ನಮ್ಮೆಲ್ಲರ ಆಯ್ಕೆ ಡಾ. ಅಣ್ಣಯ್ಯ ಕುಲಾಲ್ ಆಗಿರಲಿ..(ಒಂದು ಆಶಯ)


ಪರಶುರಾಮ ಸೃಷ್ಟಿಯ ತುಳುನಾಡು ನಮ್ಮ ಹೆಮ್ಮೆಯ ಅವಿಭಜಿತ ದಕ್ಷಿಣ ಕನ್ನಡ (ಮಂಗಳೂರು ಮತ್ತು ಉಡುಪಿ ಲೋಕಸಭಾ ) ಕಳೆದ ಹಲವು‌ ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಕರಾವಳಿ ಬಿಜೆಪಿಯ ಭದ್ರ ಕೋಟೆಯಾಗಿದೆ.

annay
ಈಗ ಮತ್ತೆ ಲೋಕಸಭೆ ಚುನಾವಣೆ ಸಮೀಪಿಸಿದೆ. ಮತ್ತೆ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದರೆ ಕಳೆದ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾದ ಸಂಸದರ ಬಗ್ಗೆ ಆಗಾಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಅದಕ್ಕೆ ಸೂಕ್ತ ಕಾರಣಗಳು ಹಲವಿದೆ. ವಿರೋಧಿಗಳು ಟೀಕಿಸಿದರೆ ಚಿಂತೆ ಪಡಬೇಕಾಗಿರಲಿಲ್ಲ. ಆದರೆ ಬಿಜೆಪಿ ಪಾಳಯದಲ್ಲಿ ಅದರಲ್ಲೂ ಬಿಜೆಪಿ ನಾಯಕರು, ಸಂಘ ಪರಿವಾರದ ನಾಯಕರಿಗೂ ನಮ್ಮ ಸಂಸದರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಇರುವುದು ಗುಟ್ಟಾಗಿ ಉಳಿದಿಲ್ಲ. ಹಾಗಾದರೆ ಹಾಲಿ ಸಂಸದರನ್ನು ಹೊರತು ಪಡಿಸಿದರೆ ಲೋಕಸಭೆಗೆ ಅಭ್ಯರ್ಥಿಯಾಗುವ ಪರ್ಯಾಯ ವ್ಯಕ್ತಿಗಳು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿಲ್ಲವೇ ? ಎನ್ನುವ ಪ್ರಶ್ನೆ ಬಿಜೆಪಿ ಕಾರ್ಯಕರ್ತರದ್ದು.

annay1
ಜಿಲ್ಲೆಯ ಜನತೆಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ಅರ್ಹತೆಯುಳ್ಳ ವಿದ್ಯಾವಂತ, ಬುದ್ಧಿವಂತ, ಪ್ರತಿಭಾವಂತ, ಪಕ್ಷದ ನಿಷ್ಠಾವಂತ ಹಾಗೂ ಸಮರ್ಥ ನಾಯಕರು ಹಲವರಿದ್ದಾರೆ . ಆದರೆ ಅಂತವರನ್ನ ಗುರುತಿಸಿ, ಅವರಿಗೆ ಅವಕಾಶ ನೀಡುವ ಕೆಲಸ ಆಗಿಲ್ಲವಷ್ಟೇ.

annay2
ಹೌದು, ವೃತ್ತಿಯಲ್ಲಿ ವೈದ್ಯರಾಗಿ, ಹಿಂದುಳಿದ ಸಮಾಜದ ಮುಖಂಡರಾಗಿ, ಶೋಷಿತರ ಧ್ವನಿಯಾಗಿ, ಹುಟ್ಟು ಹೋರಾಟಗಾರನಾಗಿ, ಲೇಖಕನಾಗಿ, ಸಂಘಟಕನಾಗಿ ಗುರುತಿಸಿಕೊಂಡಿರುವ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು. ಹಿಂದುಳಿದ ಸಮಾಜದಲ್ಲಿ ಹುಟ್ಟಿದ್ದರೂ ದೇವರಾಜ್ ಅರಸು ಸರಕಾರೀ ಹಾಸ್ಟೆಲ್ ನಲ್ಲಿ 16 ವರ್ಷಗಳ ಕಾಲ ಓದಿ , ತನ್ನ ಸ್ವಯಂ ಪರಿಶ್ರಮದ ಮೂಲಕ ಉನ್ನತ ವಿದ್ಯಾಭ್ಯಾಸ ಮಾಡಿ ವೈದ್ಯರಾಗಿ ಮಂಗಳೂರು ನಗರದಲ್ಲಿ ಪರಿಚಿತರಾದವರು. ವಿದ್ಯಾರ್ಥಿ ಹಂತದಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಜಿಲ್ಲೆಯ ವಿವಿಧ ಸಂಘಟನೆಗಳ ಮುಂಚೂಣಿಯಲ್ಲಿದ್ದುಕೊಂಡುಹೋರಾಟದ ನಾಯಕತ್ವ ವಹಿಸಿ ಜಿಲ್ಲೆಯ ಜನರಿಗೆ ಆಪ್ತರಾದವರು.

