ಮುಂಬಯಿ ಕುಲಾಲ ಸಂಘದ ವಾರ್ಷಿಕ ಕ್ರೀಡೋತ್ಸವ


mb

ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಆರೋಗ್ಯ ಭಾಗ್ಯವನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ಕ್ರೀಡೆ ಅನಿವಾರ್ಯವಾಗಿದೆ. ಕ್ರೀಡೋತ್ಸವಗಳಿಂದ ಆರೋಗ್ಯ ಮತ್ತು ದೇಹ ಸಮತೋಲನದಲ್ಲಿರುತ್ತದೆ. ಕೇಂದ್ರ ಸರಕಾರವು ಕ್ರೀಡೆಗೆ ವಿಶೇಷವಾದ ಸೌಲಭ್ಯವನ್ನು ನೀಡುತ್ತಿದೆ. ಸಂಘಟನೆಯ ಬಲವೃದ್ಧಿಗಾಗಿ ಕ್ರೀಡೋತ್ಸವ ಅನಿವಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜ್ಯೋತಿಷಿ , ಪುರೋಹಿತ ಡಾ| ಎಂ. ಜೆ. ಪ್ರವೀಣ್‌ ಭಟ್‌ ಹೇಳಿದರು.

mb1

ಫೆ. 3ರಂದು ಚೆಂಬೂರಿನ ಆರ್‌ಸಿಎಫ್‌ ಕಾಲನಿಯಲ್ಲಿರುವ ನ್ಪೋರ್ಟ್ಸ್ ಕ್ಲಬ್‌ನಲ್ಲಿ ಕುಲಾಲ ಸಂಘ ಮುಂಬಯಿ ಇದರ ಸಿಎಸ್‌ಟಿ-ಮುಲುಂಡ್‌-ಮಾನ್‌ಖುದ್‌ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ನಡೆದ ಕ್ರೀಡೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬಾರಿ ಸಂಖ್ಯೆಯಲ್ಲಿ ಸಮಾಜ ಬಾಂಧವರನ್ನು ಒಗ್ಗೂಡಿಸಿಕೊಂಡು ಕ್ರೀಡಾಕೂಟವನ್ನು ಆಯೋಜಿಸಿದ ಕುಲಾಲ ಸಂಘದ ಕಾರ್ಯ ವೈಖರಿಯನ್ನು ಅಭಿನಂದಿಸಿದರು.

mb2

ಕ್ರೀಡಾಕೂಟವನ್ನು ಸಾಂಕೇತಿಕವಾಗಿ ಬಲೂನ್‌ ಹಾರಿಸಿ ಉದ್ಘಾಟಿಸಿದ ಕುಲಾಲ ಸಂಘದ ಅಧ್ಯಕ್ಷ ದೇವದಾಸ್‌ ಕುಲಾಲ್‌ ಅವರು ಮಾತನಾಡಿ, ನಮ್ಮೊಳಗಿರುವ ಕ್ರೀಡಾ ಪ್ರತಿಭೆಯನ್ನು ಹೊರ ಹೊಮ್ಮಿಸಲು ಆಯೋಜಿಸಿದ ಈ ಕ್ರೀಡಾಕೂಟದಲ್ಲಿ ಯಾವುದೇ ರೀತಿಯ ವೈಯಕ್ತಿಕ ದ್ವೇಷಗಳು ಬಾರದಂತೆ ಸಮಾಜ ಬಾಂಧವರೆಲ್ಲರಲ್ಲಿ ಕ್ರೀಡಾ ಮನೋಭಾವನೆ ಬೆಳೆಯಬೇಕು. ಸಮಾಜ ಬಾಂಧವರು ಕ್ರೀಡೆಯು ಮೇಲೆ ಅಭಿಮಾನವನ್ನು ಹೊಂದಿರಬೇಕು. ಭಾರೀ ಸಂಖ್ಯೆಯಲ್ಲಿ ಯುವಕ-ಯುವತಿಯರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಸಂಘದ ಅಭಿವೃದ್ಧಿಯ ದ್ಯೋತಕವಾಗಿದೆ. ದಿನಪೂರ್ತಿ ನಡೆಯುತ್ತಿರುವ ಕ್ರೀಡಾಕೂಟ ಮತ್ತು ತಾಳ್ಮೆಯೊಂದಿಗೆ ನಡೆಯಲಿ ಎಂದರು.

