ಕುಂಬಾರರ ಸಂಸ್ಕೃತಿ ಬಿಂಬಿಸುವ ಕಾದಂಬರಿಗೆ `ಸರಸ್ವತಿ ಸಮ್ಮಾನ್‌’ ಪುರಸ್ಕಾರ


samman

ನವದೆಹಲಿ(ಮಾ.೧೨): ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಮಾಜೋಳಿ ಮೂಲದ ಕೊಂಕಣಿಯ ಹಿರಿಯ ಸಾಹಿತಿ ಮಹಾಬಲೇಶ್ವರ್‌ ಸೈಲ್‌ ಅವರು ಪ್ರತಿಷ್ಠಿತ ಸರಸ್ವತಿ ಸಮ್ಮಾನ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುರಸ್ಕಾರ ರೂ.15 ಲಕ್ಷ ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.

2009ರಲ್ಲಿ ಪ್ರಕಟಣಗೊಂಡಿರುವ ಕೊಂಕಣಿಯ ‘ಹಾಂವ್‌ಠಾಣ್ ’ ಕಾದಂಬರಿಗಾಗಿ ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರ ನೀಡಲಾಗಿದೆ. ಗೋವಾದ ಸಾಂಪ್ರದಾಯಿಕ ಕುಂಬಾರ ಸಮುದಾಯದವರ ಸಂಸ್ಕೃತಿಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. (ಹಾಂವ್‌ಠಾಣ್ ಅಂದರೆ ಕುಂಬಾರರ ಕುಲುಮೆ ಎಂದರ್ಥ. ಅದನ್ನು ‘ಆವಿಗೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಶಾ.ಮಂ.ಕೃಷ್ಣರಾಯರು ಅನುವಾದಿಸಿದ್ದಾರೆ) ಕೊಂಕಣಿಯಲ್ಲಿ ಏಳು ಕಾದಂಬರಿಗಳನ್ನು ರಚಿಸಿರುವ ಸೈಲ್‌ ಅವರು ಮರಾಠಿಯಲ್ಲಿಯೂ ಸಾಹಿತ್ಯ ರಚಿಸಿದ್ದಾರೆ. ಮರಾಠಿಯಲ್ಲಿ ನಾಲ್ಕು ನಾಟಕಗಳನ್ನು, ಒಂದು ಕಾದಂಬರಿ ಹಾಗೂ ಐದು ಸಣ್ಣಕತೆಗಳನ್ನು ಅವರು ಬರೆದಿದ್ದಾರೆ.

Mahabaleshwar Sail

ಖೋಲ್‌ ಖೋಲ್‌ ಮೂಲನ್‌, ಅದೃಷ್ಟ, ಅರಣ್ಯಕಾಂಡ್‌, ಹತಾನ್‌, ಯುಗ್‌ ಸನ್ವರ್‌ ಹಾಗೂ ಕಾಳಿ ಗಂಗಾ ಸೇರಿದಂತೆ ಅವರ ಇತರೆ ಕಾದಂಬರಿಗಳಲ್ಲಿ ವಿವಿಧ ಸಾಮಾಜಿಕ ಸ್ತರಗಳಲ್ಲಿನ ಜೀವನ ಅನುಭವಗಳನ್ನು ಅಭಿವ್ಯಕ್ತಿಸಲಾಗಿದೆ. ‘ಪೆಲ್ತಾಡ್ಚೊ ಮನಿಸ್‌’: ಕೊಂಕಣಿ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರವಾಗಿದೆ. 2006ರಿಂದ 2015ರ ಅವಧಿಯಲ್ಲಿ ಪ್ರಕಟಗೊಂಡಿದ್ದ ವಿವಿಧ ಭಾಷೆಗಳ 22 ಕೃತಿಗಳು ಸ್ಪರ್ಧೆಯಲ್ಲಿದ್ದವು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಆನಂದ್‌ ಅವರ ನೇತೃತ್ವದ ‘ಛಾಯನ್‌ ಪರಿಷತ್‌’ ಅಂತಿಮವಾಗಿ ಸೈಲ್‌ ಅವರ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. 1993ರಲ್ಲಿ ಅವರು ಕೇಂದ್ರೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. 1965ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ಬಳಿಕ ಗೋವಾದಲ್ಲಿ ವಾಸಿಸುತ್ತಿದ್ದಾರೆ.


Related News

ಡಾ ದುಗ್ಗಪ್ಪ ಕಜೆಕಾರ್ ಅವರ `ಒಕ್ಯುಪೇಶನಲ್ ಮೊಬಿಲಿಟಿ ಎಮಂಗ...
views 1711
1969 ಅಗೋಸ್ಟ್ 2 ರಂದು ಮಡಂತ್ಯಾರಿನ ಕಜೆಕಾರ್ ನಲ್ಲಿ ಜನಿಸಿದ ಇವರು ಮಂಗಳೂರು ವಿ. ವಿ ಯಲ್ಲಿ ಸಮಾಜಶಾಸ್ತ್ರ ಎಂ. ಎ ಪದವಿಯನ್ನು , ಎಂ.ಫಿಲ್ , ಪಿ.ಹೆಚ್.ಡಿ ಪದವಿಗಳನ್ನು ಗಳಿಸಿದ್ದ...
ಬಸವರಾಜ ಕುಂಚೂರು ಅವರ `ಕುಂಬಾರ ಜನಾಂಗ’ ಕೃತಿ...
views 993
`ಕುಂಬಾರ ಜನಾಂಗ' ಬಸವರಾಜ ಕುಂಚೂರು ಅವರ ನಾಲ್ಕನೆಯ ಕೃತಿ. ಸಂಶೋಧನೆ, ಇತಿಹಾಸ. ಸಾಹಿತ್ಯ, ತಾಂತ್ರಿಕತೆ.. ಹೀಗೆ ಕುಂಬಾರ ಜನಾಂಗದ ವಿವಿಧ ಮಗ್ಗುಲುಗಳನ್ನು ತೆರೆದಿಟ್ಟ ಕೃತಿ. ಬಸವರಾ...
ನಿಂತುಹೋದ ತಿಗರಿಯ ಚಕ್ರ...
views 876
“ಆವಿಗೆ” ಕಾದಂಬರಿ ಮೂಲತಃ ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್ ಅವರ ಹಾವಠಣ ಎಂಬ ಕಾದಂಬರಿಯ (ಶಾ.ಮಂ.ಕೃಷ್ಣರಾಯರ) ಅನುವಾದ. ಇದು ಕರ್ನಾಟಕ-ಗೋವಾ ಗಡಿಭಾಗದ ಕುಂಬಾರರ ಬದುಕಿನಲ್ಲಿ ಅಲ್...
ಕುಂಬಾರರ ಅಕ್ಷರ ಸಂಗ್ರಹ ಮತ್ತು ಕರುನಾಡು ಕುಂಬಾರ ಪರಿವಾರದ ...
views 1706
ಕನ್ನಡದ ಮಟ್ಟಿಗೆ ಹೇಳುವುದಾದರೆ ಕನ್ನಡದಲ್ಲಿ ಕುಂಬಾರ ಜನಾಂಗದ ಕುರಿತಾಗಲಿ ಕುಂಬಾರಿಕೆಯ ಕುರಿತಾಗಲಿ ಸಮಗ್ರವಾದ ಗ್ರಂಥ ಅಥವಾ ಪುಸ್ತಕ ಇದುವರೆಗು ಪ್ರಕಟವಾಗಿಲ್ಲ. ಆದರೆ ಕೆಲವು ಸಂದರ್ಭ...

Leave a Reply

Your email address will not be published. Required fields are marked *