ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ-ಸನ್ಮಾನ


ppr1

ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲರು ಸತ್ಯ, ಧರ್ಮ ಮತ್ತು ನಿಷ್ಠೆಗೆ ಹೆಸರಾದವರು. ಇಂತಹ ಸತ್ ಚಿಂತನೆಯಿಂದ ಬಾಳುತ್ತಿರುವ ನಮಗೆ ಸತ್ಯ ಮಾರ್ಗವೇ ಸಮಾಜ ಹಿಂದುಳಿಯಲು ಕಾರಣವಾಗಿದ್ದು, ಕುಲಾಲರು ಬಲಿಷ್ಠ ಸಂಘಟನೆ ಕಟ್ಟುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಭಿಪ್ರಾಯಪಟ್ಟರು.

ptr1
ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಫೆ.೩ರಂದು ನಡೆದ ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕಾರ ಅತ್ಯಗತ್ಯ. ಸಂಸ್ಕಾರವಿಲ್ಲದ ಜೀವನ ಸಹ್ಯವೆನಿಸುವುದಿಲ್ಲ. ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಸಂಸ್ಕೃತಿಗಳ ಪಾಠ ಸಿಗಬೇಕು. ಆ ಮೂಲಕ ನಮ್ಮ ಮುಂದಿನ ಪೀಳಿಗೆಯನ್ನು ಬೆಳೆಸಿ ಸಮಾಜಕಟ್ಟುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.

ptr2
ಸಂಘದ ಅಧ್ಯಕ್ಷ ದಿನೇಶ್ ಪಿ ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಸೌಂದರ್ಯ ರಮೇಶ್, ದ.ಕ ಕುಲಾಲ ಸಂಘದ ಉಪಾಧ್ಯಕ್ಷ ರಮೇಶ್, ಶಿಕ್ಷಕ ದೇವದಾಸ್, ಉದ್ಯಮಿ ರಾಮ, ಸಾಹಿತಿ-ಇಂಜಿನಿಯರ್ ಆನಂದ ಬಂಜನ್, ಭಾಸ್ಕರ್, ರತ್ನ ಕೃಷ್ಣಪ್ಪ, ಸಚ್ಚಿದಾನಂದ ಮೊದಲಾದವರು ಭಾಗವಹಿಸಿದ್ದರು.

ptr3

ಆನಂದ ಅಳಿಕೆ, ಜನಾರ್ಧನ, ಧರ್ಣಪ್ಪ, ಕವಿತಾ ದಿನಕರ್, ಮಹೇಶ್ ಕೆ ಸವಣೂರು, ಶಿವಪ್ಪ ಮೂಲ್ಯ, ಯಶವಂತ ಉರ್ಲಾ೦ಡಿ, ಸುಧಾಕರ ಕುಲಾಲ್, ಚಿತ್ರ ಬಲ್ನಾಡು, ಮುರಳಿ, ಧರ್ಣಪ್ಪ, ತ್ರಿವೇಣಿ ದಿನಕರ್, ನವೀನ ಕುಲಾಲ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ptr4
ಸನ್ಮಾನ : ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಚಂದ್ರಶೇಖರ್, ಡಾ. ರಾಕೇಶ್ ಕೆ, ಬಂಗೇರ, ಯಶಸ್ವೀ ಕೆದಿಲ ಅವರನ್ನು ಸನ್ಮಾನಿಸಲಾಯಿತು.

ptr5
ಧಾರ್ಮಿಕ ಕಾರ್ಯಕ್ರಮ: ಬೆಳಿಗ್ಗೆ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಮತ್ತು ಭಜನೆ ನಡೆಯಿತು. ಸಭೆಯ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ptr6 ptr7 ptr8 ptr9ppr


Related News

ನವಿಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ನೂತನ ಪದಾಧಿಕಾರಿಗಳ...
views 1054
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಮಹಿಳಾ ವಿಭಾಗದ 2015-2017 ರ ಸಾಲಿನ ಪಧಾದಿಕಾರಿಗಳ ಆಯ್ಕೆಯು ಇತ್ತೀಚಿಗೆ ನಡೆಯಿತು. ಈ ಸಂದರ್ಭದಲ್ಲಿ ಪ್ರೇಮ ಎಲ್ ಮೂಲ್ಯ ...
ಎಬಿವಿಪಿ ರಾಜ್ಯ ಉಪಾಧ್ಯಕ್ಷರಾಗಿ ರೋಹಿಣಾಕ್ಷ ಶಿರ್ಲಾಲು ಆಯ್...
views 110
ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ) ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರೋಹಿಣಾಕ...
`ಕರ್ನಾಟಕ ವಿಭೂಷಣ’ ರಾಜ್ಯ ಪ್ರಶಸ್ತಿಗೆ ಕಲಾವಿದ ಯಲ್...
views 638
ಬೆಂಗಳೂರು(ಸೆ.೧೧, ಕುಲಾಲ್ ಕುಲಾಲ್ ವರ್ಲ್ಡ್ ನ್ಯೂಸ್): ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಬೆಂಗಳೂರು ವತಿಯಿಂದ ನೀಡಲಾಗುವ `ಕರ್ನಾಟಕ ವಿಭೂ...
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ದಾಸರ ...
views 1158
ಮಂಗಳೂರು : ಮರೋಳಿ ಜೋಡುಕಟ್ಟೆಯ ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜರುಗುವ ಸಾರ್ವಜನಿಕ ಗಣೇಶೋತ್ಸವ ಚಪ್ಪರದ ದೇವರ ಸಮ್ಮುಖದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಆಹ್ವಾನಿತ ಭಜನಾ ತಂಡಗಳ...
28 ವರ್ಷಗಳಿಂದ ಕತ್ತಲೆ ಕೋಣೆಯೇ ಈ ಯುವತಿಯ ಬದುಕು…!...
views 1552
ಮೂಲಸಮಸ್ಯೆಗಳ ಸುಳಿಯಲ್ಲಿ ತತ್ತರಿಸಿರುವ ಅಂಗವಿಕಲ ಕುಲಾಲ ಕುಟುಂಬ ಪುತ್ತೂರು: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಚಿಲ್ಮೆತ್ತಾರು ಎಂಬಲ್ಲಿ ೫ ಸೆಂಟ್ಸ್ ಸ್ಥಳದಲ್ಲಿ ವಾಸವಾಗಿರ...

Leave a Reply

Your email address will not be published. Required fields are marked *