ಕುರ್ಲಾ ಶ್ರೀ ಮಹಮ್ಮಾಯಿ ಮಂದಿರದ 44ನೇ ವಾರ್ಷಿಕ ವರ್ಧಂತಿ ಮಹೋತ್ಸವ


kurla

ಮುಂಬಯಿ: ಕುರ್ಲಾ (ಪ.) ಬಜಾರ್‌ ವಾರ್ಡ್‌ನಲ್ಲಿರುವ ಶ್ರೀ ಮಹಮ್ಮಾಯಿ ಮಂದಿರದ 44ನೇ ವಾರ್ಷಿಕ ವರ್ಧಂತಿ ಮಹೋತ್ಸವ ಇತ್ತೀಚೆಗೆ ಜರಗಿತು. ವೇದಮೂರ್ತಿ ಪೆರ್ಣಂಕಿಲ ಹರಿದಾಸ್‌ ಭಟ್‌ ವಿದ್ಯಾವಿಹಾರ್‌ ನೇತೃತ್ವದಲ್ಲಿ ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ಆದ್ಯ ಗಣಪತಿ ಯಾಗ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಜರಗಿತು. ಮಂದಿರದ ಸಂಸ್ಥಾಪಕ ಹಾಗೂ ದೇವಿಪಾತ್ರಿ ನಾರಾಯಣ ಬಿ. ಮೂಲ್ಯ ಹಾಗೂ ಅರ್ಚಕ ಆದರ್ಶ್‌ ಭಟ್‌ ಉಪಸ್ಥಿತಿಯಲ್ಲಿ ಜರಗಿದ ಉತ್ಸವದಲ್ಲಿ ರಾತ್ರಿ ಪೂಜೆ, ದೇವಿ ಆವೇಶದ ಅಮೃತ ನುಡಿ, ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.

ಮಹಾಪೂಜೆಯ ಸಂದರ್ಭದಲ್ಲಿ ಜೆರಿಮರಿಯ ದಿನೇಶ್‌ ಕೋಟ್ಯಾನ್‌ ಅವರು ವಾದ್ಯ, ಓಲಗದಲ್ಲಿ ಸಹಕರಿಸಿದರು. ತುಳು-ಕನ್ನಡಿಗರು ಪಾಲ್ಗೊಂಡಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಹರೀಶ್‌ ಐ. ಲಾಲ್ವಾಣಿ, ಲಾಲ್‌ ಎಚ್‌. ವಲೇಚಾ, ವಿಶ್ವನಾಥ ಜಿ. ಮೂಲ್ಯ, ಪ್ರಭಾಕರ ಬಿ. ಶೆಟ್ಟಿ, ಮಾಧವ ಬಿ. ಬಂಗೇರ, ಗಣೇಶ್‌ ಕೆ. ಶೆಟ್ಟಿ, ಸದಾನಂದ ಮೂಲ್ಯ, ನಂದಕುಮಾರ್‌ ಯಾಧವ್‌, ಮಹಾಬಲ ಶೆಟ್ಟಿ, ದಾರಾ ಜೈಸ್ವಾಲ್‌, ಸಂಗಮ್‌ಲಾಲ್‌ ಮೋರಿಯಾ ಕಾರ್ಯಕ್ರಮಕ್ಕೆ ಸಹಕರಿಸಿದರು.

ಅಶೋಕ್‌ ಯಾಧವ್‌, ಪ್ರಮೋದ್‌ ಬಂಗೇರ, ಸಂದೀಪ್‌ ಮಹೇಶ್ವರಿ, ಧರ್ಮರಾಜ್‌ ಮೌರ್ಯ, ರಾಜ್‌ಕುಮಾರ್‌, ಅಮರ್‌ ಸಿ. ವರುನ್‌, ಆತ್ತಾಯ್‌ ಭಾಯಿ ನಿಹಾಲ್‌ ಸಿಂಗ್‌, ಬಾಲು ಚೌಗುಲೆ, ರಮೇಶ್‌ ಪೂಜಾರಿ, ರಾಜು ಜಗ್ಧಾನೆ, ರತಿ ಸಾಲ್ಯಾನ್‌, ಮುನ್ನಾಲಾಲ್‌ ಶರ್ಮಾ, ಸತೀಶ್‌ ಸಾಗರ್‌, ರಶ್ಮೀ ಸತೀಶ್‌ ಸಾಗರ್‌, ಆನಂದ್‌ ಯಾಧವ್‌, ಮಮತಾ ಶರ್ಮಾ, ಸಪ್ನಾ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು.

