`ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಫೇಸ್ ಬುಕ್ ಪುಟಕ್ಕೆ ಮರುಜೀವ : ದುಷ್ಟರ ಸಂಚು ವಿಫಲ


ಸಾಮಾಜಿಕ ಜಾಲತಾಣ, ವೆಬ್ಸೆೃಟ್‌ಗಳ ಮೂಲಕ ಕುಲಾಲ/ಕುಂಬಾರ ಸಮುದಾಯದ ಬಿಸಿ ಬಿಸಿ ಸುದ್ದಿಗಳನ್ನು ಬಿತ್ತರಿಸುತ್ತಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಕೆಲ ಬೆರಳೆಣಿಕೆಯ ದುಷ್ಟ ಕೂಟದ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಇದೇ ಕಾರಣದಿಂದ ಇಂತಹ ಕೆಲವರು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಫೇಸ್‌ಬುಕ್ ಪುಟವನ್ನು ವರದಿ ಮಾಡಿ ಒತ್ತಾಯಪೂರ್ವಕವಾಗಿ ಬ್ಲಾಕ್ ಮಾಡಿಸಿದ್ದರು. ಕುಂಬಾರ/ಕುಲಾಲ ಸಮುದಾಯದ ಕ್ಷಣ, ಕ್ಷಣದ ಸುದ್ದಿಗಳನ್ನು, ವಿವಿಧ ಮಾಹಿತಿ ಆಧಾರಿತ ಸ್ಪಷ್ಟ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದರಿಂದ ದೇಶ ವಿದೇಶಗಳಲ್ಲಿರುವ ಜಾತಿ ಬಾಂಧವರನ್ನು ಅತೀ ವೇಗವಾಗಿ ತಲುಪುತ್ತಿತ್ತು. ಇದರ ಜನಪ್ರಿಯತೆಯನ್ನು ಸಹಿಸದ ಕೆಲ ವಿಘ್ನ ಸಂತೋಷಿಗಳು ವೆಬ್ ಸೈಟ್ ನ ಸುದ್ದಿಯನ್ನು ಫೇಸ್ ಬುಕ್ ಮೂಲಕ ಹಂಚದಂತೆ ಮಾಡುವಲ್ಲಿ ಸಫಲರಾಗಿದ್ದರು. ಈ ದುಷ್ಟರ ಹುನ್ನಾರವನ್ನು ಅರಿಯದೆ, ಸರಿಯಾದ ಕಾರಣವನ್ನೂ ನೀಡದೆ ಏಕಾಏಕಿ ಫೇಸ್‌ಬುಕ್ ಕಂಪೆನಿಯು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಎಂಬ ಹೆಸರನ್ನೇ  ಬ್ಲಾಕ್ ಮಾಡಿತ್ತು.

PowerPoint Presentation
ಈ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಎಕ್ಸ್ ಪರ್ಟ್ ಗಳ ಬಳಿ ಮಾಹಿತಿ ವಿನಿಮಯ ನಡೆಸಿದ್ದೇವೆ. ಈ ಬಗ್ಗೆ ನಾವೇನು ಕ್ರಮ ಜರುಗಿಸಿ ಬ್ಲಾಕ್ ಅನ್ನು ತೆಗೆದುಹಾಕಬಹುದು ಎಂಬ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭ ಫೇಸ್ ಬುಕ್ ಮೂಲಕ ವೆಬ್ ಸೈಟ್ ವರದಿಯ ಯಾವುದಾದರೊಂದು ಲಿಂಕನ್ನು ಶೇರ್ ಮಾಡಿ,ಅತ್ಯಧಿಕ ಸಂಖ್ಯೆಯಲ್ಲಿ ರಿವ್ಯೂ ಕೊಟ್ಟಲ್ಲಿ ಬ್ಲಾಕ್ ಓಪನ್ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದರಂತೆ `ಕುಲಾಲ್ ವರ್ಲ್ಡ್’ ಸಹಿತ ಹಲವು ವಾಟ್ಸಾಪ್ ಗ್ರೂಪ್ ಮಿತ್ರರ ಬಳಿ ಪ್ರಾಯೋಗಿಕವಾಗಿ ಇದನ್ನು ಅನುಸರಿಸುವಂತೆ ವಿನಂತಿ ಮಾಡಲಾಯಿತು. ಅದರಂತೆ ಅತ್ಯಧಿಕ ಮಿತ್ರರು `Review’ ನೀಡಿದ ಪರಿಣಾಮ ಇಂದು (ಫೆ.14) ಫೇಸ್ ಬುಕ್ ನ ಬ್ಲಾಕ್ ತೆರವುಗೊಂಡಿದ್ದು, ಹಳೆಯ ಪೋಸ್ಟ್ ಗಳು ಮತ್ತೆ ಕಾಣಿಸಿಕೊಂಡಿದೆ. ಇದರಿಂದ ಒಳಸಂಚು ನಡೆಸಿ ಫೇಸ್ ಬುಕ್ ಗೆ ಆಧಾರ ರಹಿತವಾಗಿ ಸುಳ್ಳು ಮಾಹಿತಿ ರವಾನಿಸಿದ ವೆಬ್ ನ್ಯೂಸ್ ಬ್ಲಾಕ್ ಮಾಡಲು ಯತ್ನಿಸಿದ ದುಷ್ಟರ ಸಂಚು ವಿಫಲವಾಗಿದೆ. ಆ ಮೂಲಕ ಕುಲಾಲ/ಕುಂಬಾರ ಸಮಾಜದ ದನಿಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ನಮಗೆ ಬೆಂಬಲಿಸಿ ಬ್ಲಾಕ್ ತೆರವುಗೊಳಿಸಲು ಸಹಕರಿಸಿದ ಸರ್ವ ಓದುಗರಿಗೆ, ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.

