ಪೆರ್ಡೂರು ಕುಲಾಲ ಸಂಘದಲ್ಲಿ ಮೇಳೈಸಿದ ದಶಮಾನೋತ್ಸವ ವೈಭವ !


ಕದಳೀಪ್ರಿಯನ ನೆಲದಲ್ಲಿ ಜರುಗಿತು ಐತಿಹಾಸಿಕ ‘ಕುಲಾಲ ಸಮಾವೇಶ’: ಹರಿದು ಬಂತು ಜನಸಾಗರ

pr

ಪೆರ್ಡೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪೊಡವಿಗೊಡೆಯ ಉಡುಪಿಯ ಕಡೇಗೋಲ ಕೃಷ್ಣನಿಗೆ ಸಮೀಪವಾಗಿ, ಕದಳೀ ಪ್ರಿಯ ಅನಂತ ಪದ್ಮನಾಭನ ಪಾದದೂಳಿಯಿಂದ ಪಾವನನೆಲ ಎನಿಸಿದ ಪೆರ್ಡೂರಿನಲ್ಲಿ ಮೈದಳೆದು ನಿಂತ ಕುಲಾಲ ಸಂಘ ಪೆರ್ಡೂರು ಇದರ ಐತಿಹಾಸಿಕ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಜರುಗಿದ ಕುಲಾಲರ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡ ‘ಕುಲಾಲ ಸಂಭ್ರಮ’ ಅಭೂತಪೂರ್ವ ಯಶಸ್ಸಿನೊಂದಿಗೆ ಶುಭಾಂತ್ಯಗೊಂಡಿತು. ಸರಿಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಸಮಾವೇಶಕ್ಕೆ ಆಗಮಿಸಿ ಕುಂಭ ಶಕ್ತಿಯನ್ನು ಜಗಜ್ಜಾಹಿರುಗೊಳಿಸಿದರು. ಸಾಮಾಜಿಕ-ರಾಜಕೀಯ ಪ್ರಾತಿನಿಧ್ಯ ಕುಲಾಲರಿಗೆ ಸಿಗಲಿ ಎಂಬ ಒಕ್ಕೂರಲ ಹಕ್ಕೋತ್ತಾಯ ಎಲ್ಲೆಡೆಯಿಂದ ಮೂಡಿಬಂತು.

pr1

ಹೌದು..ಡಿ. ೨೩ರ ಆ ದಿನ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಮುದಾಯ ಭವನ ನವವದುವಿನಂತೆ ತಳಿರು-ತೋರಣಗಳಿಂದ ಶೃಂಗಾರಗೊಂಡು ನಿಂತಿತು. ಕುಲಾಲ ಸಮುದಾಯದ ಇತಿಹಾಸದಲ್ಲೆ ವಿಶಿಷ್ಟ ಸಂರಚನೆಯೊಂದಿಗೆ ನಿರ್ಮಾಣಗೊಂಡ ಬೃಹತ್ ವೇದಿಕೆ, ಸಭಾಂಗಣ, ಸ್ವಾಗತ ಗೋಪುರ ಪ್ರತಿಯೊಂದು ಕುಂಭ ಪರಿಮಳವನ್ನು ಸೂಸುತ್ತಾ ಸಾಗಿ ಬಂದ ಅಪಾರ ಜನಸ್ತೋಮವನ್ನು ಕೊಂಬು ಕಹಳೆ ಚಂಡೆಯ ಸದ್ದಿನೊಂದಿಗೆ ಪ್ರೀತ್ಯಾಧರದಿಂದ ಸ್ವಾಗತಿಸಿಕೊಂಡಿತು. ಅಕ್ಷರಶಃ ಕರಾವಳಿಯಲ್ಲಿ ಕುಂಬಾರ ಜಾತ್ರೆಯೇ ನಡೆದುಹೋಯ್ತು.

