ಚದುರಂಗ ಲೋಕದ ಚತುರ-ಬರಹಗಾರ-ಸಲಹೆಗಾರ ಪ್ರಿಯದರ್ಶನ್ ಬಂಜನ್


ವಿಶ್ವದ ಅತೀ ದೊಡ್ಡ ನ್ಯೂಸ್ ವೆಬ್ ಸೈಟ್ ಚೆಸ್ ಬೇಸ್ ನ ಸಂಪಾದಕ

ಚೆಸ್ ಆಟವನ್ನು ಆಡುತ್ತಾ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಾ ಈ ಕಲೆಯ ಬಗ್ಗೆ ಮಾಹಿತಿ/ವಿಚಾರ ವಿನಿಮಯ ನಡೆಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುವ ಇಪ್ಪತ್ತಾರರ ವಯಸ್ಸಿನ ಯುವಕ ಪ್ರಿಯದರ್ಶನ್ ಬಂಜನ್. ಇವರು ಚದುರಂಗ ಲೋಕದ ಚತುರ ಮಾತ್ರವಲ್ಲ ಬರಹಗಾರ, ಸಲಹೆಗಾರರು ಕೂಡಾ ಆಗಿದ್ದಾರೆ. ಅಲ್ಲದೆ ಚೆಸ್ ಜಗತ್ತಿನ ಸಮಗ್ರ ಮಾಹಿತಿ ನೀಡುವ ವಿಶ್ವದ ಅತೀ ದೊಡ್ಡ ನ್ಯೂಸ್ ವೆಬ್ ಸೈಟ್ (https://en.chessbase.com/) ನ ಸಂಪಾದಕ.

