ಕುಲಾಲ ಸಂಘ ನವಿ ಮುಂಬಯಿ ವತಿಯಿಂದ ಅರಸಿನ ಕುಂಕುಮ ಮತ್ತು ಭಜನಾ ಮಂಗಳೋತ್ಸವ


mm

ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ವಾಶಿಯ ಕನ್ನಡ ಸಂಘದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

mm1
ಕುಲಾಲ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್ ಅವರ ಉದ್ಘಾಟನೆಗೈದ ನಡೆದ ಕಾರ್ಯಕ್ರಮದಲ್ಲಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ ಕುಲಾಲ್, ನವಿ ಮುಂಬಯಿ ಸಮಿತಿಯ ಉಪಾಧ್ಯಕ್ಷ ಸುರೇಶ್ ಕುಲಾಲ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಶಿಕಲಾ ಎಸ್ ಮೂಲ್ಯ, ಉಪಾಧ್ಯಕ್ಷೆ ಹರಿಣಾಕ್ಷಿ ಸಾಲ್ಯಾನ್, ಕಾರ್ಯದರ್ಶಿ ಬೇಬಿ ಬಂಗೇರ, ಕೋಶಾಧಿಕಾರಿ ಮಲ್ಲಿಕಾ ಕುಲಾಲ್, ಕುಲಾಲ್ ವರ್ಲ್ಡ್ ನ ರೇಣುಕಾ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

mm2mm3mm5 mm6
ಪ್ರೇಮಾ ಸಿ ಮೂಲ್ಯ ಅರಸಿನ ಕುಂಕುಮದ ಮಹತ್ವದ ಬಗ್ಗೆ , ಸುನೀತಾ ಮೂಲ್ಯ ಭಜನೆ ಕುರಿತಂತೆ ಮಾಹಿತಿ ನೀಡಿದರು. ಶಕುಂತಲಾ ಬಂಜನ್, ಉಷಾ ಮೂಲ್ಯ ಸುಶೀಲಾ ಬಂಗೇರ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಶಿಕಲಾ ಮೂಲ್ಯ ಸ್ವಾಗತಿಸಿದರು. ಬೇಬಿ ಬಂಗೇರ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಹರಿಣಾಕ್ಷಿ ಸಾಲ್ಯಾನ್ ಧನ್ಯವಾದವಿತ್ತರು. ಮಾಲತಿ ಜೆ ಅಂಚನ್ ಕಾರ್ಯಕ್ರಮ ನಿರೂಪಿಸಿದರು. 
ಬಳಿಕ ಸ್ಥಳೀಯ ಸಮಿತಿಗಳ ವತಿಯಿಂದ ಭಜನಾ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ, ಭಜನಾ ಮಂಗಳೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಿತು.


[yuzo_related]

Leave a Reply

Your email address will not be published. Required fields are marked *