pr2

ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಐತು ಕುಲಾಲ್ ಕನ್ಯಾನ ಅವರ ಪ್ರಾಯೋಜಕತ್ವದಲ್ಲಿ ರೂಪಿತಗೊಂಡ ನವೀಕೃತ ವೇದಿಕೆ ಮತ್ತು ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರಾಮ ಕುಲಾಲ್ ಪಕ್ಕಾಲು ಅವರ ಪ್ರಾಯೋಜಕತ್ವದಲ್ಲಿ ರೂಪಿತಗೊಂಡ ಸಭಾಂಗಣದ ಅವರಣ ಗೋಡೆಯನ್ನು ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ದಿವ್ಯ ಹಸ್ತದಿಂದ ಉದ್ಘಾಟಿಸಿದರು. ಹಿರಿಯ ಕುಲಾಲ ಮುತ್ಸದ್ದಿ ಐತು ಕುಲಾಲ್ ಕನ್ಯಾನ ಕುಲಾಲ ಸಮುದಾಯ ಸಾಗಿ ಬಂದುದರ ಭವ್ಯ ಕಥನದಂತೆ ರೂಪಗೊಂಡ ಕುಂಬಾರಿಕೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ತಂದಿತ್ತರು.

pr3

ನಂತರ ನಡೆದ ಐತಿಹಾಸಿಕ ಕುಲಾಲ ಸಮಾವೇಶವನ್ನು ಉದ್ಘಾಟಿಸಿದ ಮಾಣಿಲ ಶ್ರೀಗಳು ಮಣ್ಣಿನ ಕಾಯಕ ಕರ್ಮದ ಶ್ರೇಷ್ಟತೆ, ಮೌಲ್ಯಗಳ ಪ್ರಸಾರಿಕೆ, ಭಜನೆಯ ಮಹತ್ವದ ಕುರಿತು ಆಶೀರ್ವಚನದ ನಲ್ನುಡಿಗಳನ್ನು ಇತ್ತು ನೆರೆದ ಜನಸ್ತೋಮವನ್ನು ಪಾವನಗೊಳಿಸಿದರು. ಕರ್ನಾಟಕ ರಾಜ್ಯ ಕುಂಬಾರರ ಮಾಹಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಚೌಡಶೆಟ್ಟಿ ‘ಕುಲಾಲ ಸಮಾಜ ವಸ್ತುಸ್ಥಿತಿ’ ವಿಷಯದ ಕುರಿತು ನೇರ-ನಿಷ್ಠುರ ದಿಕ್ಸೂಚಿ ಮಾತುಗಳನ್ನಾಡಿದರು. ಕುಲಾಲ ಸಮುದಾಯ ಸಾಗಿ ಬಂದ ಇತಿಹಾಸ, ರಾಜಕೀಯ ಪ್ರಾತಿನಿಧ್ಯದದ ಅನಿವಾರ್ಯತೆ, ರಾಜಕೀಯ ಪಕ್ಷಗಳ ಕಡೆಗಣನೆ, ಕುಂಬಾರ  ಸಮುದಾಯ ಒಗ್ಗಟ್ಟಿನ ಅನಿವಾರ್ಯತೆಯ ಕುರಿತು ಶ್ರೇಷ್ಟ ಮಾತುಗಳು ಶಿವಕುಮಾರ ಚೌಡಶೆಟ್ಟಿಯವರಿಂದ ಅಭಿವ್ಯಕ್ತಗೊಂಡಿತು. ಇದೇ ಸಂಧರ್ಭ ಕರಾವಳಿ ಕುಲಾಲ ಯುವ ವೇದಿಕೆಯಿಂದ ದಶಮಾನದ ಸಂಭ್ರಮದಲ್ಲಿ ಮಣ್ಣಿನ ಹಣತೆಗಳನ್ನು ಜನರಿಗೆ ವಿತರಿಸಿದ್ದು ಕಾರ್ಯಕ್ರಮದ ಅರ್ಥಪೂರ್ಣತೆಯನ್ನು ಹೆಚ್ಚಿಸಿತು.

