ರಾಜಕೀಯ ನ್ಯಾಯಕ್ಕಾಗಿ ಕುಂಬಾರ ಸಂಘಟನೆಗಳಿಂದ ಪ್ರತ್ಯೇಕ ಹಕ್ಕೊತ್ತಾಯ ಚಳುವಳಿಗೆ ತೀರ್ಮಾನ


ಉಡುಪಿ(ಸೆ.೧೧, ಕುಲಾಲ್ ವರ್ಲ್ಡ್ ನ್ಯೂಸ್) : ಸಂಘಟನೆ ಅಥವಾ ಹೋರಾಟ ಮಾಡಿ ಸಾಮಾಜಿಕ ರಾಜಕೀಯ ನ್ಯಾಯ ಪಡೆಯುವ ಬದಲು ಕನಿಷ್ಠ 10 ರಿಂದ ಗರಿಷ್ಠ 90 ವರ್ಷಗಳಷ್ಟು ಸಂಘಟನಾ ಅನುಭವವಿರುವ ಕರಾವಳಿಯ ಸಂಘಗಳ ಸಹಕಾರದೊಂದಿಗೆ ಕರಾವಳಿಯ ಪ್ರತೀ ವಿಧಾನಸಭೆ ಹಾಗು ಜಿಲ್ಲೆಗಳಲ್ಲಿ ಚಳುವಳಿ ಹಾಗು ಹಕ್ಕೊತ್ತಾಯ ಮಾಡಲು ಹಾಗೂ ನೇತೃತ್ವವನ್ನು ಕರಾವಳಿ ಕುಲಾಲ-ಕುಂಬಾರ ಯುವವೇದಿಕೆ ಹಾಗು ಒಕ್ಕೂಟ ವಹಿಸಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.

kkyv

ಇತ್ತೀಚೆಗೆ ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಜರುಗಿದ ಉಡುಪಿ ಜಿಲ್ಲಾ ಎಲ್ಲಾ ಸಂಘಗಳ ನಾಯಕರ ಸಭೆಯಲ್ಲಿ ರಾಜ್ಯದ ಕುಲಾಲ-ಕುಂಬಾರ ಸಮುದಾಯದ ಹಿರಿಯ ನಾಯಕರಾದ ಡಾ ಎಂ ವಿ ಕುಲಾಲ್ ಕೊಟ್ಟ ಕರೆಯಂತೆ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಕುಲಾಲ-ಕುಂಬಾರ ಚಳುವಳಿಯನ್ನ ಗಟ್ಟಿಮಾಡಲು ತೀರ್ಮಾನಿಸಿ ಈ ಕೆಳಗಿನ ತೀರ್ಮಾನ ಮಾಡಲಾಗಿದೆ.

1. ಉಡುಪಿಯಲ್ಲಿ ಸುಮಾರು 20 ಸಾವಿರ ಜನರ ಸಮ್ಮೇಳನ
2.ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಸಮಾವೇಶ
3. ಬಂಟ್ವಾಳದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ

ಇಲ್ಲಿಯವರೆಗೆ ಮಾಡಿದ ರಾಜ್ಯ ಹಾಗು ರಾಷ್ಟ್ರ ಮಟ್ಟದ ಸಮ್ಮೇಳನಗಳಿಂದ ನಿರೀಕ್ಷಿತ ಫಲವಾಗಲಿ, ಸಾಮಾಜಿಕ ನ್ಯಾಯವಾಗಲಿ ಸಿಗದೇ ಇರುವುದರಿಂದ ಏಕ ಮನಸ್ಸಿನ ಕರಾವಳಿ ಮಲೆನಾಡಿನ 6 ಜಿಲ್ಲೆಗಳ ಸುಮಾರು 4 ಲಕ್ಷ ಕುಲಾಲ-ಕುಂಬಾರರು ಪ್ರಾದೇಶಿಕ ಹೋರಾಟದ ಮೂಲಕ ನ್ಯಾಯ ಪಡೆಯಲು ತೀರ್ಮಾನಿಸಲಾಯಿತು. ಅದಕ್ಕೆ ಈ ಭಾಗದ ಸುಮಾರು 75 ಸಂಘ ಹಾಗು ಸಂಘಟನೆಗಳ ಸಹಾಯ ಪಡೆದು ಅವರ ಸಹಯೋಗದಲ್ಲಿ ಹೋರಾಟ ಕೈಗೊಳ್ಳಲು ತೀರ್ಮಾನಕ್ಕೆ ಬರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


[yuzo_related]

Leave a Reply

Your email address will not be published. Required fields are marked *