ಪ್ರಜ್ಞಾ ಕುಲಾಲ್ ಕಾವು ಅವರ ಚೊಚ್ಚಲ ಕವನ ಸಂಕಲನ ಬಿಡುಗಡೆ


ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರಿನ ಪುರಭವನದಲ್ಲಿ ಜನವರಿ 29 ರಂದು ನಡೆದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವು ಪ್ರಜ್ಞಾ ಕುಲಾಲ್ ಅವರ “ಭಾವ ತಂತಿ ಮೀಟಿದಾಗ ” ಎಂಬ ಚೊಚ್ಚಲ ಕವನ ಸಂಕಲನ ಬಿಡುಗಡೆಗೊಂಡಿತು.

bhavatanti
ಹಿರಿಯ ಸಾಹಿತಿ ಎ. ಪಿ ಮಾಲತಿ ಅವರು ಕವನ ಸಂಕಲನ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಡಾ.ಬಿ.ಎಂ. ಹೆಗ್ಡೆಯವರು ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದಲ್ಲಿ ನಾಡಿನ ಅನೇಕ ಗಣ್ಯರು ಉಪಸ್ಥಿತರಿದ್ದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಬಿ.ಐತ್ತಪ್ಪ ನಾಯ್ಕ ಪುಸ್ತಕ ಬಿಡುಗಡೆಗೆ ಸಹಕರಿಸಿದರು.

bhavatanti1
ಸೃಜನಶೀಲ ಕವಯಿತ್ರಿಯಾಗಿರುವ ಪ್ರಜ್ಞಾ ಕುಲಾಲ್ ಅವರು ಪುತ್ತೂರು ಕಾವು ವೆಂಕಪ್ಪ ಕುಲಾಲ್ ಮತ್ತು ಮಿನಾಕ್ಷಿ ದಂಪತಿಗಳ ಪುತ್ರಿ. ಎಂ.ಕಾಂ ಪದವೀಧರೆಯಾಗಿರುವ ಇವರು ಪ್ರಸ್ತುತ ಕುಂಬ್ರ ಶಾರದಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವು, ಫ್ರೌಡ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಪಾಪೆಮಜಲು, ಪಿಯುಸಿ ಶಿಕ್ಷಣವನ್ನು ಪುತ್ತೂರಿನಲ್ಲಿ , ಬಿ.ಕಾಂ ಪದವಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರಿನಲ್ಲಿ , ಎಂ.ಕಾಂ ಉನ್ನತ ಶಿಕ್ಷಣವನ್ನು ಡಾ. ಕೆ.ಶಿವರಾಮ ಕಾರಂತ ಕಾಲೇಜು ಪೆರುವಾಜೆಯಲ್ಲಿ ಮುಗಿಸಿಕೊಂಡು 73% ಫಲಿತಾಂಶ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಅನೇಕ ಆಸಕ್ತಿಕರ ಹವ್ಯಾಸ ಹೊಂದಿರುವ ಇವರು ಎಳವೆಯಲ್ಲೇ ಹಾಡು ಹಾಗೂ ಸಾಹಿತ್ಯದ ಗೀಳು ಬೆನ್ನಿಗಂಟಿಸಿಕೊಂಡಿದ್ದು, ಕಾಲೇಜು ದಿನಗಳಲ್ಲಿ ನಾರಾಯಣ ರೈ ಕುಕ್ಕುವಳ್ಳಿಯವರು ಮಾರ್ಗದರ್ಶನದಲ್ಲಿ ಕವನ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಭಾವತನ್ಮಯತೆಯ ಕವಿತೆಗಳಿಂದಲೇ ಓದುಗರ ಮನ ಸೆಳೆಯುವತ್ತ ಸಾಗಿರುವ ಇವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಐತ್ತಪ್ಪ ಅವರ ಪ್ರೇರಣೆಯಂತೆ ಭಾಗವಹಿಸಿ ಕವನ ವಾಚಿಸುವ ಅವಕಾಶವನ್ನು ಪಡೆದಿದ್ದಾರೆ. ಅಲ್ಲದೆ ಹಲವು ಕಡೆ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಕವನ ವಾಚನದ ಮೂಲಕ ತೋರಿಸಿಕೊಟ್ಟಿದ್ದಾರೆ. ಇವರು ಬರೆದ ಕವನಗಳು `ಮಧುಪ್ರಪಂಚ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

