ಕುಲಾಲ ಸುಧಾರಕ ಸಂಘ ಪುಣೆ : ಮಹಿಳಾ ವಿಭಾಗದಿಂದ ಹಳದಿ ಕುಂಕುಮ ಕಾರ್ಯಕ್ರಮ


puna2

ಪುಣೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕುಲಾಲ ಸುಧಾರಕ ಸಂಘ ಪುಣೆ ಇದರ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಜ. 20ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾತ್ರಜ್‌ನ ವಂಡರ್‌ಸಿಟಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಪರಾಹ್ನ ಜರಗಿತು.

puna
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಕೆ. ಮೂಲ್ಯ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪ ಕಾರ್ಯಾಧ್ಯಕ್ಷೆ ಯಶೋಧ ಮೂಲ್ಯ, ಜಯಂತಿ ಮೂಲ್ಯ ಇತರ ಪದಾಧಿಕಾರಿಗಳಾದ ಸರಸ್ವತಿ ಮೂಲ್ಯ, ಭಾಗ್ಯಶ್ರೀ ಮೂಲ್ಯ, ಸುಜಾತಾ ಆರ್ ಕುಲಾಲ್, ಅನಿತಾ ಕೊಡ್ಮಾಣ್ ಕರ್, ನಿಶಾ ಮೂಲ್ಯ, ರೂಪಾಲಿ ಮೂಲ್ಯ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

puna1

ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪರಸ್ಪರ ಅರಸಿನ ಕುಂಕುಮವನ್ನು ಹಂಚಿಕೊಂಡು ಶುಭಹಾರೈಸಿಕೊಂಡರು. ಸಂಘದ ಸದಸ್ಯರಿಂದ ಭಜನೆ ಸಂಕೀರ್ತನೆಯನ್ನು ಆಯೋಜಿಸಲಾಗಿತ್ತು.


[yuzo_related]

Leave a Reply

Your email address will not be published. Required fields are marked *