pr4

ಈ ಐತಿಹಾಸಿಕ ಕುಲಾಲ ಸಮಾವೇಶದಲ್ಲಿ ಕುಲಾಲ ಸಮಾಜದ ಕಣ್ಮಣಿಗಳಾದ ಧೀಮಂತ ಪತ್ರಕರ್ತ ಅಮ್ಮೆಂಬಳ ಆನಂದ, ಕುಲಾಲ ರತ್ನ ಡಾ. ಎಮ್ ವಿ ಕುಲಾಲ್, ಕುಲಾಲ ಕಣ್ಮಣಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ದಶಮಾನದ ಗೌರವ ಪುರಸ್ಕಾರವನ್ನಿತ್ತು ಗೌರವಿಸಿದ್ದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿತು. ಆಗಮಿಸಿದ ಜನಪ್ರತಿನಿಧಿಗಳಾದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಪೌಂಡೇಶನಿನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಕುಂಬಾರ ಸಮುದಾಯದ ಬಗೆಗೆ ಪ್ರಿತಿಯಿಟ್ಟು ಶುಭಹಾರೈಕೆಯ ಮಾತುಗಳನ್ನು ಹೇಳಿದರು.

pr5

ಪೆರ್ಡೂರು ಕುಲಾಲ ಸಂಘದ ಈ ಐತಿಹಾಸಿಕ ದಶಮಾನೋತ್ಸವ ಸಮಾರಂಭದಲ್ಲಿ ಸಾಮಾಜಿಕ ಮತ್ತು ಮಾಧ್ಯಮ ಸೇವೆಗಾಗಿ ಕುಲಾಲ ಸಮುದಾಯದ ವಾಣಿ `ಕುಲಾಲ್ ವಲ್ಡ್ .ಕಾಮ್’ ಗೆ, ರಾಜ್ಯಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರಿಗೆ, ರಾಷ್ಟ್ರಪತಿ ಚಿನ್ನದ ಪದಕ ಪುರಸ್ಕೃತ ನರಶಾಸ್ತ್ರ ವಿಭಾಗದ ಪ್ರಸಿದ್ದ ವೈದ್ಯ ಡಾ. ಪುಷ್ಪರಾಜ್, ಸಂಶೋಧಕ ಡಾ. ಸಂದೀಪ್ ಕೆ. ವಿ ಬೈರಂಪಳ್ಳಿ, ಯಕ್ಷಗುರು ಐರೋಡಿ ಮಂಜುನಾಥ್ ಕುಲಾಲ್, ಚಲನಚಿತ್ರ ನಟ ಮತ್ತು ರಂಗಕರ್ಮಿ ತಿಮ್ಮಪ್ಪ ಕುಲಾಲ್ ಬಿ.ಸಿ ರೋಡ್, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೆಶಕ ಶೇಖರ ಕುಲಾಲ್, ರಂಗಭೂಮಿ ಕಲಾವಿದ ರಾಜೇಶ್ ಮುಗುಳಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಪ್ರಗತಿಪರ ಕೃಷಿಕ ರುಕ್ಕಯ್ಯ ಮೂಲ್ಯ ಪಾವಂಜೆ, ಚಲನಚಿತ್ರ ನಟಿ ಅಮಿತಾ ಕುಲಾಲ್, ಗಾಯಕಿ ವಿಜಯಲಕ್ಷ್ಮಿ ಮೆಟ್ಟಿನಹೊಳೆ ಸೇರಿದಂತೆ ಹಲವು ಸಾಧಕರಿಗೆ ಕುಲಾಲ ಸಂಭ್ರಮ ಗೌರವ ಪುರಸ್ಕಾರ ಮತ್ತು ಯುವ ಪುರಸ್ಕಾರವನ್ನಿತ್ತು ಗೌರವಿಸಲಾಯ್ತು.

pb

ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಾಕರಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಪೆರ್ಡೂರು ಗ್ರಾ. ಪಂ ಅಧ್ಯಕ್ಷೆ ಶಾಂಭವಿ ಕುಲಾಲ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.

