ಕುತ್ಯಾರು ಕುಲಾಲ ಯುವ ವೇದಿಕೆ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಧಕರಿಗೆ ಸನ್ಮಾನ


ky

ಕಾಪು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುತ್ಯಾರು ಕುಲಾಲ ಯುವ ವೇದಿಕೆ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜನವರಿ 13ರಂದು ರಾಮೊಟ್ಟು ಬನಗೋಡಿ ಗದ್ದೆಯಲ್ಲಿ ನಡೆಯಿತು.

ky1
ಸತ್ಯನಾರಾಯಣ ಪೂಜೆಯು ಹಯಗ್ರೀವ ತಂತ್ರಿಯವರ ಪೂಜಾಕಾರ್ಯದೊಂದಿಗೆ ನಡೆದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸತೀಶ್ ಕುತ್ಯಾರು, ಕುಲಾಲ ಸಂಘ (ರಿ) ಕಾಪು ವಲಯದ ಉಪಾಧ್ಯಕ್ಷ ಸಂದೀಪ್ ಕುಲಾಲ್ ಶಂಕರಪುರ ಉಪಸ್ಥಿತರಿದ್ದರು.

ky2

ಈ ಸಂದರ್ಭ ಕುಂಬಾರಿಕೆ ವೃತ್ತಿ ನಡೆಸುವ ಅಪ್ಪಟ್ಟು ಮೂಲ್ಯ ಗುರಿಕಂಡ, ಪ್ರಗತಿಪರ ಕೃಷಿಕ ಗೋಪಾಲ ಮೂಲ್ಯ ಮುದ್ದೊಟ್ಟು, ನಾಟಿ ವೈದ್ಯೆ ಗಿರೀಜಾ ಮೂಲ್ಯ, ವಿದ್ಯಾರ್ಥಿ ಸಾಧಕರಾದ ಸ್ಮೀತಾ ಕುಲಾಲ್, ಪ್ರತಿಕ್ಷಾ ಕುಲಾಲ್,ವಂದನ ಕುಲಾಲ್ ಹಾಗು ರಶ್ಮಿತಾ ಕುಲಾಲ್ ಸನ್ಮಾನಿಸಿ ಗೌರವಿಸಲಾಯಿತು.

ky3
ಶ್ರೇಯಾ, ಸಂಜನಾ, ರಂಜಿತಾ ಅವರ ಪ್ರಾರ್ಥನೆಯೊಂದಿಗೆಆರಂಭವಾದ ಕಾರ್ಯಕ್ರಮದಲ್ಲಿ ಸತೀಶ್ ಕುತ್ಯಾರು ಸ್ವಾಗತಿಸಿದರು. ಯುವ ವೇದಿಕೆ ಕಾರ್ಯದರ್ಶಿ ಧೀರಜ್ ಕುಲಾಲ್ ಮತ್ತು ಮಹಿಳಾ ಸದಸ್ಸೆ ಸವಿತಾ ಕುಲಾಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಅರುಣ್ ಕುಲಾಲ್ ಕುತ್ಯಾರು ಧನ್ಯವಾದವಿತ್ತರು.

ky5

ಚಿತ್ರ /ವರದಿ: ಉದಯ್ ಕುಲಾಲ್ ಕಳತ್ತೂರು


[yuzo_related]

Leave a Reply

Your email address will not be published. Required fields are marked *