‘ಕುಂಬಾರ ಹಳ್ಳಿ’ ಯೋಜನೆಗೆ ಅರ್ಹ ಸ್ವಯಂ ಸೇವಾ ಸಂಸ್ಥೆ(ಎನ್‍ಜಿಓ)ಗಳಿಂದ ಅರ್ಜಿ ಆಹ್ವಾನ


symbol

ಕಾರವಾರ(ಮಾ.೨೦, ಕುಲಾಲ್ ವರ್ಲ್ಡ್ ನ್ಯೂಸ್) : ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ನೇರವಾಗಿ ರಾಜ್ಯದ ಕುಂಬಾರಿಕೆ ಜನಾಂಗದ ನಿರುದ್ಯೋಗಿಗಳಿಗೆ ತರಬೇತಿಯನ್ನು ನೀಡುವ ದೃಷ್ಠಿಯಿಂದ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕು, ಅಸು ಗ್ರಾಮದ ‘ಕುಂಬಾರ ಹಳ್ಳಿ’ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಹ ಸ್ವಯಂ ಸೇವಾ ಸಂಸ್ಥೆ(ಎನ್‍ಜಿಓ)ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಏ.9 ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸಬಯಸುವ ಅರ್ಹ ಸಂಸ್ಥೆಯು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿರಬೇಕು. ಸಂಸ್ಥೆಯು ಕುಂಬಾರಿಕೆ ಉದ್ದಿಮೆಯಲ್ಲಿ ಕನಿಷ್ಟ 5 ವರ್ಷಗಳಿಗೆ ತರಬೇತಿ ನೀಡಿದ ಮತ್ತು ಉತ್ಪಾದನೆ ಮಾಡಿದ ಅನುಭವವಿರಬೇಕು. ತರಬೇತಿ ಮತ್ತು ಉತ್ಪಾದನೆಗಳ ಮಾಹಿತಿ ನೀಡಲು ಸಂಸ್ಥೆಯ ಬಳಿ ಸಂಪನ್ಮೂಲ ವ್ಯಕ್ತಿಗಳು ಮತ್ತು ಸ್ವಂತ ಮೂಲಭೂತ ಸೌಕರ್ಯ (ಕಾರ್ಯಾಗಾರ) ಹೊಂದಿರಬೇಕು.
ಅರ್ಜಿಯೊಂದಿಗೆ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ., ಬೈಲಾ ಪ್ರತಿ, ಕಳೆದ ಮೂರು ವರ್ಷಗಳ ಅಡಾವೆ ಪತ್ರಿಕೆ, ಹೂಡಬಹುದಾದ ಬಂಡವಾಳದ ವಿವರಗಳ ದಾಖಲಾತಿಗಳ ವಿವರಗಳನ್ನು ಸಲ್ಲಿಸಬೇಕು.
ಹೆಚ್ಚಿನ ವಿವರ ಹಾಗೂ ನಿಗದಿತ ಅರ್ಜಿ ನಮೂನೆಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ ಡಾ. ಪಿಕಳೆ ರಸ್ತೆ, ಕಾರವಾರ-581301. ದೂರವಾಣಿ ಸಂಖ್ಯೆ: 08382-226506 ಮೊ: 9480825632 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕೆ.ಜಿ.ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.


[yuzo_related]

Leave a Reply

Your email address will not be published. Required fields are marked *