pb2

ದಶಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಶಂಕರ್ ಕುಲಾಲ್ ಪೆರಂಪಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಮೂಲ್ಯ ಹಿರಿಯಡಕ ಪ್ರಸ್ತಾವಿಸಿ ಪೆರ್ಡೂರು ಕುಲಾಲ ಸಂಘ ಸಾಗಿ ಬಂದುದುರ ಬಗೆಗೆ ಸೊಗಸಾಗಿ ವಿಸ್ತರಿಸಿದರು. ಮಂಜುನಾಥ ಹಿಲಿಯಾಣ ಯಶಸ್ವಿಯಾಗಿ ಕಾರ್ಯಕ್ರಮ ನಿರೂಪಿಸಿದರು.

momento2

ನಂತರ ನಡೆದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಪ್ರಾದ್ಯಪಕ ಡಾ. ದುಗ್ಗಪ್ಪ ಕಜೆಕಾರ್ `ತುಳುನಾಡ ಕುಲಾಲರಲ್ಲಿ ಬಳಿ(ಬರಿ) ಪದ್ಧತಿ: ಒಂದು ವಿಶ್ಲೇಷಣೆ’ ಎಂಬ ವಿಷಯದ ಕುರಿತು ಪ್ರಾಜ್ಞ ಮಾತುಗಳನ್ನಾಡಿದರು. ಉಪ್ಯಾನ್ ಬರಿಯ ಹೆಣ್ಣು ಮಕ್ಕಳ ಮೇಲೆ ಇರುವ ಮೂಢನಂಬಿಕೆ ತಪ್ಪಾದ ಸಂಪ್ರದಾಯ. ಎಲ್ಲ ಬರಿಗಳು ಒಂದೇ ಎಂಬ ದಿಟ್ಟ ಮಾತುಗಳು ಅವರಿಂದ ಅಭಿವ್ಯಕ್ತಗೊಂಡಿತು. ನಂತರ ತುಳುವ ಬೊಳ್ಳಿ ದಯಾನಂದ ಜಿ. ಕತ್ತಲ್ ಸಾರ್ ‘ಮಣ್ಣಿನ ಮಕ್ಕಳ ಮಹಿಮೆಯ ಮರ್ಮ ಕುಂಬಾರರ ಬಗ್ಗೆ ನುಡಿಸೇಸೆ’ ಎನ್ನುವ ವಿಶಿಷ್ಟ ವಿಷಯದ ಮೇಲೆ ಅರ್ಥಪೂರ್ಣ ಮಾತುಗಳನ್ನಾಡಿದರು.

momento

ದಶಮಾನೋತ್ಸವ ಸಮಿತಿಯ ವಿಶಿಷ್ಟ ಪರಿಕಲ್ಪನೆಯಲ್ಲಿ ರಾಜ್ಯದ ಸಮುದಾಯ ಕಾರ್ಯಕ್ರಮದಲ್ಲೆ ಮೊದಲಬಾರಿಗೆ ಎಂಬಂತೆ ರೂಪಿತಗೊಂಡ ‘ಯುವ ಉದ್ಯಮಿಗಳ ಸಮ್ಮಿಲನ’ ಎಂಬ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಯುವ ಉದ್ಯಮಿಗಳ ಉದ್ಯಮದ ಪರಿಚಯವನ್ನು ಸೇರಿದ ಜನಸ್ತೋಮಕ್ಕೆ ಮಾಡಿಕೊಡಲಾಯಿತು. ಯಶಸ್ವಿ ಉದ್ಯಮಿಗಳನ್ನು ಸನ್ಮಾನಿಸಿ ಗೌರವಿಸಲಾಯ್ತು. ಪೆರ್ಡೂರು ಕುಲಾಲ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ದಿನೇಶ್ ಪಟ್ಲ ಅವರ ಸಾರಥ್ಯದಲ್ಲಿ ನಂತರ ನಡೆದ ಸ್ಪರ್ಧಾ ಸಾಂಸ್ಕೃತಿಕ ಕಾರ್ಯಕ್ರಮ ನರೆದ ಜನಸ್ತೋಮವನ್ನು ಸಾಂಸ್ಕೃತಿಕ ಲೋಕಕ್ಕೆ ಕರೆದು ತಂದಿತು. ಶಿಳ್ಳೆ, ಚಪ್ಪಾಳೆಗಳೇ ತುಂಬಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಒಟ್ಟಿನಲ್ಲಿ ಪೆರ್ಡೂರು ಕುಲಾಲ ಸಂಘದ ಈ ಐತಿಹಾಸಿಕ ದಶಮಾನೋತ್ಸವ ಕರಾವಳಿಯ ಕುಲಾಲ ಸಂಘಟನೆಯ ಗಟ್ಟಿ ಧ್ಯೋತಕದಂತೆ ಅಭೂತಪೂರ್ವ ಯಶಸ್ಸಿನಿಂದ ಸಾಗಿ ಬಂತು.

