ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ದಾಸರ ಭಜನಾ ಪದಗಳ ನೃತ್ಯ ಪ್ರದರ್ಶನ ಸ್ಪರ್ಧೆ


bhajan1

ಮಂಗಳೂರು : ಮರೋಳಿ ಜೋಡುಕಟ್ಟೆಯ ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜರುಗುವ ಸಾರ್ವಜನಿಕ ಗಣೇಶೋತ್ಸವ ಚಪ್ಪರದ ದೇವರ ಸಮ್ಮುಖದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಆಹ್ವಾನಿತ ಭಜನಾ ತಂಡಗಳಿಗೆ ದಾಸರ ಭಜನಾ ಪದಗಳ ನೃತ್ಯ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿತ್ತು.

ಭಜನಾ ಸಂಕೀರ್ತನಾ ಸ್ವಾಮಿಗಳು ಎಂತಲೇ ಖ್ಯಾತರಾದ ಮಾಣಿಲ ಮಠದ ಶ್ರೀ ಮೋಹನದಾಸ್ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಂಗಳೂರು ನಗರದ ಅತ್ಯಂತ ಹಿರಿಯ ಭಜನಾ ತಂಡಗಳ ನೇತಾರರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸಿ ಸ್ಪರ್ಧೆಯನ್ನ ಉಧ್ಘಾಟಿಸಿದರು.

ದೇಹ ಮನಸ್ಸುಗಳಿಗೆ ಮುದ ನೀಡುವ ಸ್ವದೇಶೀ ಸಂಸ್ಕೃತಿಯನ್ನ ಉಳಿಸಿ ಬೆಳೆಸುತ್ತಾ ,ಯುವಕರನ್ನ ಮತ್ತಷ್ಟು ಸುದ್ರಡ ಗೊಳಿಸಿ ಮಾದಕ ವ್ಯಸನ ಗಳಿಂದ ಮುಕ್ತಿ ನೀಡಿ ಸಮಾಜ ಮುಖೀಗಳನ್ನಾಗಿ ಮಾಡುವ ಕೆಲಸವನ್ನ ಗಣೇಶೋತ್ಸವ ದಿನದಂದು ಮಾಡುವುದು ಮಾದರೀಯ ಕೆಲಸ, ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎಂಬ ತತ್ವದೊಂದಿಗೆ ಈ ಕಾರ್ಯಕ್ರಮ ದಲ್ಲಿ ಕೈ ಜೋಡಿಸಿರುವ ಪ್ರಯೋಜಕರಾಗಿರುವ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಚಿಂತನೆಯನ್ನ ಯತಿಗಳೀರ್ವರೂ ಮುಕ್ತಕಂಠದಿಂದ ಶ್ಲಾಘಿಸಿದರು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷರೂ ಹಾಗು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ದ ಸ್ಥಾಪಕರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ,ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಜ್ಯೋತಿ ಕುಮಾರ , ಗಣೇಶೋತ್ಸವದ ಸ್ಥಾಪಕ ನಾಯಕರಾದ ಅನಿಲ್ ಕೆಂಬಾರ, ಕಾರ್ಯದರ್ಶಿ ಸದಾನಂದ ನಾವರ , ಭಜನಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದ

bhajan bhajan2 bhajan3 bhajan4

ರಾಜ್ಯ ಮಟ್ಟದ ಭಜನಾ ಸಂಪನ್ಮೂಲ ವ್ಯಕ್ತಿಗಳಾದ ರಾಮ ಕೃಷ್ಣ ಕಾಟುಕುಕ್ಕೆ , ರಮೇಶ್ ಕಲ್ಮಾಡಿ , ಖ್ಯಾತ ಕಾರ್ಯಕ್ರಮ ನಿರೂಪಕ ನವೀನ ಶೆಟ್ಟಿ ಉಪಸ್ಥಿತರಿದ್ದರು. ನಂತರ ನಡೆದ ಬಹುಮಾನ ವಿತರಣೆ ಹಾಗು ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಖ್ಯಾತ ನೇತ್ರ ತಜ್ಞ ಡಾ. ವಿಷ್ಣು ಪ್ರಭು, ಹರೀಶ್ ಮೂಲ್ಯ ,ಗಿರಿಧರ ಶೆಟ್ಟಿ , ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಪ್ರವೀಣ್ ದರ್ಭೆ ,ಯುವ ಬಳಗದ ರೋಹಿತ್ ಶೆಟ್ಟಿ , ಮಾತೃ ಮಂಡಳಿಯ ಆಶಾ ರಾಜ ಸ್ವಾಗತಿಸಿದರು. ವಿದ್ಯಾರ್ಥಿಗಳನ್ನ ಹಾಗು ಕಳೆದ ಹತ್ತು ವರ್ಷಗಳಲ್ಲಿ ಗಣೇಶೋತ್ಸವದ ಯಶಸ್ಸಿಗೆ ದುಡಿದ ಸಾಧಕರನ್ನ ಸನ್ಮಾನಿಸಿದರು , ಸದಾನಂದ ನಾವರ ಸ್ವಾಗತಿಸಿದರು. ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಪ್ರಸ್ತಾಪಿಸಿದರು. ಮಹಾಬಲ ಕುಲಾಲ್ ಹಾಗು ಅನಿಲ್ ಕೆಂಬಾರು ಕಾರ್ಯಕ್ರಮವನ್ನ ಸಂಯೋಜಿಸಿ ನಿರ್ವಹಿಸಿದರು.⁠⁠⁠⁠

 


[yuzo_related]

Leave a Reply

Your email address will not be published. Required fields are marked *