annay3

ಹಿಂದುಳಿದ ಸಮಾಜವೊಂದರ ಮುಖಂಡನಾಗಿ ಆ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟು ಶೋಷಿತರ ಧ್ವನಿಯಾದವರು. ತನ್ನ ವೃತ್ತಿ ಪರತೆ , ಪ್ರತಿಭೆ ಮತ್ತು ಸಂಘಟನಾ ಚಾತುರ್ಯದಿಂದಾಗಿ ವೈದ್ಯಕೀಯ ಸಂಘಟನೆಯಲ್ಲಿ ರಾಷ್ಟ್ರೀಯ ಮಟ್ಟದ ನಾಯಕನಾಗಿ ಗುರುತಿಸಿಕೊಂಡವರು. ತನ್ನ ಪ್ರತಿಭೆ, ಸಂಘಟನಾ ಶಕ್ತಿ ಸಮಾಜ ಮುಖೀ ಚಿಂತನೆಗಳಿಂದಾಗಿ ಮೇಲ್ವರ್ಗ, ಕೆಳವರ್ಗ ಮತ್ತು ಹಿಂದುಳಿದ ವರ್ಗಗಳ ಸಮರ್ಥ ಪ್ರತಿನಿಧಿಯಾಗಬಲ್ಲ ಅವರ ಕಾರ್ಯ ಚಟುವಟಿಕೆ ಹೀಗೆ ಮುಂದುವರೆಯುತ್ತದೆ.

annay4
ಮುಂದೆಯೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬರಬೇಕು ಎನ್ನುವ ಹಂಬಲ ನಮ್ಮೆಲ್ಲರದ್ದು. ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಬಹುತೇಕ ಮೇಲ್ವರ್ಗದವರೇ ಶಾಸಕರಾಗಿದ್ದಾರೆ. ಸಂಸದ ಅಭ್ಯರ್ಥಿಯ ಆಯ್ಕೆಯ ಗೊಂದಲದಲ್ಲಿರುವ ಕ್ಷೇತ್ರಗಳಲ್ಲಿ ನಮ್ಮ ನಾಯಕರು ಲೋಕಸಭೆಗೆ ಸ್ಪರ್ಧಿಸಲು ಸಮರ್ಥರಾಗಿರುವ, ಹಿಂದುಳಿದ ವರ್ಗದ ನಾಯಕರಾಗಿರು ಡಾ. ಅಣ್ಣಯ್ಯ ಕುಲಾಲ್ ರಂಥ ಹಿಂದುಳಿದ ಸಮುದಾಯದ ವ್ಯಕ್ತಿಗೆ ಯಾಕೆ ಅವಕಾಶ ಮಾಡಿ ಕೊಡಬಾರದು? ಎಲ್ಲಾ ವರ್ಗದವರನ್ನು ಪ್ರತಿನಿಧಿಸಬಲ್ಲ ವ್ಯಕ್ತಿತ್ವದ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಈ ಬಾರಿ ಮಂಗಳೂರು ಅಥವಾ ಉಡುಪಿ ಲೋಕಸಭಾ ಕ್ಷೇತ್ರದ ನಮ್ಮೆಲ್ಲರ ಒಮ್ಮತದ ಅಭ್ಯರ್ಥಿಯಾಗಲಿ ಎನ್ನುವುದು ನನ್ನ ಆಶಯ.

