ಕುಡ್ಲ ಯುವವೇದಿಕೆ ವತಿಯಿಂದ ಮನ್ವಿತಾ ಕುಲಾಲ್ ಗೆ ಆರ್ಥಿಕ ನೆರವು


hlp

ಮಂಗಳೂರು(ಸೆ.೧೧,ಕುಲಾಲ್ ವರ್ಲ್ಡ್ ನ್ಯೂಸ್): ಕರಾವಳಿ ಕುಲಾಲ-ಕುಂಬಾರ ಯುವವೇದಿಕೆ ಕುಡ್ಲ ಇದರ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜಪ್ಪಿನಮೊಗರು ತಂದೊಳಿಗೆ ಮನ್ವಿತಾ ಕುಲಾಲ್ ಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.

hlp1

ಕರಾವಳಿ ಕುಲಾಲ್ ಕುಂಬಾರ ಯುವವೇದಿಕೆ ಕುಡ್ಲ ಇದರ ಅಧ್ಯಕ್ಷರಾದ ಪ್ರಶಾಂತ್ ಶಕ್ತಿನಗರ ಇವರ ನೇತೃತ್ವದಲ್ಲಿ ಹಿತೈಷಿಗಳಿಂದ ರೂಪಾಯಿ 23,102 ಸಂಗ್ರಹಿಸಲಾಗಿದ್ದು, ಈ ಹಣವನ್ನು ಮನ್ವಿತಾಳ ತಂದೆ ಸುರೇಶ್ ಅವರಿಗೆ ಕೆಎಂಸಿ ಆಸ್ಪತ್ರೆಯಲ್ಲಿ ನೀಡಲಾಯಿತು. ಈ ಸಂದರ್ಭ ಪ್ರಶಾಂತ್ ಶಕ್ತಿನಗರ ಅವರ ಜೊತೆ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದಿರೆ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಮನ್ವಿತಾಗೆ ಚಿಕಿತ್ಸೆ ನೀಡುತ್ತಿರುವ ಹಿರಿಯ ತಜ್ಞ ವೈದ್ಯರುಗಳಾದ ಡಾ. ಲಕ್ಷ್ಮಣ್ ಪ್ರಭು ಹಾಗೂ ಡಾ. ಸುಶಾಂತ್ ಸುವರ್ಣರವರ ಜೊತೆ ವೇದಿಕೆ ಪರವಾಗಿ ಮಾತನಾಡುವ ಬಗ್ಗೆ ಭರವಸೆ ನೀಡಿ, ಸ್ಥೈರ್ಯ ತುಂಬಲಾಯಿತು.


[yuzo_related]

Leave a Reply

Your email address will not be published. Required fields are marked *