ಮುವಾಯ್ ಥಾಯ್ ಚಾಂಪಿಯನ್ ಶಿಪ್ : ಚಿನ್ನ ಗೆದ್ದ ಸುಕ್ರೀತ್ ಕೋಡಿಕಲ್ !


ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಟೈಗರ್ ಫಿಟ್ ಮುವಾಯ್ ಥಾಯ್ ಕ್ಲಬ್ ಇವರ ಆಶ್ರಯದಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆದ 4ನೇ ದಕ್ಷಿಣ ಭಾರತ ಮುವಾಯ್ ಥಾಯ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮಂಗಳೂರಿನ ಕುಲಾಲ ಸಮಾಜದ ಯುವಕ ಸುಕ್ರೀತ್ ಕೋಡಿಕಲ್ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಗಳಿಸಿದ್ದಾರೆ.

sukreeth

ಜನವರಿ 10ರಿಂದ 12ರವರೆಗೆ ನಡೆದ ಈ ಕೂಟದಲ್ಲಿ ಮುವಾಯ್ ಬಾಕ್ಸಿಂಗ್ 81ರಿಂದ 86 ಕೆಜಿ ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ ಸುಕ್ರೀತ್ ಕೋಡಿಕಲ್ ಅವರು ಪದಕ ಪಡೆದರು. ಈ ಸ್ಪರ್ಧೆಯಲ್ಲಿ ದಕ್ಷಿಣ ಭಾರತದ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದರು. ಸುಕ್ರೀತ್ ಅವರು ಕೋಡಿಕಲ್ ನ ಉಮಾನಾಥ್ ಬಂಗೇರ ಮತ್ತು ಯಶೋಧ ದಂಪತಿಯ ಸುಪುತ್ರರಾಗಿದ್ದು, ಬಿಎಸ್ಸಿ ಪದವೀಧರರಾಗಿದ್ದಾರೆ.

sukreeth1

ಮುವಾಯ್‌ ಥಾಯ್‌ (Mauythai) ಎನ್ನುವುದು ಒಂದು ಜನಪ್ರಿಯ ಸಮರ ಕಲೆಯಾಗಿದ್ದು ಅದು ನಮ್ಮ ಆತ್ಮರಕ್ಷಣೆಯ ಅಸ್ತ್ರ ಕೂಡ ಹೌದು. ಥಾಯ್ಲೆಂಡ್ ನಲ್ಲಿ ಜನಪ್ರಿಯವಾಗಿರುವ ಮುವಾಯ್ ಥಾಯ್ ಎಂಬ ಸಮರಕಲೆ ಭಾರತ ಸೇರಿದಂತೆ ಇತರ ಕಡೆ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.


Related News

ಹಾವೇರಿಯಲ್ಲಿ ದೇವಿಯ ಉಬ್ಬು ಶಿಲ್ಪ ಹೊಂದಿದ ಪುರಾತನ ಮಣ್ಣಿನ...
views 246
ಹಾವೇರಿ: ತಾಲ್ಲೂಕಿನ ಕನಕಾಪುರದ ಕಂದಾರಮ್ಮ ದೇವಸ್ಥಾನದಲ್ಲಿ ದೇವಿಯ ಉಬ್ಬು ಆಕೃತಿ ಹೊಂದಿದ ಪುರಾತನವಾದ ಮಣ್ಣಿನ ಮಡಕೆಯನ್ನು ಉಪನ್ಯಾಸಕ ಪ್ರಮೋದ ನಲವಾಗಲ ಹಾಗೂ ಡಾ.ರಮೇಶ ತೆವರಿ ಗುರುತಿ...
ಸರ್ವಜ್ಞ ಟ್ರೋಫಿ-2016 : 2ನೇ ಬಾರಿ ಪ್ರಶಸ್ತಿ ಗೆದ್ದ ಕುಂದ...
views 1241
ಮಂಗಳೂರು : ಕರಾವಳಿ ಕುಲಾಲ ಕುಂಬಾರ ಯುವವೇದಿಕೆಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ನಡೆದ ಪ್ರತಿಷ್ಠಿತ ಸರ್ವಜ್ಞ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರ ಯುವವೇದಿಕೆ ತಂಡ...
ಶ್ರೀಲಂಕಾದಲ್ಲಿ ನಡೆದ ಕರಾಟೆಯಲ್ಲಿ ಮಿಂಚಿದ ಬಾಲ ಪ್ರತಿಭೆ ವ...
views 301
ಉಡುಪಿ(ಮೇ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಕರಾಟೆ ಜಪಾನ್‌ ಮೂಲದ ಸಮರ ಕಲೆ. ಈ ಕಲೆಯಲ್ಲಿ ಬಾಲಕನೊಬ್ಬ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ಸದ್ದಿಲ್ಲದೇ ಹೆಸರು ಮಾಡಿದ್ದಾನೆ. ಗ್...
ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಆಡಳಿತ ಮಂಡಳಿ ಸದಸ್ಯರಾಗಿ...
views 837
ಬಂಟ್ವಾಳ: ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಆಡಳಿತ ಮಂಡಳಿ ಅಧಿಕಾರೇತರ ಸದಸ್ಯರಾಗಿ ದ.ಕ.ಜಿಲ್ಲೆಯಿಂದ ಸಜೀಪಮುನ್ನೂರು ಗ್ರಾಮದ ಎಂ.ಪರಮೇಶ್ವರ ಮೂಲ್ಯ ಅವರನ್ನು ಜಿಲ್ಲಾ ಉಸ್ತುವಾರ...
ಮೆಲ್ಕಾರ್ ವೃತ್ತಕ್ಕೆ ಸ್ವಾತಂತ್ರ್ಯಸೇನಾನಿ ಅಮ್ಮೆಂಬಳ ಬಾಳಪ...
views 863
  ಬಂಟ್ವಾಳ : ಕರಾವಳಿ ಕುಲಾಲ/ ಕುಂಬಾರ ಯುವವೇದಿಕೆಯ ಬಂಟ್ವಾಳ ಘಟಕ ಹಾಗೂ ಕೇಂದ್ರ ಘಟಕದ ಮನವಿಯನ್ವಯ ಬಂಟ್ವಾಳ ಪುರಸಭೆ ವ್ಯಾಪ್ತಿಯ ಮೆಲ್ಕಾರ್ ವೃತ್ತಕ್ಕೆ ಸ್ವಾತಂತ್ರ್ಯ...

Leave a Reply

Your email address will not be published. Required fields are marked *