– ದಿನೇಶ್ ಬಂಗೇರ ಇರ್ವತ್ತೂರು
ವ್ಯವಸ್ಥಾಪಕ ಸಂಪಾದಕ


Related News

ತುಂಡು ಬಟ್ಟೆಯ ಗಂಡು ಕವಿ ಸರ್ವಜ್ಞನನ್ನು ನಿರ್ಲಕ್ಷಿಸುತ್ತಿ...
views 2242
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪ್ರತಿಭೆ, ಅರ್ಹತೆ ಎಲ್ಲವೂ ಇದ್ದರೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾದ ಕವಿಯೊಬ್ಬನಿದ್ದರೆ ಅದು ಸರ್ವಜ್ಞ ಮಾತ್ರ. ಸುಮಾರು ಏಳು ಕೋಟಿಗಿಂತಲೂ ಅಧ...
“ಸಂಭ್ರಮ ಗೌರವ ಪುರಸ್ಕಾರ”ಕ್ಕೆ ಚಿರ ಋಣಿ...
views 140
ಪೆರ್ಡೂರು ಕುಲಾಲ ಸಂಘದ ವತಿಯಿಂದ ಹೆಮ್ಮೆಯ "ಸಂಭ್ರಮ ಗೌರವ ಪುರಸ್ಕಾರ" ವನ್ನು ಮಾಧ್ಯಮ ಹಾಗೂ ಸಾಮಾಜಿಕ ಸೇವೆಗಾಗಿ www.kulalworld.comಗೆ ಕೊಡಮಾಡಿದ್ದಾರೆ. ಹಗಲಿರುಳು ದುಡಿದ ನಮ್...
ಕುಲಾಲ ಸಮುದಾಯದ ಬರಿ-ಬಳಿ-ಗೋತ್ರದ ಗೋಳು; ಬದಲಾವಣೆಗಿದು ಸಕಾ...
views 1479
ಕುಂಬಾರ ಸಮುದಾಯವನ್ನು ಬಹಳ ವರ್ಷದಿಂದ ಕಾಡುತ್ತಿರುವ ಬಳಿ(ಬರಿ) ಗೋತ್ರ ಹಾಗೂ ಜಾತಕದ ವಿಚಾರದಲ್ಲಿ ಕುಲಾಲ ಯುವ ಮನಸ್ಸುಗಳು ಮತ್ತು ಅವರ ಪಾಲಕರು ಯಾಕೆ ಬದಲಾವಣೆಗೆ ಒಡ್ಡಿಕೊಳ್ಳಬಾರದು? ...
ಮೊದಲನೇ ವರ್ಷದ ಸಂಭ್ರಮದಲ್ಲಿ `ಕುಲಾಲ್ ವರ್ಲ್ಡ್ ಡಾಟ್ ಕಾಮ್...
views 1530
ಕುಲಾಲ/ಕುಂಬಾರರ ನೆಚ್ಚಿನ ಅಂತರ್ಜಾಲ ತಾಣ `ಕುಲಾಲ್ ವರ್ಲ್ಡ್ ಡಾಟ್ ಕಾಮ್' ಒಂದು ವರ್ಷದ ಹೊಸ್ತಿಲಲ್ಲಿ ಬಂದು ನಿಂತಿದೆ. ಇದೇನು ಬಹಳ ಹೆಗ್ಗಳಿಕೆಯ ವಿಚಾರವಲ್ಲ. ಆದರೆ ಒಂದು ವರ್ಷದ...
ಇದು ಈಗಿನ ಲೈಫ್ ಸ್ಟೈಲ್ ಸಿಂಪಲ್ ಸ್ಟೋ(ವ)ರಿ...
views 778
ನಮ್ಮ ಯುವ ಜನರ ಬಯಕೆ, ಕನಸು, ಆಸಕ್ತಿ, ಆಸೆ, ನಿರೀಕ್ಷೆಗಳನ್ನು ಅವಲೋಕಿಸಿದರೆ ಭವಿಷ್ಯವನ್ನು ಊಹಿಸುವುದೂ ಕೂಡಾ ಕಷ್ಟ ಅನ್ನಿಸುತ್ತದೆ. ಅಂಗೈನಲ್ಲಿರುವ ಮೊಬೈಲ್, ಅಂತರ್ಜಾಲವೇ ಜಗತ್ತು....

Leave a Reply

Your email address will not be published. Required fields are marked *