ಬಂಟ್ವಾಳ ಕರಾವಳಿ ಕುಲಾಲ ವೇದಿಕೆ ವತಿಯಿಂದ `ಸರ್ವಜ್ಞ ಟ್ರೋಫಿ’ ಕ್ರಿಕೆಟ್ ಪಂದ್ಯಾಟ


ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಸರ್ವಜ್ಞ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ವಾಹನ ಜಾಥ ಹಾಗೂ ಸರ್ವಜ್ಞ ಟ್ರೋಫಿ ಕ್ರಿಕೆಟ್ ಪಂದ್ಯಾಟ ಬಂಟ್ವಾಳದ ಎಸ್ ವಿ ಎಸ್ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.

bt

ಬಿ.ಸಿ.ರೋಡಿ ರಕ್ತೇಶ್ವರಿ ದೇವಸ್ಥಾನದಲ್ಲಿ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಅವರು ಸದಸ್ಯರ ಗುರುತಿನ ಚೀಟಿ ಬಿಡಗಡೆಗೊಳಿಸಿದರು. ಬಳಿಕ ಮಂಗಳೂರಿನ ಯಜ್ಞೇಶ್ ಕುಲಾಲ್ ಬರ್ಕೆ ತ್ರಿಪದಿ ಕವಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ವಾಹನ ಜಾಥಕ್ಕೆ ಚಾಲನೆ ನೀಡಿದರು. ಬಿ.ಸಿ.ರೋಡಿನ ರಾಜ ರಸ್ತೆಯ ಮೂಲಕ ವಾಹನ ಜಾಥ ಬಂಟ್ವಾಳದ ಎಸ್‍ವಿಎಸ್ ಮೈದಾನಕ್ಕೆ ಸಾಗಿ ಬಂತು.

bt1

ಸರ್ವಜ್ಞ ಟ್ರೋಪಿ ಕ್ರಿಕಟ್ ಪಂದ್ಯಾಟ ಹಾಗೂ ಸಭಾ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಉದ್ಯಮಿ ಗೋಪಾಲ ಗೋವಿಂದೋಟ `ಕುಲಾಲ ಕುಂಬಾರರ ಯುವ ವೇದಿಕೆಯಿಂದ ಸಮಾಜ ಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ’ ಎಂದು ಶುಭ ಹಾರೈಸಿದರು.

bt2

ಮುಖ್ಯ ಅತಿಥಿಯಾಗಿದ್ದ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ ಹತ್ತು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯ ಮಂದಿ ಸೇರಿ ಕುಲಾಲ ಕುಂಬಾರರ ಯುವ ವೇದಿಕೆಯನ್ನು ಸ್ಥಾಪಿಸಲಾಗಿತ್ತು. ಆದರೆ ಇಂದು ಪ್ರತೀ ತಾಲೂಕು ಘಟಕಗಳಲ್ಲೂ ಹೆಚ್ಚಿನ ಸದಸ್ಯರು ಸೇರ್ಪಡೆಗೊಂಡು ಕುಲಾಲ ಯುವ ಯುವವೇದಿಕೆ ಬಲಗೊಂಡಿದೆ. ಕುಲಾಲ ಸಮುದಾಯದ ಕ್ರೀಡಾಕೂಟವೊಂದರಲ್ಲಿ 35ಕ್ಕಿಂತಲೂ ಅಧಿಕ ತಂಡಗಳು ಪಾಲ್ಗೊಳ್ಳುವುದೆಂದರೆ ಸಮುದಾಯದ ಸಂಘಟನೆ ಗಟ್ಟಿಯಾಗುತ್ತಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು.

bt3

ಕುಲಾಲ ಸಂಘಟನೆಗಳ ಒಕ್ಕೂಟ ಸ್ಥಾಪಿಸುವ ಬಗ್ಗೆ ಕುಲಾಲ ನಾಯಕರು ಚಿಂತನೆ ನಡೆಸುತ್ತಿದ್ದಾರೆ, ಮಡಕೆ ಮಾಡುವ ಕುಂಬಾರರಿಗೆ ನೈತಿಕ ಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ. ರೈಲು ನಿಲ್ದಾಣಗಳಲ್ಲಿ ಮಣ್ಣಿನ ಲೋಟೆಯಲ್ಲಿ ಚಹಾ ನೀಡುವ ವ್ಯವಸ್ಥೆ ಆರಂಭಗೊಂಡಿದ್ದು ಇದರ ಗುತ್ತಿಗೆಯನ್ನು ಬೇರೆ ಯಾರಿಗೋ ನೀಡುವ ಬದಲು ಕುಂಬಾರರಿಗೆ ನೀಡಬೇಕು ಎಂದು ಡಾ. ಕುಲಾಲ್ ಆಗ್ರಹಿಸಿದರು.

bt4

ಬಂಟ್ವಾಳ ಕುಲಾಲ ಕುಂಬಾರರ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ರೈಲಿನಲ್ಲಿ ಸಾಹಸ ಮೆರೆದ ಯುವಕ ರಾಜೇಶ್ ನರಿಕೊಂಬು ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯಕ್ಕೊಳಗಾದ ಬಾಲಕ ನಿತೇಶ್ ಅವರಿಗೆ ಕಲ್ಪವೃಕ್ಷ ಠೇವಣಿಯನ್ನು ಹಸ್ತಾಂತರಿಸಲಾಯಿತು. ಕುಲಾಲರ ಜನಗಣತಿ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.