mm

ಸಮಾರಂಭದ ವಿಶೇಷತೆ:
ಸಂಘಟನೆಯೊಂದು ಗಟ್ಟಿಯಾಗಿದ್ದರೆ, ಕಾಯಕರ್ತರು ಶಿಸ್ತುಬದ್ದವಾಗಿ ಸಂಘಟಿಸಿದರೆ ಸಮುದಾಯ ಕಾರ್ಯಕ್ರಮವೊಂದನ್ನು ಎಷ್ಟು ಅಭೂತಪೂರ್ವವಾಗಿ ಸಂಘಟಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಕಾರ್ಯಕ್ರಮ ಮೂಡಿಬಂತು. ಎಲ್ಲೆಲ್ಲೂ ಅಚ್ಚುಕಟ್ಟುತನ ಶಿಸ್ತು ಎದ್ದು ಕಾಣುತ್ತಿತ್ತು. ಸಭಾಂಗಣದ ತುಂಬ ಮಣ್ಣಿನ ಪರಿಕರಗಳು ತುಂಬಿ ಕುಂಭ ಗಾಳಿಯನ್ನು ಎಲ್ಲೆಡೆ ಪಸರಿಸುತ್ತಿತ್ತು. ಮಣ್ಣಿನಿಂದಲೇ ತಯಾರಿಸಿದ ದೀಪದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯ್ತು. ಭಕ್ತ ಕುಂಬಾರನ ಪರಿಕಲ್ಪನೆಯಲ್ಲಿ ಮಣ್ಣಿನಿಂದ ತಯಾರಿಸಿದ ಸ್ಮರಣಿಕೆಯನ್ನು ಗಣ್ಯರಿಗೆ ನೀಡಿದ್ದು ಸೊಗಸಾಗಿತ್ತು. ಆಗಮಿಸಿದ ಅತಿಥಿ ಮಹೋದಯರನ್ನು ಚಂಡೆ ಕಹಳೆಯ ಸದ್ದಿನೊಂದಿಗೆ ಬರಮಾಡಿಕೊಳ್ಳಲಾಗುತ್ತಿತ್ತು. ಸಹಭೋಜನ ಕೂಡ ಅತೀ ಶಿಸ್ತಿನಿಂದ ಸಾಗಿದ್ದು ಅಚ್ಚುಕಟ್ಟುತನ ಎಲ್ಲೆಲ್ಲೂ ಕಾಣುತಿತ್ತು. ಅಂದಾಜು ಐದುಸಾವಿರಕ್ಕೂ ಜಾಸ್ತಿ ಮಂದಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಉಂಡು ಸಂಭ್ರಮಿಸಿದರು. ಪೆರ್ಡೂರು ಕುಲಾಲ ಸಂಘದ ಕಾರ್ಯಕರ್ತರು ರಾಜಸ್ಥಾನಿ ಪೇಟವನ್ನು ತೊಟ್ಟು ಜವಬ್ದಾರಿತನದಿಂದ ದುಡಿಯುತ್ತಿದ್ದುದು ಮೆಚ್ಚುವಂತಿತ್ತು. ಬಂದ ಸಮಸ್ತರು ಕಾರ್ಯಕ್ರಮದ ವೈಭವವನ್ನು ನೋಡಿ ಖುಷಿ ಪಟ್ಟರು.

