ಮೂಡಬಿದ್ರೆ : ರಕ್ಷಿತಾ ಕುಲಾಲ್ ಕಿಡ್ನಿ ಚಿಕಿತ್ಸೆಗೆ ಧನಸಹಾಯ


ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡಬಿದ್ರೆ ಪುತ್ತಿಗೆಪದವು ಸಂಪಿಗೆ ನಗರದ ನಿವಾಸಿ ರಕ್ಷಿತಾ ಕುಲಾಲ್ ಅವರಿಗೆ ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಮತ್ತು ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಷನ್ ಸಹಭಾಗಿತ್ವದಲ್ಲಿ ಆರ್ಥಿಕ ನೆರವು ನೀಡಲಾಯಿತು.

sampige
ಕೂಲಿ ಕಾರ್ಮಿಕರಾದ ಮೂಡಬಿದಿರೆ ಪುತ್ತಿಗೆ ಪದವು ನಿವಾಸಿ ಚಂದು ಯಾನೆ ಚಂದ್ರಶೇಖರ ಅವರ ಪತ್ನಿ ರಕ್ಷಿತಾ ಕುಲಾಲ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇವರ ಚಿಂತಾಜನಕ ಸ್ಥಿತಿಯ ಕುರಿತು `ಕುಲಾಲ್ ವಲ್ಡ್ ಡಾಟ್ ಕಾಮ್’ ವಿಸ್ತ್ರುತ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಮತ್ತು ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಷನ್ ಸಹೃದಯಿ ದಾನಿಗಳ ಬೆಂಬಲದಿಂದ ಸಂಗ್ರಹಿಸಿದ ಒಟ್ಟು 20,000 ರೂಪಾಯಿ ಧನಸಹಾಯವನ್ನು ನ.11ರಂದು ನೀಡಿದರು.
ರೋಟರಿ ಸಮುದಾಯ ದಳದ ಜಯದೇವ್ ಕೊಲ್ಯ, ಶಶಿಕಾಂತ್ ಪರ್ಯತ್ತೂರು, ಆನಂದ ಮಲಯಾಳಕೋಡಿ, ಸುರೇಶ್ ಕೊಲ್ಯ, ದೀಪಕ್ ಕೋಟ್ಯಾನ್ ಕುಂಪಲ, ಹರೀಶ್ ಶೆಟ್ಟಿ ನೀಲಿಪಾಲ್, ಕುಸುಮಾಕರ ಕುಂಪಲ ಹಾಗೂ ಪುಣ್ಯಭೂಮಿ ‌ತುಳುನಾಡ ಸೇವಾ ಫೌಂಡೇಷನ್ ನ ಹೇಮಂತ್ ಕುಮಾರ್ ಕಿನ್ನಿಗೋಳಿ, ರಾಜ್ ಪವಿ ಬಜಗೋಳಿ ಜೊತೆಗಿದ್ದರು.


[yuzo_related]

Leave a Reply

Your email address will not be published. Required fields are marked *