PowerPoint Presentation

ಮಂಗಳೂರು(ಮಾ.೧೬, ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್, ಟೆನಿಸ್, ರಗ್ಬಿ, ಬ್ಯಾಡ್ಮಿಂಟನ್, ಗಾಲ್ಫ್, ಕ್ರಿಕೆಟ್ ಎಂದು ಪಟ್ಟಿ ಮಾಡುತ್ತಾ ಹೋಗಬಹುದು. ಆದರೆ ಅತಿ ಹೆಚ್ಚು ಜನರು ಆಡುವ ವಿಶ್ವದ ಏಕಮಾತ್ರ ಕ್ರೀಡೆ ಎಂದರೆ ಅದು ಚೆಸ್. ಪ್ರಪಂಚದಲ್ಲಿ ಹೆಚ್ಚು ಪ್ರಸಾರ ಹೊಂದಿರುವ, ವ್ಯಕ್ತಿಯ ಕುಶಾಗ್ರಮತಿ, ಬುದ್ಧಿಮತ್ತೆಯನ್ನು ಒರೆಗೆ ಹಚ್ಚುವ ಕ್ರೀಡೆ ಇದಾಗಿದೆ. ಆಡುವವರ ಸಂಖ್ಯೆಯನ್ನು ಶತಕೋಟಿ ಲೆಕ್ಕದಲ್ಲಿ ಹೇಳಲಾಗುತ್ತದೆ. ಚೆಸ್ ಆಟವನ್ನು ಬುದ್ಧಿ ಶಕ್ತಿ ವಿನಿಯೋಗದ ಆಟ ಎನ್ನಲಾಗುತ್ತದೆ. ಇದು ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಮೆದುಳಿಗೆ ನೀಡುವ ಕಸರತ್ತು. ಯೋಜನಾ ಸಾಮರ್ಥ್ಯ ಹಾಗೂ ಮುಂದೆ ಎದುರಾಗುವ ಸವಾಲುಗಳನ್ನು ನಿಭಾಯಿಸುವ ಮುಂದಾಲೋಚನೆಯೂ ಅಗತ್ಯ. ಚೆಸ್ ಬರಿ ಆಟವಲ್ಲ; ಕುಶಲ ಕಲೆ ಹಾಗೂ ವಿಜ್ಞಾನವೂ ಹೌದು. ಮಾನಸಿಕ ವ್ಯಾಯಾಮವೂ ಹೌದು. ಮನರಂಜನೆಗಾಗಿ ಮಾತ್ರವಲ್ಲ ಸ್ಪರ್ಧಾತ್ಮಕ ಕ್ರೀಡೆಯಾಗಿಯೂ ಜನಪ್ರಿಯ. ಕಾಲ್ಪನಿಕ ಯುದ್ಧವೆಂದೇ ಚೆಸ್ ಕರೆಸಿಕೊಳ್ಳುತ್ತದೆ. ಏಕೆಂದರೆ ರಣರಂಗ ಎನ್ನುವ ಕಲ್ಪನೆಯನ್ನೇ ಚೆಸ್ ಮಣೆಗೆ ನೀಡಲಾಗಿದೆ. ಅಷ್ಟೇ ಅಲ್ಲ 64 ಚೌಕಗಳಲ್ಲಿ ನಡೆಯುವ ಕಾಯಿಗಳಿಗೆ ಯುದ್ಧ ಪಡೆಯಲ್ಲಿನ ವಿವಿಧ ಹಂತ ಹಾಗೂ ಹುದ್ದೆಯ ಹೆಸರುಗಳೇ ಇವೆ. ಆದರೆ ಇಲ್ಲಿ ನಡೆಯುವುದು ರಕ್ತ ಹರಿಸುವಂಥ ಯುದ್ಧವಲ್ಲ. ಬದಲಿಗೆ ಮಿದುಳಿಗೆ ಕಸರತ್ತು ನೀಡುವ ಯುದ್ಧ. ವಿಶ್ವದೆಲ್ಲೆಡೆ ಈ ಚದುರಂಗ ಕ್ರೀಡೆ ಪ್ರಸಾರ ಪಡೆದಿದೆ. ಆದರೆ ಇದುವರೆಗೆ ಈ ಆಟವನ್ನು ಯಾರು ಆರಂಭಿಸಿದರು, ಇದರ ಮೂಲ ಯಾವುದು ಎಂದು ಸ್ಪಷ್ಟವಾಗಿ ಹೇಳುವುದು ಈಗಲೂ ಸಾಧ್ಯವಾಗಿಲ್ಲ. ಈ ಆಟದಲ್ಲಿ ಪಳಗಿ ಭಾರತಕ್ಕೆ ಕೀರ್ತಿ ತಂದವರು ಅನೇಕರಿದ್ದಾರೆ. ನಾವೀಗ ಹೇಳ ಹೊರಟಿರುವುದು ಚೆಸ್ ಆಟವನ್ನುಆಡುತ್ತಾ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಾ ಈ ಕಲೆಯ ಬಗ್ಗೆ ಮಾಹಿತಿ/ವಿಚಾರ ವಿನಿಮಯ ನಡೆಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುವ ಇಪ್ಪತ್ತಾರರ ವಯಸ್ಸಿನ ಯುವಕನ ಬಗ್ಗೆ. ಆತನೇ ಪ್ರಿಯದರ್ಶನ್ ಬಂಜನ್. ಇವರು ಚದುರಂಗ ಲೋಕದ ಚತುರ ಮಾತ್ರವಲ್ಲ ಬರಹಗಾರ, ಸಲಹೆಗಾರರು. ಚೆಸ್ ಜಗತ್ತಿನ ಸಮಗ್ರ ಮಾಹಿತಿ ನೀಡುವ ವಿಶ್ವದ ಅತೀ ದೊಡ್ಡ ನ್ಯೂಸ್ ವೆಬ್ ಸೈಟ್ (https://en.chessbase.com/) ನ ಸಂಪಾದಕ.