mm1

‘ಮಣ್ಣಿನ ಕಾಯಕದಿಂದ ಬದುಕನ್ನು ಆರಂಭಿಸಿದ ಕುಂಬಾರರು ಈ ನೆಲದ ನಿಜವಾದ ಮಣ್ಣಿನ ಮಕ್ಕಳು. ಕರಾವಳಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಇರುವುದು ಖಚಿತ. ಸಂಘಟನೆಯ ಮೂಲಕ ಒಗ್ಗೂಡಿ ಸಾಮಾಜಿಕವಾಗಿ-ಶೈಕ್ಷಣಿಕವಾಗಿ ಮುಂದೆ ಬರಲಿ ಎಂಬುದು ನನ್ನ ಆಶಯ’
-ಕೋಟ ಶ್ರೀನಿವಾಸ್ ಪೂಜಾರಿ( ಮಾನ್ಯ ವಿಧಾನಪರಿಷತ್ ಪ್ರತಿಪಕ್ಷ ನಾಯಕರು)

mm2

‘ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕುಲಾಲರು ನನಗೆ ನೀಡಿದ ಬೆಂಬಲವನ್ನು ನಾನು ಸದಾ ನೆನಪಿಡುತ್ತೇನೆ. ಕುಂಬಾರರಿಗೆ ಸಾಮಾಜಿಕ-ರಾಜಕೀಯ ಸ್ಥಾನ ಸಿಗಲಿ ಎಂದು ಆಶಿಸುತ್ತೇನೆ.
-ಲಾಲಾಜಿ ಆರ್ ಮೆಂಡನ್ (ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ)

mm3

‘ಕಷ್ಟಕಾರ್ಪಣ್ಯದ ಬದುಕಿನಿಂದ ಬಂದ ಕುಂಬಾರರು ಈ ನೆಲದ ಶ್ರೇಷ್ಟ ಮಕ್ಕಳು. ಕುಂಬಾರಿಕೆಯ ಪರಿಕರ ಸದಾ ಕಾಲಕ್ಕೂ ಬೇಕಾಗುವ ದೇಸಿ ಪರಿಕರ. ಆಧುನಿಕ ಮಾರುಕಟ್ಟೇ ಕುಂಬಾರಿಕೆಗೆ ಸಿಗಬೇಕು’
-ಪ್ರಮೋದ್ ಮಧ್ವರಾಜ್, (ಮಾಜಿ ಸಚಿವರು ಕರ್ನಾಟಕ ಸರಕಾರ)

mm4

‘ನನಗೂ ಕುಂಬಾರ ಸಮುದಾಯಕ್ಕೂ ಅವಿನಭಾವ ಸಂಬಂಧ ಇದೆ. ಪ್ರಾಮಾಣಿಕತೆ-ಸಜ್ಜನಿಕೆಗೆ ಹೆಸರಾದ ಕುಂಬಾರ ಸಮುದಾಯ ಎಂದರೆ ನನಗೆ ಅಪಾರ ಪ್ರೀತಿ. ರಾಜಕೀಯವಾಗಿ ಕುಂಬಾರರಿಗೆ ಸ್ಥಾನಮಾನ ಸಿಗುವಲ್ಲಿ ನಾನು ಕುಂಬಾರರ ಜೊತೆ ಸದಾ ಇದ್ದೇನೆ’
ವಿನಯ್ ಕುಮಾರ್ ಸೊರಕೆ-(ಮಾಜಿ ಸಚಿವರು, ಕರ್ನಾಟಕ ಸರಕಾರ)

mm5

ದೇಸಿ ಬದುಕಿನ ಶ್ರೇಷ್ಟತೆಯ ಪ್ರತಿಪಾದಕರು ಕುಂಬಾರರು. ಶೈಕ್ಷಣಿಕವಾಗಿ ಆರ್ಥಿಕವಾಗಿ ಮೇಲೆ ಬರಲಿ. ಕುಂಬಾರರು ಇನ್ನಷ್ಟು ಗಟ್ಟಿಯಾಗಿ ಸಂಘಟನೆಯಡಿಯಲ್ಲಿ ಒಗ್ಗೂಡಲಿ’
-ಗುರ್ಮೆ ಸುರೇಶ್ ಶೆಟ್ಟಿ(ಸಮಾಜಸೇವಕರು, ಉದ್ಯಮಿ ಕಾಪು)