ಹರ್ಷಿತಾ ಕುಲಾಲ್ ಕಾವು


Related News

ಮೇ.19ರಂದು ಫರಂಗಿಪೇಟೆ ಕುಲಾಲ ಸಂಘದ ರಜತ ಸಂಭ್ರಮ: ಆಮಂತ್ರಣ...
views 532
ಬಂಟ್ವಾಳ(ಮೇ. ೦೫, ಕುಲಾಲ್ ವರ್ಲ್ಡ್ ನ್ಯೂಸ್) :ಫರಂಗಿಪೇಟೆ ಕುಲಾಲ ಸುಧಾರಕ ಸಂಘಕ್ಕೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ `ರಜತ ಸಂಭ್ರಮ' ಕಾರ್ಯಕ್ರಮವು ಮೇ.19 ಮತ್ತು 20ರಂದು...
ನ. 4ರಂದು ಪುಟ್ಟಣ್ಣ ಕುಲಾಲ್ ಯುವಕವಿ ಪ್ರಶಸ್ತಿ ಪ್ರದಾನ...
views 895
ಕುಂದಾಪುರ : ಇಲ್ಲಿನ ಕುಂದಪ್ರಭ ಟ್ರಸ್ಟ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿವರ್ಷ ನೀಡುತ್ತಿರುವ ಪುಟ್ಟಣ್ಣ ಕುಲಾಲ್ ಯುವಕವಿ ಪ್ರಶಸ್ತಿ ಪ್ರದಾನ ಹಾಗೂ 4ನೇ ವರ್ಷದ...
ಐದು ತಲೆಮಾರು ಕಂಡ ಹಿರಿಯ ಚೇತನ ಬಿ.ಸಿ ರೋಡಿನ ಕಲ್ಯಾಣಿ ಮೂಲ...
views 4313
ಇದು ಜಾಲತಾಣದಲ್ಲಿ ಫೇಮಸ್ ಆದ ಮಹಾಮಾತೆ ಕುಟುಂಬ (ಕುಲಾಲ್ ವರ್ಲ್ಡ್ ಡಾಟ್ ಕಾಮ್, ಮಾರ್ಚ್-೨೦,೨೦೧೮) ಇತ್ತೀಚಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಐದು ತಲೆಮಾರು ತುಳುನಾಡಿನಲ್ಲಿ ಆಗ...
ಉಪನ್ಯಾಸಕ ರೋಹಿಣಾಕ್ಷರಿಗೆ ಡಾಕ್ಟರೇಟ್ ಪದವಿ...
views 2366
ಪುತ್ತೂರು : ಇಲ್ಲಿಯ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ರೋಹಿಣಾಕ್ಷ ಇವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ನೀಡಿದೆ. ಇವರು ಮಂಗಳೂರು ವ...
ಬಂಟ್ವಾಳ ಲಯನೆಸ್ ಕ್ಲಬ್ ಅಧ್ಯಕ್ಷರಾಗಿ ದೇವಿಕಾ ದಾಮೋದರ್ ಆಯ...
views 1354
ಬಂಟ್ವಾಳ : ಲಯನೆಸ್ ಕ್ಲಬ್ ಬಂಟ್ವಾಳದ 2016-17ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ದೇವಿಕಾ ದಾಮೋದರ್ ಮಾರ್ನಬೈಲು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಶರ್ಮಿಳಾ ಸುಧಾಕರ್, ಕೋಶಾ...

Leave a Reply

Your email address will not be published. Required fields are marked *