priyadarshan4

ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಮೂಲತಃ ಕಾಸರಗೋಡು ತಾಲೂಕು ಕೊಡ್ಲಮೊಗರು ಒಡಿಪರಕೋಡಿ ಎಂಬಲ್ಲಿಯ ನಿವಾಸಿ ನಾರಾಯಣ ಬಂಜನ್ ಲೀಲಾವತಿ ದಂಪತಿ ಪುತ್ರನಾದ ಪ್ರಿಯದರ್ಶನ್ ಅವರು ಬೆಂಗಳೂರಿನ ಆರ್ಗಾನಿಕ್ ಮಿಲ್ಕ್ ಕಂಪೆನಿ `ಅಕ್ಷಯಕಲ್ಪ’ದ ಮಾರ್ಕೆಟಿಂಗ್ ವಿಭಾಗದ ಉದ್ಯೋಗಿ. ಚೆಸ್ ಆಡುತ್ತಲೇ ಇತರ ಆಟಗಾರರನ್ನು ಉತ್ತೇಜಿಸುವುದು ಇವರ ಪ್ರವೃತ್ತಿ. ಇಂಡಿಯನ್ ಚೆಸ್ ಫೆಡರೇಷನ್ (AICF) ನ ಮಾಧ್ಯಮ ಸಲಹೆಗಾರರಾಗಿರುವ ಇವರು ಚೆಸ್ ಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುತ್ತಾ, ಯುವ ಆಟಗಾರರಿಗೆ ಸ್ಫೂರ್ತಿಯ ಜೊತೆಗೆ ಆರ್ಥಿಕ ನೆರವನ್ನು ಕ್ರೋಢೀಕರಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ.

priyadarshan2

ಚಿಕ್ಕ ವಯಸ್ಸಿನಲ್ಲೇ ಚೆಸ್ ಆಟದ ಬಗ್ಗೆ ವಿಶೇಷ ಆಸಕ್ತಿ, ಆಕರ್ಷಣೆ ಹೊಂದಿದ್ದ ಪ್ರಿಯದರ್ಶನ್ ತನ್ನ ಹದಿನಾರನೇ ವಯಸ್ಸಿನಿಂದ ಭಾರತದಾದ್ಯಂತ ನಡೆದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ತನ್ನ ಚೆಸ್ ಹುಚ್ಚಿನಿಂದ ಚಾರ್ಟರ್ಡ್ ಅಕೌಂಟೆಂಟ್ ಕಲಿಕೆಯನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಾರೆ.

priyadarshan3

ದಕ್ಷಿಣ ಭಾರತದಾದ್ಯಂತ ಸಂಚರಿಸಿ ನಿರಾಶ್ರಿತರಿಗಾಗಿ ಕೆಲಸ ಮಾಡಿದ ಇವರು, ಮತ್ತೆ ಚೆಸ್ ಲೋಕಕ್ಕೆ ಹಿಂತಿರುಗಿ ಕೋಚ್ ಆಗಿ, ಚೆಸ್ ಪಂದ್ಯ ಆಯೋಜಿಸುತ್ತಾ, ಚೆಸ್ ಗೆ ಸಂಬಂಧಿಸಿದ ಪರಿಕರಗಳ ಮಾರ್ಕೆಟಿಂಗ್ ಮಾಡುತ್ತಿರುವ ಅವರು, ಎಲ್ಲಕ್ಕಿಂತ ಮುಖ್ಯವಾಗಿ ಆಂಗ್ಲ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿರುವ ಅವರು ಚೆಸ್ ಗೆ ಸಂಬಂಧಿಸಿದ ಮತ್ತು ಇತರ ನೂರಾರು ಬರಹ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಚೆಸ್ ಆಟಗಾರರ ಮ್ಯಾನೇಜರ್ ಆಗಿ, ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಿಯದರ್ಶನ್ ಚದುರಂಗ ಲೋಕದ ವಿಶಿಷ್ಟ ಪ್ರತಿಭೆ. ಅಪರೂಪದ ಸಾಧಕ.