ವಿಶೇಷ ವರದಿ: ಮಂಜುನಾಥ ಹಿಲಿಯಾಣ, ಮಣಿಪಾಲ

 kk

kk2kk3kk4kk5kk7


Related News

ಕೊಡಗು ಜಿಲ್ಲಾ ಕುಲಾಲ ಸಂಘದ ಶ್ರೀಸತ್ಯನಾರಾಯಣ ದೇವರ ಪೂಜೆ...
views 897
ಮಡಿಕೇರಿ: ಕೊಡಗು ಜಿಲ್ಲಾ ಕುಲಾಲ(ಕುಂಬಾರ) ಸಂಘದ ವತಿಯಿಂದ ಓಂಕಾರೇಶ್ವರ ದೇವಾಲಯದ ಆವರಣದ ’ಓಂಕಾರ ಸದನ’ ದಲ್ಲಿ ಶ್ರೀಸತ್ಯನಾರಾಯಣ ದೇವರ ಸಾಮೂಹಿಕ ಪೂಜೆ ಶ್ರದ್ಧಾಭಕ್ತಿಯಿಂದ ಇತ್ತ...
ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತನಿಯಪ್ಪ ಮೂಲ್ಯರಿ...
views 1825
ತನಿಯಪ್ಪ ಮೂಲ್ಯರ ದಯನೀಯ ಸ್ಥಿತಿಯನ್ನು ಕಂಡು ಮಾನವೀಯ ನೆಲೆಯಲ್ಲಿ `ಕುಲಾಲ್ ವರ್ಲ್ಡ್' ವಾಟ್ಸಪ್ ಗ್ರೂಪಿನ ಪರವಾಗಿ ಆರ್ಥಿಕ ಸಹಾಯ ನೀಡಲು ಯೋಜಿಸಲಾಗಿದೆ. ಬೆಳ್ತಂಗಡಿ : ಇಲ್ಲಿನ ...
ನಿಷ್ಕಳಂಕ ಸಮಾಜ ಸೇವಕಿ : ಮಿಜಾರಿನ ಜಾನಕಿ ಮೂಲ್ಯ...
views 2117
ಮೂಡಬಿದಿರೆ : ಮಿಜಾರಿನ ಗ್ರಾಮಸ್ಥರಿಗೆ ಪಂಜುರ್ಲಿಗುಡ್ಡೆ ಜಾನಕಿ ಮೂಲ್ಯ ಅವರೆಂದರೆ ಚಿರಪರಿಚಿತ ಮತ್ತು ಆತ್ಮೀಯತೆಯ ಹೆಸರು. ಬಡಗ ಮಿಜಾರಿನ ಪಂಜುರ್ಲಿಗುಡ್ಡೆಯಲ್ಲೇ ಹುಟ್ಟಿ ಬೆಳೆದ...
ಬಂಟ್ವಾಳ ಕರಾವಳಿ ಕುಲಾಲ ವೇದಿಕೆ ವತಿಯಿಂದ `ಸರ್ವಜ್ಞ ಟ್ರೋಫ...
views 144
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಸರ್ವಜ್ಞ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸ...
ಎರಡೂ ಕಿಡ್ನಿ ವೈಫಲ್ಯ; ದಯಾನಂದ ಕುಲಾಲರಿಗೆ ಬೇಕು ಸಹೃದಯರ ನ...
views 3578
ಉಡುಪಿ(ಏ.೦೪): ಅದೊಂದು ಸುಖಿ ಸಂಸಾರ. ಮೂರು ಹೊತ್ತಿನ ಬಾಳ ಬುತ್ತಿಗೆ ಆಸರೆಯಾಗಿದ್ದ ರಿಕ್ಷಾ ಚಾಲನೆ ಆ ಪುಟ್ಟ ಸಂಸಾರದ ಆದಾಯದ ಮೂಲರಥ ಆಗಿತ್ತು. ಇದ್ದದ್ದರಲ್ಲೇ ಸುಖ ಪಡುತ್ತಾ, ದುಡಿದ...

Leave a Reply

Your email address will not be published. Required fields are marked *