನ ನಾನು ಖಂಡಿತಾ ಮರೆಯಲಾರೆ. ನನ್ನಂತೆ ಬೇರೆ ನೂರಾರು ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲದ ಜತೆಗೆ ಸ್ಕಾಲರ್ ಶಿಪ್ ಕೊಟ್ಟು ಬೆನ್ನುತಟ್ಟಿ ಹುರಿದುಂಬಿಸಿದವರು.

ಇಂದು ಮದುವೆ ನಾಳೆ ಡಿವೋರ್ಸ್ ಎಂಬ ಇಂದಿನ ಕಾಲಘಟ್ಟದ ನಾಡಿನ ಯುವಕ ಯುವತಿಯರಿಗೆ, ಯುವ ದಂಪತಿಗಳಿಗೆ ಸುಧೀರ್ಘ ಪ್ರೀತಿಯ ಉಯ್ಯಾಲೆಯ ಜೊತೆಗೆ ಜೀಕಿದ ಈ ಹಿರಿಯ ಜೀವಗಳ ಬದುಕು ಒಂದು ಮಾದರಿ. ಇವರು ಇನ್ನಷ್ಟು ವೈವಾಹಿಕ ಸಂವತ್ಸರಗಳನ್ನು ಕಾಣಲಿ ಎನ್ನುವುದೇ ನಮ್ಮೆಲ್ಲರ ಹರಕೆ ಹಾರೈಕೆ.

-ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು


Related News

ಡಾ. ಅಣ್ಣಯ್ಯ ಕುಲಾಲ್ ಕಥೆ-ಸಂಯೋಜನೆಯಲ್ಲಿ ಗರ್ಜಿಸಿದ`ಅರ್ಬು...
views 175
ಯಕ್ಷಗಾನ ಮೂಲಕ ಕ್ಯಾನ್ಸರ್ ಜಾಗೃತಿ - ವೈದ್ಯರ ಕಲಾ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ https://www.youtube.com/watch?v=SEF3DHZxyfk ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್...
ಕುಂಬಾರಣ್ಣನ ಬದುಕಿನ ಮಡಿಕೆಗಳು...
views 980
ಬೆಂಗಳೂರು : ಅಬ್ಬಾ..ಏನ್‌ ಬಿಸಿಲಪ್ಪಾ... ಎಷ್ಟು ನೀರ್‌ ಕುಡಿದ್ರೂ ಸಾಲಲ್ಲ ಅನ್ನೋ ಬೇಸಿಗೆಕಾಲದ ಆದಿಯಿದು. ಹೌದು, ಬೇಸಿಗೆ ಬಂದೊಡನೆ ನೀರಿನ ದಾಹವೂ ಹೆಚ್ಚಾಗುತ್ತೆ. ಸಾವಿರಾರು ರೂ...
ಕೃಷಿ ಮೇಳದಿಂದ ಕುಂಬಾರರಿಗೆ ಫ‌ುಲ್‌ ಬಿಸಿನೆಸ್‌...
views 2513
ಬೆಂಗಳೂರು: ಕೃಷಿ ಮೇಳದಲ್ಲಿ ಮಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ನೀಡಿದ ಕುಂಬಾರರಿಗೆ ಈಗ ನಗರದಲ್ಲಿ ಅವಕಾಶಗಳ ಬಾಗಿಲು ತೆರೆದುಕೊಂಡಿದೆ. ನಾಲ್ಕು ದಿನಗಳ ಮೇಳದಲ್ಲಿ ಕುಂಬಾರಿಕೆ...
ಹಾವೇರಿಯಲ್ಲಿ ನೀರಿನ ಬರ : ಸಂಕಷ್ಟಕ್ಕೆ ಸಿಲುಕಿದ ಕುಂಬಾರ...
views 848
(ಕುಂಬಾರ ಗುಂಡಿ ನಿವಾಸಿಗಳು ಪಕ್ಕದ ಓಣಿಯಿಂದ ಸಹಕಾರ ಪದ್ಧತಿಯಲ್ಲಿ ಎತ್ತಿನ ಬಂಡಿಯಲ್ಲಿ ನೀರು ತರುತ್ತಿರುವುದು) ಹಾವೇರಿ: ‘ಕುಂಬಾರರಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಗಾದೆ...
ದೇಶ ಸೇವೆಯ ತಪಸ್ಸು ಕೊನೆಗೂ ಸುಳ್ಳಾಗಲಿಲ್ಲ..!...
views 828
ಬಾಲ್ಯದಿಂದಲೇ ದೇಶಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಮೂಲತಃ ಪುತ್ತೂರಿನ ಮುದನಾಜೆಯ ಸಂಜೀವ ಕುಲಾಲ್ ಕುರಿತು 31-01-2018ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಜೀವನ...

Leave a Reply

Your email address will not be published. Required fields are marked *