ಭಾರತೀಯ ಕೃಷಿ ತಂತ್ರಜ್ಞಾನ ಹಾಗೂ ಸಂಶೋಧನ ಸಂಸ್ಥೆ ನಿರ್ದೇಶಕರಾಗಿ ಬಸವರಾಜ ಕುಂಬಾರ ನೇಮಕ


ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೇಂದ್ರ ಸರಕಾರ ಸ್ವಾಮ್ಯದ ಭಾರತೀಯ ಕೃಷಿ ತಂತ್ರಜ್ಞಾನ ಹಾಗೂ ಸಂಶೋಧನ ಸಂಸ್ಥೆಗೆ ಕರ್ನಾಟಕ ರಾಜ್ಯ ಕುಂಬಾರ ಸಮಾಜ(ರಿ) ದ ಗೌರವ ಅಧ್ಯಕ್ಷ ಹಾಗೂ ರೈತಪರ ಹೋರಾಟಗಾರ, ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ನಿಡಗುಂದಿ ಅವರನ್ನು ನಾಮನಿರ್ದೇಶಕರಾಗಿ ಆದೇಶ ಹೊರಡಿಸಿದೆ.

basavaraj
ಈ ನೇಮಕವು ಕರ್ನಾಟಕ, ಕೇರಳ ಮತ್ತು ಲಕ್ಷದೀಪ ಸೇರಿ ಮೂರು ರಾಜ್ಯಗಳನ್ನು ಒಳಗೊಂಡಿದೆ. ಮೂರು ರಾಜ್ಯಗಳ ಕೃಷಿ ಅಧ್ಯಯನ, ತಂತ್ರಜ್ಞಾನ ಕುರಿತು ಮಾಹಿತಿ ತಿಳಿಸುವ ಕಾರ್ಯ ಹೊಂದಿದೆ.
ದೇಶದ ವಿವಿಗಳು, ಐಸಿಎಆರ್ ಸಂಸ್ಥೆಗಳು, ನ್ಯಾಷನಲ್ ಬ್ಯುರೋಗಳು, ಡೈರೆಕ್ಟ್ ಪ್ರೊಡಕ್ಟ್ ಗಳು ಈ ಸಂಸ್ಥೆಯ ವ್ಯಾಪ್ತಿಗೆ ಒಳಪಡುತ್ತಿದ್ದು, ಅದರಲ್ಲಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಟಾರಿಯ ಸಂಬಂಧಪಟ್ಟಂತೆ ಮೂರು ಜವಾಬ್ದಾರಿಯನ್ನು ನೂತನ ನಿರ್ದೇಶಕರಿಗೆ ನೀಡಲಾಗಿದೆ. ಈ ಸಮಿತಿಗೆ ಕೇಂದ್ರ ಸಚಿವ ರಾಧಾ ಮೋಹನ ಅಧ್ಯಕ್ಷರಾಗಿದ್ದು, ಫೆ.೧೮ರಂದು ಮೊದಲ ಸಭೆ ಬೆಂಗಳೂರು ಶಾಖೆಯಲ್ಲಿ ನಡೆಯಲಿದೆ.


[yuzo_related]

Leave a Reply

Your email address will not be published. Required fields are marked *