ಪ್ರಕಾಶ್ ನಾಯಕ್ ಮಂಗಳೂರು


Related News

ದೀಪಾವಳಿ: ಬೆಳಗಲಿ ಮಣ್ಣಿನ ಹಣತೆಗಳ ಪ್ರಭಾವಳಿ...
views 1976
ದೀಪಗಳ ಹಬ್ಬ ದೀಪಾವಳಿ ಸಮೀಪಿಸುತ್ತಿದೆ.' ಕೃಷಿ' ಮತ್ತು 'ಋಷಿ' ಸಂಸ್ಕೃತಿಗಳೇ ಸಂಮಿಳಿತಗೊಂಡು ಸಂರಚನೆಗೊಂಡ ಈ ನೆಲದ ಮಹತ್ವಿಕೆಯ ಹಬ್ಬಗಳಲ್ಲಿ ದೀಪಾವಳಿ ಬಹುಮುಖ್ಯವಾದುದ್ದು.. ಆದರೆ ಢ...
ತುಳು ಗಾದೆಗಳಲ್ಲಿ ಕುಂಬಾರ – ಶಂಕರ ಕುಂಜತ್ತೂರು ಲೇಖ...
views 2041
ಕುಲಾಲ್ ವರ್ಲ್ಡ್ ಡಾಟ್ ಕಾಮ್ ವಿಶೇಷ  ಮಾನವನ ಸಾಧನೆಗಳಲ್ಲಿ ಭಾಷೆಯ ರೂಪೀಕರಣ ಮಹತ್ವದ ಸಾಧನೆಯಾಗಿದೆ. ಮಾನವ ಜನಾಂಗ-ಸಂಸ್ಕೃತಿಗೆ ಅನುಗುಣವಾಗಿ ಭಾಷೆ ವಿಕಾಸಗೊಳ್ಳುತ್ತಾ ಬಂದಿದ...
ಮಣ್ಣಿನ ಅಳಿಗೆ..! (ಕಥನ)
views 1048
ಅಮ್ಮ ಮೆಲ್ಲಗೆ ಉಣ್ಣುತ್ತಾ ನಕ್ಕು ನುಡಿದಳು ‘ಕಾಲ ಬದಲಾದದ್ದು ಹೌದು ಮಗಳೇ. ಆದರೂ ನಾನೊಂದು ನಿಜ ಹೇಳ್ತೆ. ಈ ಮೀನಾಗಲಿ, ಕೋಳಿಯಾಗಲಿ ಒಳ್ಳೆ ರುಚಿ ಬರಬೇಕಾದರೆ ಅದನ್ನು ಮಣ್ಣಿನ ಅಳಿಗೆಯ...
ಮೂಲ್ಯರ ಸಂಘಟನಾ ಸಾಮರ್ಥ್ಯ ಬಿಂಬಿಸುವ ಪುರಾತನ ಆಮಂತ್ರಣ ಪತ್...
views 2470
ಮೂಲ್ಯರ ಸಂಘದ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ) ಜಿಲ್ಲಾ ಕಾರ್ಯದರ್ಶಿಯಾಗಿದ್ದ ಮಂಜೇಶ್ವರ ಸಂಕಪ್ಪ ಮೂಲ್ಯರು ಕಿಂಞಣ್ಣ ಮೂಲ್ಯರ ಜೊತೆ ಸೇರಿ ದಿನಾಂಕ 03-05-1925ರಂದು ತನ್ನ ಮನೆಯಲ್...
ಕುಂಬಾರ-ಕುಲಾಲ ಜನಾಂಗಕ್ಕೆ ರಾಜಕೀಯ ಮರುಹುಟ್ಟು ನೀಡಬೇಕಾಗಿದ...
views 3438
ಕುಂಬಾರರಿಗೆ ಹಾಗೂ ಕುಂಬಾರಿಕೆಗೆ ಅಂತ ಸರಕಾರ ಕೊಟ್ಟ ಕುಂಭಕಲಾ ನಿಗಮ ಸ್ವತಂತ್ರವಾಗದೆ ದೇವರಾಜ ಅರಸು ನಿಗಮದಲ್ಲಿ ಸಿಕ್ಕಿಕೊಂಡು ತ್ರಿಶಂಕು ಸ್ಥಿತಿಯಲ್ಲಿದೆ. ಕುಂಭಕಲಾ ನಿಗಮ ಸ್ವತಂತ...

One thought on “ನಮ್ಮೆಲ್ಲರ ಆಯ್ಕೆ ಡಾ. ಅಣ್ಣಯ್ಯ ಕುಲಾಲ್ ಆಗಿರಲಿ..(ಒಂದು ಆಶಯ)

Leave a Reply

Your email address will not be published. Required fields are marked *