priyadarshan1priyadarshan5


Related News

ಭರತನಾಟ್ಯಕ್ಕೂ ಸೈ, ಯಕ್ಷಗಾನದಲ್ಲೂ ಜೈ : ಚಾರ್ವಾಕದ ಮನೋಹರ್...
views 494
ಪುತ್ತೂರು (ಕುಲಾಲ್ ವರ್ಲ್ಡ್ ನ್ಯೂಸ್ ): ಗ್ರಾಮೀಣ ಪ್ರದೇಶದಲ್ಲೂ ತೆರೆಯ ಮರೆಯಲಿ ಅದೆಷ್ಟೋ ಯುವ ಪ್ರತಿಭೆಗಳು ಸದ್ದು ಗದ್ದಲವಿಲ್ಲದೆ ಅರಳುತ್ತವೆ. ಇಂತಹ ಪ್ರತಿಭೆಯಲ್ಲಿ ಮನೋಹರ ಕ...
ಮುಂಬಯಿಗೆ ಹೋದ ಕುಂದಾಪುರ ಶೀನ ಕುಲಾಲ್ ಕಾಣೆ : ಹುಡುಕಿಕೊಡಲ...
views 950
ಮುಂಬಯಿ : ಕುಂದಾಪುರದಿಂದ ಮುಂಬಯಿಗೆ ಮಗನ ಮನೆಗೆ ತೆರಳಿದ ವ್ಯಕ್ತಿಯೊಬ್ಬರು ಕಾಣೆಯಾದ ಬಗ್ಗೆ ವರದಿಯಾಗಿದೆ. ಕುಂದಾಪುರದ ಪೇತ್ರಿ ನಿವಾಸಿ ಶೀನ ಕುಲಾಲ್ (೫೮) ಕಾಣೆಯಾದವರು. ಜುಲ...
ವಾರದಲ್ಲಿ ಮೂರು ದಿನ ಶಾಲೆ, ಮೂರು ದಿನ ಕೂಲಿ !...
views 1043
ಅನಾಥ ಮಕ್ಕಳ ಕರುಣಾಜನಕ ಕಥೆ ಯಾದಗಿರಿ(ನ.೨೨): ತಂದೆ-ತಾಯಿ ಮೊದಲೇ ಇಲ್ಲ, ಸಾಕುತ್ತಿದ್ದ್ದ ಅಜ್ಜಿಯೂ ಈಚೆಗೆ ನಿಧನರಾಗಿದ್ದರಿಂದ ಪುಟ್ಟಣ ಅಣ್ಣ-ತಂಗಿ ಈಗ ಅನಾಥರಾಗಿದ್ದಾರೆ. ಕೂಲಿ...
ಮುವಾಯ್ ಥಾಯ್ ಚಾಂಪಿಯನ್ ಶಿಪ್ : ಚಿನ್ನ ಗೆದ್ದ ಸುಕ್ರೀತ್ ಕ...
views 225
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಟೈಗರ್ ಫಿಟ್ ಮುವಾಯ್ ಥಾಯ್ ಕ್ಲಬ್ ಇವರ ಆಶ್ರಯದಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆದ 4ನೇ ದಕ್ಷಿಣ ಭಾರತ ಮುವಾಯ್ ಥಾಯ್ ಚಾಂಪಿಯನ್ ಶಿಪ್ ನಲ್ಲಿ ...
`ಡಬ್ ಸ್ಮ್ಯಾಷ್ ಕ್ವೀನ್’ ಶ್ರಾವ್ಯಾ .ಸಿ. ಕುಲಾಲ್...
views 4776
(ಕುಲಾಲ್ ವರ್ಲ್ಡ್ ಡಾಟ್ ಕಾಮ್ Jan. 26, 2018) ಮೊಬೈಲ್ ನಲ್ಲಿ ಸೆಲ್ಫೀ ಪರಿಚಯವಾದ ಮೇಲೆ ಈ ಸೆಲ್ಫೀ ಎನ್ನುವುದು ಹಲವರ ದಿನಚರಿಯ ಭಾಗವಾಗಿತ್ತು. ಸೆಲ್ಫೀ ತಗೋಳ್ಳೋದು ಫೇಸ್‌ಬುಕ್ಕ...

Leave a Reply

Your email address will not be published. Required fields are marked *