ಕುಸಿದು ಬಿದ್ದ ಮನೆ ಆಧಾರಸ್ತಂಭ ; ಇಬ್ಬರು ಹೆಣ್ಣುಮಕ್ಕಳ ಕುಟುಂಬಕ್ಕೆ ಬೇಕಿದೆ ನೆರವು


ಮಂಗಳೂರು(ಏ.೦೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೆಲವೊಮ್ಮೆ ಬಾಳಿನಲ್ಲಿ ವಿಧಿ ಏನೆಲ್ಲಾ ಆಟವಾಡಿಸಿಬಿಡುತ್ತದೆ. ಸುಂದರ ಬದುಕನ್ನು ನರಕವಾಗಿಸಿ ಬಿಡುತ್ತದೆ. ಕೂಲಿ ನಾಲಿ ಮಾಡಿ ಪುಟ್ಟ ಸಂಸಾರವನ್ನು ಸಲಹುತ್ತಿದ್ದ ಮನೆ ಯಜಮಾನನ ಮೇಲೆ ದೈವ ಮುನಿದು ಬಿಟ್ಟಿತು. ಪಾರ್ಶ್ವವಾಯುವಿಗೆ ತುತ್ತಾಗಿ ಕೈಕಾಲಿನ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದ ಅವರು ಮತ್ತೆ ಮೇಲೇಳಲೇ ಇಲ್ಲ. ಒಟ್ಟಿನಲ್ಲಿ ಮನೆಯ ಆಧಾರಸ್ತಂಭವೇ ಕುಸಿದುಬಿದ್ದು, ವಿಧಿ ಅವರ ಭವಿಷ್ಯವನ್ನೇ ಕತ್ತಲಿಗೆ ತಳ್ಳಿಬಿಟ್ಟಿತು. ಗಂಡನ ಸ್ಥಿತಿ ಹೀಗಾಯಿತೆಂದು ಪತ್ನಿ ಕಣ್ಣಿರಾಗಿ ದೇವರಿಗೆ ಶಪಿಸುತ್ತಾ ಕೈಕಟ್ಟಿ ಕೂರಲಿಲ್ಲ. ಯಾರ ಮುಂದೆಯೂ ಕೈಚಾಚದೇ ಸ್ವಂತ ದುಡಿಮೆಯಿಂದ ಪತಿಯನ್ನು ನೋಡಿಕೊಳ್ಳುತ್ತಾ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಆಸ್ಥೆಯಿಂದ ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದಾರೆ. ಇದರ ಮಧ್ಯೆ ತಾವು ವಾಸಿಸುತ್ತಿರುವ ಮುರುಕಲು ಮನೆ ಕುಸಿದು ಬೀಳುವ ಸ್ಥಿತಿಗೆ ತಲುಪಿದ್ದು, ಹೊಸ ಮನೆ ನಿರ್ಮಿಸಲು ಸಹಾಯ ಮಾಡಿ ಎಂದು ಕೈಗಳನ್ನು ಜೋಡಿಸಿ ಮನವಿ ಮಾಡುತ್ತಿದ್ದಾರೆ ಮೀನಾಕ್ಷೀ ಗೋವಿಂದ ಕುಲಾಲ್…

govinda

ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ನಗ್ರಿ ನಿವಾಸಿಯಾಗಿರುವ ಮೀನಾಕ್ಷೀ ಅವರ ಪತಿ ಗೋವಿಂದ ಕುಲಾಲ್ ಪಾರ್ಶ್ವವಾಯುವಿಗೆ ತುತ್ತಾಗಿ ಮೂಲೆ ಸೇರಿ ಅನೇಕ ವರ್ಷಗಳೇ ಆಗಿದೆ. ಅವರ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ದುಡಿದ ಹಣ ಅವರ ಔಷಧಿಗೆ ಖರ್ಚು ಆಗುತ್ತಿದೆ. ಜೊತೆಗೆ ಪ್ರಾಯಕ್ಕೆ ಬಂದ ಇಬ್ಬರು ಹೆಣ್ಣು ಮಕ್ಕಳಿಗೆ ವಿವಾಹ ಮಾಡಿಸುವ ಜವಾಬ್ದಾರಿ ಕೂಡ ಇದೆ.

PowerPoint Presentation

ಅದಕ್ಕಿಂತ ಮುಂಚೆ ತುರ್ತಾಗಿ ಕುಸಿದು ಬೀಳುವ ಹಂತದಲ್ಲಿರುವ ಹಳೆ ಮನೆಯಿಂದ ಮುಕ್ತಿ ಬೇಕಿದೆ. ಇವರ ಸ್ಥಿತಿಯನ್ನು ಕಂಡು ಹಿಂದಿನಿಂದಲೂ ನೆರವು ನೀಡುತ್ತಾ ಬಂದಿರುವ ಸ್ಥಳೀಯ ಯುವಕರು ಸೇರಿ ಇದೀಗ ಇವರಿಗೆ ಹೊಸ ಮನೆ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದಾರೆ. ಮೀನಾಕ್ಷಿ ಅವರಿಗೆ ಅವರ ಸ್ಥಳದಲ್ಲೇ ಹೊಸ ಮನೆ ನಿರ್ಮಾಣಕ್ಕೆ ಕಳೆದ ಏಪ್ರಿಲ್ 3 ರಂದು ಅಡಿಗಲ್ಲು ಇಟ್ಟಿದ್ದಾರೆ. ಇದರಿಂದ ಮೀನಾಕ್ಷೀ ಅವರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.

PowerPoint Presentation

ಅವರ ಹೊಸ ಮನೆ ನಿರ್ಮಾಣದ ಕನಸು ನನಸಾಗಿಸಿ ಅವರ ಮೊಗದಲ್ಲಿ ನಗು ಅರಳಬೇಕಾದರೆ ದಾನಿಗಳ ನೆರವು ಅಗತ್ಯವಿದೆ. ಸಹೃದಯಿಗಳು ಕೈಲಾದಷ್ಟು ಮೊತ್ತದ ಸಹಾಯ ನೀಡಿದರೆ ಯುವಕರ ಪ್ರಯತ್ನಕ್ಕೆ ಇನ್ನಷ್ಟು ಬಲ ಬರುತ್ತದೆ. ಅಶಕ್ತ ಪತಿ, ಇಬ್ಬರು ಹೆಣ್ಣು ಮಕ್ಕಳಿರುವ ಮೀನಾಕ್ಷೀ ಅವರ ಸಂಸಾರಕ್ಕೆ ಉಪಕಾರ ಮಾಡಿದ ಪುಣ್ಯ ನಿಮ್ಮದಾಗುತ್ತದೆ.
ಸಹಾಯ ಮಾಡುವವರು ಈ ಖಾತೆಗೆ ಹಣ ಕಳಿಸಿ ಸಹಕರಿಸಿರಿ.

ಮೀನಾಕ್ಷಿ
ಕರ್ಣಾಟಕ ಬ್ಯಾಂಕ್ ಮಂಚಿ ಖಾತೆ ಸಂಖ್ಯೆ: 4652500101879401
Ifsc code : KARB0000465
—-
ಸಂಪರ್ಕ ಸಂಖ್ಯೆ
ಲೋಹಿತ್ ಪಣೋಲಿಬೈಲ್ : 9731530124
ಯಶವಂತ್ ನಗ್ರಿ : 9916054307
ರವಿ ನಗ್ರಿ : 9741502667.


[yuzo_related]

Leave a Reply

Your email address will not be published. Required fields are marked *