ಶ್ರೀ ಕ್ಷೇತ್ರದಲ್ಲಿ ಅಭಿಷೇಕ ಸೇವೆ, ಸೀಯಾಳ ಅಭಿಷೇಕ, ಕರ್ಪೂರ ಆರತಿ, ಕುಂಕುಮಾರ್ಚನೆ, ತ್ರಿಮಧುರ ನೈವೇದ್ಯ, ವಿಶೇಷ ಪ್ರಾರ್ಥನಾ ಸೇವೆ, ಪಂಚಾಮೃತ ಅಭಿಷೇಕ, ಲಲಿತಾ ಅಷ್ಟೋತ್ತರ ಸೇವೆ, ಲಲಿತಾ ಸಹಸ್ರ ನಾಮ ಪಾರಾಯಣ, ಲಲಿತಾ ಸಹಸ್ರ ನಾಮಾರ್ಚನೆ, ತ್ರಿಕಾಲ ನಿತ್ಯ ಪೂಜೆ, ಹೂವಿನ ಪೂಜೆ ಇತ್ಯಾದಿ ದೈನಂದಿನ ಸೇವೆಗಳನ್ನು ನೀಡಲಿಚ್ಚಿಸುವ ಭಕ್ತಾದಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮಂದಿರದ ಶ್ರೀದೇವಿ ಪಾತ್ರಿ ಮತ್ತು ಸಂಸ್ಥಾಪಕ ನಾರಾಯಣ ಬಿ. ಮೂಲ್ಯ ತಿಳಿಸಿದ್ದಾರೆ.


Related News

ಕುಂದಾಪುರ ಬಿಜೆಪಿ ಯುವ ಮೋರ್ಚಾ: ಸೋಶಿಯಲ್ ಮೀಡಿಯಾ ಹೆಡ್ ಆಗ...
views 918
ಉಡುಪಿ: ಬಿಜೆಪಿ ಯುವ ಮೋರ್ಚಾ ಕುಂದಾಪುರ ಮಂಡಲದ ಸಾಮಾಜಿಕ ಜಾಲತಾಣದ ಪ್ರಮುಖರನ್ನಾಗಿ ಸತೀಶ್ ಕುಲಾಲ ನಡೂರು ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್...
ಮೂಲ್ಯರ ಸಂಘಟನಾ ಸಾಮರ್ಥ್ಯ ಬಿಂಬಿಸುವ ಪುರಾತನ ಆಮಂತ್ರಣ ಪತ್...
views 2470
ಮೂಲ್ಯರ ಸಂಘದ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ) ಜಿಲ್ಲಾ ಕಾರ್ಯದರ್ಶಿಯಾಗಿದ್ದ ಮಂಜೇಶ್ವರ ಸಂಕಪ್ಪ ಮೂಲ್ಯರು ಕಿಂಞಣ್ಣ ಮೂಲ್ಯರ ಜೊತೆ ಸೇರಿ ದಿನಾಂಕ 03-05-1925ರಂದು ತನ್ನ ಮನೆಯಲ್...
ಕುಲಾಲ ಸಂಘ ಮೀರಾ ರೋಡ್ – ವಿರಾರ್ ಸಮಿತಿಯ ವಿಹಾರಕೂಟ...
views 591
ಮುಂಬಯಿ(ಫೆ.೨೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಕುಲಾಲ ಸಂಘ ಮುಂಬಯಿ ಇದರ ಸ್ಥಳೀಯ ಸಮಿತಿ ಮೀರಾರೋಡ್- ವಿರಾರ್ ಸಮಿತಿಯ ವಾರ್ಷ...
ಕುಡ್ಲ ಯುವವೇದಿಕೆ ವತಿಯಿಂದ ಮನ್ವಿತಾ ಕುಲಾಲ್ ಗೆ ಆರ್ಥಿಕ ನ...
views 1018
ಮಂಗಳೂರು(ಸೆ.೧೧,ಕುಲಾಲ್ ವರ್ಲ್ಡ್ ನ್ಯೂಸ್): ಕರಾವಳಿ ಕುಲಾಲ-ಕುಂಬಾರ ಯುವವೇದಿಕೆ ಕುಡ್ಲ ಇದರ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜಪ್ಪಿನಮೊಗರು ತಂದೊಳಿಗೆ ಮನ್ವಿತಾ ಕ...
ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ಪ್ರಯಾಣಿಕರ ರಕ್ಷಿಸಿದ ಯ...
views 154
ಬೆಳ್ಮಣ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಿನ್ನಿಗೋಳಿ ಸಮೀಪದ ಸಂಕಲಕರಿಯದ ಬಳಿ ವಾಹನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಸಂದರ್ಭ ತಮ್ಮ ಪ್ರಾಣ ಲೆಕ್ಕಿಸದೇ ನದಿಗೆ ಹಾರಿ ಪ್ರಯಾಣಿಕರ ಪ್...

Leave a Reply

Your email address will not be published. Required fields are marked *