ಸಂದೇಶ್ ಕುಂಬಾರ ಅವರಿಗೆ `ಕುವೆಂಪು ಯುವ ಕವಿ’ ಪ್ರಶಸ್ತಿ


ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಚನ್ನಪಟ್ಟಣದ ಸಂದೇಶ್ ಕುಂಬಾರ ಅವರು ಈ ಬಾರಿಯ `ಕುವೆಂಪು ಯುವ ಕವಿ ಪ್ರಶಸ್ತಿ’ ಪಡೆದಿದ್ದಾರೆ. ಕನ್ನಡ ಸಂಘರ್ಷ ಸಮಿತಿ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 115ನೇ ಹುಟ್ಟಹಬ್ಬದ ಅಂಗವಾಗಿ ಜ.11ರಂದು ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

sandesh1

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಪ್ರಶಸ್ತಿ ಪ್ರದಾನ ಮಾಡಿದರು.ಇದೆ ಸಂದರ್ಭ ಹಿರಿಯ ಸಾಹಿತಿ ಪ್ರೊ.ಜಿ.ಅಬ್ದುಲ್ ಬಷೀರ್ ಅವರಿಗೆ ಅನಿಕೇತನ ಪ್ರಶಸ್ತಿ ಹಾಗೂ ಸಾಹಿತಿ ಡಾ.ಬಸವರಾಜ ಸಬರದ ಅವರ ಪರವಾಗಿ ಪುತ್ರ ಜಯರಾಜ್‌ ಗೆ ಚಿರಂತನ ಪ್ರಕಾಶನ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

sandesh
ಒಂದು ಸಣ್ಣ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಂದೇಶ್ ಕುಂಬಾರ್ ಸಾಹಿತ್ಯ ಕೃಷಿಯಲ್ಲಿ ತನ್ನದೆ ವಿಶೇಷ ವೈಶಿಷ್ಟ್ಯ ಶೈಲಿಯಿಂದ ಹೊಸ ಭರವಸೆಯ ಛಾಪಿನೊಂದಿಗೆ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಕನ್ನಡ ನಾಡು ನುಡಿ ಬಗ್ಗೆ ಅಪಾರ ಅಭಿಮಾನ ಹಾಗೂ ಅಧಮ್ಯವಾದ ಕನ್ನಡ ಸಾಹಿತ್ಯ ಒಲವು ಹೊಂದಿರುವ ಸಂದೇಶ್ ಅವರು ಪ್ರೌಢಶಾಲಾ ಶಿಕ್ಷಣ ಪಡೆದಿದ್ದಾರೆ.


Related News

70ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...
views 722
ಸರ್ವ ಕುಲಾಲ/ಕುಂಬಾರ ಸಮಾಜ ಬಾಂಧವರಿಗೆ 70ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಪರಕೀಯರ ಸಂಕೋಲೆಗಳಿಂದ ಮುಕ್ತರನ್ನಾಗಿಸಿದ ಎಲ್ಲ ಮಹನೀಯರನ್...
ಸಂಗೀತಾ ಕುಲಾಲ್ ಅವರಿಗೆ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕಿ ಪ್...
views 3567
ಕಾರ್ಕಳ ಜ್ಞಾನಸುಧಾ ಪ್ರೌಢಶಾಲೆಯ ಶಿಕ್ಷಕಿ ಸಂಗೀತಾ ಕುಲಾಲ್ ಅವರು ಶಿಕ್ಷಕರ ದಿನಾಚರಣೆ ಸಂದರ್ಭ ಆದರ್ಶ ಆಸ್ಪತ್ರೆ ಉಡುಪಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ಆಶ್ರಯದಲ್ಲಿ ನೀ...
ತೋಕೂರು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಲೀಲಾ ಬಂಜನ್ ಆಯ್ಕ...
views 627
ಸಂಘದ ಮಹಾಸಭೆ-ಸನ್ಮಾನ ಸಮಾರಂಭ   ಮಂಗಳೂರು(ಜೂ.೨೮): ತೋಕೂರು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಪಡುಪಣಂಬೂರು ಗ್ರಾಮ ಪಂಚಾಯತ್‍ ಸದಸ್ಯೆ ಲೀಲಾ ಬಂಜನ್ ಅವರು ಆಯ್ಕೆಯಾಗಿದ್ದ...
ದೋಹಾ ಕತಾರ್ ಕುಲಾಲ ಫ್ರೆಂಡ್ಸ್ ನ ಹೊರಾಂಗಣ ವಿಹಾರಕೂಟ...
views 2277
ದೋಹಾ :ಕುಲಾಲ ಫ್ರೆಂಡ್ಸ್ ನ ಹೊರಾಂಗಣ ವಿಹಾರಕೂಟವು ಡಿಸೆಂಬರ್ ೧೮, ಶುಕ್ರವಾರದಂದು ಆಯೋಜಿಸಲಾಗಿತ್ತು. ದೋಹಾ ಕತಾರ್ ನ ರಾಷ್ಟ್ರೀಯ ದಿನವಾದ ಅಂದು ಬಹುಸಂಖ್ಯೆಯಲ್ಲಿ ಕುಲಾಲರು ಒಂದ...
ಬಡಗ ಕಜೆಕ್ಕಾರು ಕುಲಾಲ ಸಂಘ ಉದ್ಘಾಟನೆ...
views 862
ಪುತ್ತೂರು : ಬಡಗ ಕಜೆಕ್ಕಾರು ಗ್ರಾಮದ ಕೆದಿಮೇಲು ಶ್ರೀಧರ ಮೂಲ್ಯರ ಮನೆಯಲ್ಲಿ ನೂತನ ಕುಲಾಲ ಕುಂಬಾರ ಯಾನೆ ಮೂಲ್ಯರ ಸಂಘವನ್ನು ಉದ್ಯಮಿ ಪದ್ಮ ಮೂಲ್ಯ ಅನಿಲಡೆ ಅವರು ಉದ್ಘಾಟಿಸಿದರು....

Leave a Reply

Your email address will not be published. Required fields are marked *