mb3

ವೇದಿಕೆಯಲ್ಲಿ ಜ್ಯೋತಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಸಾಲ್ಯಾನ್‌, ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌, ಕೋಶಾಧಿಕಾರಿ ಜಯ ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ಅಮೂಲ್ಯ ಸಂಪಾದಕ ಶಂಕರ್‌ ವೈ. ಮೂಲ್ಯ, ಮೀರಾ-ವಿರಾರ್‌ ಸಮಿತಿಯ ಕಾರ್ಯಾಧ್ಯಕ್ಷ ಸುಂದರ್‌ ಮೂಲ್ಯ, ಚರ್ಚ್‌ಗೇಟ್‌ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್‌ ಸಾಲ್ಯಾನ್‌, ಥಾಣೆ-ಕರ್ಜತ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್‌ ಸಿ. ಮೂಲ್ಯ, ನವಿಮಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಬಂಗೇರ, ಕುಲಾಲ ಸಂಘದ ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಬಂಗೇರ, ಐರೋಲಿಯ ಉದ್ಯಮಿ ದಿವಾಕರ ಮೂಲ್ಯ, ಸಿಎಸ್‌ಟಿ ಮುಲುಂಡ್‌ನ‌ ಕಾರ್ಯಾಧ್ಯಕ್ಷ ಶೇಖರ ಬಿ. ಮೂಲ್ಯ, ಉಪ ಕಾರ್ಯಾಧ್ಯಕ್ಷ ಸುಂದರ ಎನ್‌. ಮೂಲ್ಯ, ಕಾರ್ಯದರ್ಶಿ ಸುರೇಶ್‌ ಬಂಜನ್‌, ಕೋಶಾಧಿಕಾರಿ ರಾಜೇಶ್‌ ಬಂಜನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಆರ್‌. ಬಂಜನ್‌, ಕ್ರೀಡಾ ವಿಭಾಗದ ಮುಖ್ಯಸ್ಥರುಗಳಾದ ಮಹೇಶ್‌ ಸಾಲ್ಯಾನ್‌, ಸುರೇಖಾ ರತನ್‌, ಚೇತನ್‌ ಡಿ. ಬಂಗೇರ, ವಿನೀತ್‌ ಜಿ. ಸಾಲ್ಯಾನ್‌, ಸಂಜೀವ ಎನ್‌. ಬಂಗೇರ, ಸೂರಜ್‌ ಎಸ್‌. ಹಂಡೇಲ್‌, ಕವಿತಾ ಸಿ. ಹಾಂಡ, ಮಲೈಕಾ ಎಸ್‌. ಮೂಲ್ಯ ಉಪಸ್ಥಿತರಿದ್ದರು.

mb4

ಕಾರ್ಯಕ್ರಮವನ್ನು ಅರುಣಾಕ್ಷೀ ಮೂಲ್ಯ, ಸುರೇಶ್‌ ಬಂಜನ್‌ ನಿರ್ವಹಿಸಿದರು. ಕ್ರೀಡಾಕೂಟದ ಜ್ಯೋತಿಯನ್ನು ಸಿಎಸ್‌ಟಿ ಮುಲುಂಡ್‌ನ‌ ಕಾರ್ಯಾಧ್ಯಕ್ಷ ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದ ಬಳಿಕ ಮುಂದಿನ ವರ್ಷ ಕ್ರೀಡಾಕೂಟವನ್ನು ಆಯೋಜಿಸಲಿರುವ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಬಂಗೇರ ಅವರಿಗೆ ದೇವದಾಸ್‌ ಕುಲಾಲ ಹಸ್ತಾಂತರಿಸಿದರು. ಬಳಿಕ ಬಾರಿ ಸಂಖ್ಯೆಯಲ್ಲಿ ಸೇರಿದ ಕುಲಾಲ ಸಮಾಜ ಬಾಂಧವರಿಗೆ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳು ನಡೆದವು.

mb5 mb6 mb7 mb8 mb9


[yuzo_related]

Leave a Reply

Your email address will not be published. Required fields are marked *