bt5

ಮುಖ್ಯ ಅತಿಥಿಗಳಾಗಿ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಜಿಲ್ಲಾಧ್ಯಕ್ಷ ಜಯೇಶ್ ಗೋವಿಂದ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ.ಕುಲಾಲ್, ಸೈಬರ್ ಕ್ರೈಂ ಠಾಣೆಯ ಹೆಡ್‍ಕಾನ್ಸ್‍ಟೇಬಲ್ ಕೃಷ್ಣ ಕುಲಾಲ್, ರಘುನಾಥ ಸಾಲ್ಯಾನ್, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಬಿಂಬಧ್ವನಿ ಪತ್ರಿಕೆಯ ಪ್ರಧಾನ ಸಂಪಾದಕ ವಸಂತ್ ಕಾರ್ಕಳ, ಉದ್ಯಮಿ ರಾಮಕುಲಾಲ್ ಉಪ್ಪಿನಂಗಡಿ, ಮಳಲಿ ಕುಂಬಾರರ ಗುಡಿಕೈಗಾರಿಕೆ ಸಂಘದ ಅಧ್ಯಕ್ಷ ಸುಂದರ ಬಿ. ಬಂಗೇರ, ಇಂಜಿನಿಯರ್ ವಜ್ರೇಶ್ ಕುಲಾಲ್ ಹಾಜರಿದ್ದರು. ನಿಕಟಪೂರ್ವ ಅಧ್ಯಕ್ಷ ನಾರಾಯಣ ಪೆರ್ನೆ ಸ್ವಾಗತಿಸಿದರು, ಕಾರ್ಯದರ್ಶಿ ಹರಿಪ್ರಸಾದ್ ವಂದಿಸಿದರು, ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.


Related News

ಕುಲಾಲ ಸಂಘ ನವಿ ಮುಂಬಯಿ :12ನೇ ವಾರ್ಷಿಕ ಸ್ನೇಹ ಸಮ್ಮಿಲನ-ಭ...
views 1108
ನವಿ ಮುಂಬಯಿ(ಅ.೨೫): ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ 12ನೇ ವಾರ್ಷಿಕ ಸ್ನೇಹಸಮ್ಮಿಲನ, ಭಜನಾ ಮಂಗಲೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ವಾಶಿಯ ಸೆಕ್ಟರ್‌ ...
ಕಾಪು : ಮೂಳೂರಿನಲ್ಲಿ ಮಣ್ಣಿನ ಪರಿಕರಗಳ ನೂತನ ಮಳಿಗೆ ಉದ್ಘಾ...
views 388
ಕಾಪು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಲ್ಲಿಗೆ ಸಮೀಪದ ಮೂಳೂರಿನ ಸೊಸೈಟಿ ಕಟ್ಟಡದಲ್ಲಿ ಗೃಹೋಪಯೋಗಿ ಹಾಗೂ ಅಲಂಕಾರಿಕ ಮಣ್ಣಿನ ಪರಿಕರಗಳ ನೂತನ ಶ್ರೀ ಸರ್ವೇಶ್ವರ ಮಳಿಗೆಯು ಜ.೨೧, ಸೋಮವಾ...
ರಾಮಕುಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ...
views 1251
ಉಪ್ಪಿನಂಗಡಿ : ಶ್ರೀ ಮಹಾಗಣಪತಿ ಸೇವಾ ಸಮಿತಿ ಕೊಯಿಲ-ರಾಮಕುಂಜ ಇದರ ವತಿಯಿಂದ ನಡೆಯುವ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಮಕುಂಜ ಗ್ರಾ.ಪಂ.ಮಾಜಿ ...
ಮಗನ ಎರಡೂ ಕಿಡ್ನಿ ವೈಫಲ್ಯ : ಸಹಾಯಕ್ಕಾಗಿ ತಾಯಿಯ ಮೊರೆ...
views 704
ಮಂಗಳೂರು(ಜೂ.೦೨, ಕುಲಾಲ್ ವರ್ಲ್ಡ್ ನ್ಯೂಸ್): ದುಡಿದು ಸಾಕಬೇಕಾದ ಮಗನೇ ಹಾಸಿಗೆ ಹಿಡಿದಿದ್ದರೆ, ಬೀಡಿಕಟ್ಟಿ ಬದುಕು ಸವೆಸುತ್ತಿರುವ ಬಡ ತಾಯಿ ಮಗನ ಆರೈಕೆಗಾಗಿ ಸಹಾಯಯಾಚಿಸುತ್ತಿದ...
ಅಪಘಾತಕ್ಕೀಡಾದ ಕಂದನ ಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆ...
views 41
ಕಾಪು (ಫೆ ೧೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ರಾತ್ರಿಯ ಕಾರ್ಯಕ್ರಮಕ್ಕೆ ರಿಕ್ಷಾದಲ್ಲಿ ಹೊರಟಿದ್ದ ಕುಟುಂಬವೊಂದು ಅಪಘಾತದಲ್ಲಿ ಸಿಲುಕಿ ಪುಟ್ಟ ಮಗು...

Leave a Reply

Your email address will not be published. Required fields are marked *