ಬಡವರ ನೆರವಿಗೆ ಧಾವಿಸುವ ಹೇಮಂತ್ ಕುಮಾರ್ ಕಿನ್ನಿಗೋಳಿಗೆ ಸನ್ಮಾನ


ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಯಾರೇ ಕರೆದರೂ ಹಗಲು ರಾತ್ರಿಯೆನ್ನದೆ ನೊಂದವರ ಬಡವರ ನೆರವಿಗೆ ಧಾವಿಸುವ ಯುವಕ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರಿಗೆ ಕಾಪು ಮೂಳೂರಿನ `ನಿರೆಲ್’ ವಾಟ್ಸಾಪ್ ಗ್ರೂಪ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

satya
ಮಂಗಳೂರು ಪೊಲೀಸ್ ಲೇನ್ ಶ್ರೀದೇವಿ ದೇವಸ್ಥಾನದಲ್ಲಿ ಫೆ.೧೦ರಂದು ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಅವರು ಸನ್ಮಾನಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಹೇಮಂತ್ ಅವರು ಗುರುತಿಸಿಕೊಂಡಿರುವ ವಿವಿಧ ವಾಟ್ಸಾಪ್ ಗ್ರೂಪ್ ನ ವತಿಯಿಂದ ಒಂದು ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

satya1
ಸನ್ಮಾನದ ವೇಳೆ ರಮೇಶ್ ಕುಮಾರ್ ವಗ್ಗ, ರಂಜಿತ್ ಕುಮಾರ್ ಮೂಡಬಿದರೆ, ನಿತೇಶ್ ಕುಕ್ಯಾನ್ ಏಳಿಂಜೆ, ಕಿರಣ್ ಕುಲಾಲ್ ಮರಕಡ, ದಿನೇಶ್ ಕುಲಾಲ್ ಬೀಡು, ನರೇಶ್ ಕೆ.ಟಿ. ಬೆಳ್ತಂಗಡಿ, ಅರುಣ್ ಕುಲಾಲ್ ಮೂಳೂರು, ಉದಯ್ ಕುಲಾಲ್ ಕಳತ್ತೂರು, ಪ್ರಸಾದ್ ಕುಲಾಲ್ ಸಿದ್ಧಕಟ್ಟೆ, ಅನಿಲ್ ಪೂಜಾರಿ, ಚಂದ್ರ ಪ್ರಭಾ ಮಂಗಳೂರು, ಶೃತಿ ಕುಲಾಲ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.

satya2
ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಕುಮಾರ್ ಅವರು ವಿವಿಧ ಸಾಮಾಜಿಕ ಚಟುವಟಿಗಳಲ್ಲಿ ಸಕ್ರಿಯರಾಗಿದ್ದು, `ಆಸರೆ ಗೆಳೆಯರ ಬಳಗ’ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಬಡರೋಗಿಗಳನ್ನು ಗುರುತಿಸಿ ಸಹಾಯಹಸ್ತ ಚಾಚುತ್ತ ಮಾನವೀಯತೆ ಮೆರೆಯುತ್ತಿದ್ದಾರೆ. `ಕುಲಾಲ್ ವರ್ಲ್ಡ್’ ಸಹಿತ ಸಮಾನ ಮನಸ್ಕರ ಹಲವು ಗ್ರೂಪ್ ಗಳಲ್ಲಿ ತೊಡಗಿಸಿಕೊಂಡಿರುವ ಇವರು ಎಷ್ಟೇ ಒತ್ತಡದ ಕೆಲಸದಲ್ಲಿದ್ದರೂ ಎಲ್ಲ ಕೆಲಸ ಬದಿಗೊತ್ತಿ ನೆರವಿಗೆ ಧಾವಿಸುವ ಅಪರೂಪದ ವ್ಯಕ್ತಿತ್ವವುಳ್ಳವರಾಗಿದ್ದಾರೆ.


Related News

ಬಂಟ್ವಾಳ ಕುಲಾಲ ಸಂಘದ `ಜೊತೆಜೊತೆಯಲಿ ಸೀಸನ್-೨’ : 1...
views 710
ಬಂಟ್ವಾಳ(ಅ.೦೩, ಕುಲಾಲ್ ವರ್ಲ್ಡ್ ನ್ಯೂಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆದ ಯೋಧರಿಗೊಂದು ಸೆಲ್ಯೂಟ್ ಕಾರ್ಯಕ್...
ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾಗಿ ಐತು ಕುಲಾಲ್ ಕನ್ಯಾನ ...
views 1091
ಉಡುಪಿ(ಸೆ. ೧೬): ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಐತು ಕುಲಾಲ್ ಕನ್ಯಾನ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ರಾಮ ಕುಲಾಲ್ ಪಕ್ಕಾಲು, ಉಪಾಧ್ಯಕ್...
ಭಾರತ್ ಗೌರವ್ ಅವಾರ್ಡ್’ಗೆ ಪೆರ್ಡೂರು ರಾಮ ಕುಲಾಲ್ ಆ...
views 1899
ಉಡುಪಿ : ನವದೆಹಲಿಯ ಸಿಟಿಜನ್ ಇಂಟಿಗ್ರೇಷನ್ ಪೀಸ್ ಸೊಸೈಟಿ ನೀಡುವ " ಭಾರತ್ ಗೌರವ ರಾಷ್ಟ್ರೀಯ ಪ್ರಶಸ್ತಿ"ಗೆ ಸಮಾಜ ಸೇವಕ, ಸಂಘಟಕರಾದ ಪೆರ್ಡೂರು ರಾಮ ಕುಲಾಲ್ ಆಯ್ಕೆಯಾಗಿದ್ದಾರೆ....
ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸ...
views 1501
ಮಂಗಳೂರು : ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ದ. ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂ...
ಕುಲಾಲ- ಕುಂಬಾರರ ಸಮಾವೇಶ ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆ ...
views 790
ಫೆಬ್ರವರಿ 4ರಂದು ಬೆಳ್ತಂಗಡಿಯಲ್ಲಿ ನಡೆಯುವ ಕುಲಾಲ- ಕುಂಬಾರರ ಹಕ್ಕೊತ್ತಾಯ ಮತ್ತು ಸಮಾವೇಶದ ಉದ್ಘಾಟನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಶ್ರೀ ಡಾ:ಡಿ.ವೀರೇಂದ...

Leave a Reply

Your email address will not be published. Required fields are marked *