ತೋಕೂರು `ಕುಲಾಲ ಜವನೆರ್’ ವತಿಯಿಂದ ಅಶಕ್ತ ರೋಗಿಗೆ ನೆರವು


ಹಳೆಯಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅನಾರೋಗ್ಯದಿಂದ ಬಳಲುತ್ತಿದ್ದ ಹಳೆಯಂಗಡಿ ಇಂದಿರಾನಗರದ ಹೇಮನಾಥ ಕುಲಾಲ್ ಅವರಿಗೆ ತೋಕೂರು `ಕುಲಾಲ ಜವನೆರ್’ ವತಿಯಿಂದ ಆರ್ಥಿಕ ಸಹಾಯವನ್ನು ನೀಡಲಾಯಿತು.

tj

ವಾಹನ ಚಾಲಕರಾಗಿದ್ದ ಹೇಮನಾಥ ಅವರು ಆಕಸ್ಮಿಕವಾಗಿ ಕಾಲು ಬಲಹೀನಗೊಂಡು ನಡೆಯಲಾಗದೆ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಆ ಬಳಿಕ ವಿಶ್ರಾಂತಿ ಅಗತ್ಯವೆಂದು ವೈದ್ಯರು ತಿಳಿಸಿದ್ದರು. ಇದರಿಂದ ಅವರಿಗೆ ಚಾಲಕ ವೃತ್ತಿ ಮಾಡಲು ಅಸಾಧ್ಯವಾಗಿದ್ದು, ಬಡ ಕುಟುಂಬದ ಅವರಿಗೆ ದೈನಂದಿನ ಬದುಕಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇದನ್ನು ಮನಗಂಡ `ಕುಲಾಲ ಜವನೆರ್’ ತಂಡದ ಸದಸ್ಯರು ಧನಸಹಾಯವನ್ನು ಸಂಗ್ರಹಿಸಿದ್ದರು. ಸಂಗ್ರಹಗೊಂಡ 15 ಸಾವಿರ ರೂ ಹಣವನ್ನು ಮಾ. ೨೪ರಂದು ಹೇಮನಾಥ ಅವರಿಗೆ ತಂಡದ ಹಿರಿಯ ಸದಸ್ಯರಾದ ಆನಂದ ಸಾಲ್ಯಾನ್ ಅವರೊಂದಿಗೆ ತೆರಳಿ ಹಸ್ತಾಂತರಿಸಲಾಯಿತು.

tj1

ಹೇಮನಾಥ ಅವರಿಗೆ ರಕ್ತದ ಸೋಂಕು ತಗುಲಿದ್ದರಿಂದ ರಕ್ತದ ಬದಲಾವಣೆಗಾಗಿ ಒಟ್ಟು 40 ಯುನಿಟ್ ರಕ್ತವನ್ನು ಪೂರೈಸುವಲ್ಲಿಯೂ `ಕುಲಾಲ ಜವನೆರ್’ ಯಶಸ್ವಿಯಾಗಿದ್ದರು. ತನಗೆ ಆಪತ್ಭಾಂಧವರಂತೆ ಬಂದು ಸಹಕರಿಸಿದ ತಂಡದ ಉಪಕಾರವನ್ನು ಈ ಸಂದರ್ಭದಲ್ಲಿ ಹೇಮನಾಥ್ ಅವರು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.


[yuzo_related]

Leave a Reply

Your email address will not be published. Required fields are marked *