ಉಡುಪಿ ಕಾರ್ಮಿಕ ಇಲಾಖೆ : ಕುಂಬಾರಿಕೆ ವೃತ್ತಿ ನಿರತ 11 ಮಂದಿಗೆ `ಶ್ರಮ ಸಮ್ಮಾನ’ ಪ್ರಶಸ್ತಿ


ಉಡುಪಿ(ಫೆ.೨೮, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜಿಲ್ಲಾಡಳಿತ ಉಡುಪಿ,ಕಾರ್ಮಿಕ ಇಲಾಖೆ ಉಡುಪಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇವರ ಸಹಯೋಗದಲ್ಲಿ ಕೊಡಮಾಡುವ ಶ್ರಮ ಸಮ್ಮಾನ ಗೌರವ ಪುರಸ್ಕಾರಕ್ಕೆ ಅಸಂಘಟಿತ ಕಾರ್ಮಿಕ ವಲಯದ ಕುಂಬಾರಿಕೆ ವೃತ್ತಿ ನಿರತ ಉಡುಪಿ ಜಿಲ್ಲೆಯ ಹನ್ನೊಂದು ಮಂದಿ ಕುಲಾಲರು ಆಯ್ಕೆಯಾಗಿದ್ದಾರೆ.

PowerPoint Presentation

ಕಾರ್ಕಳ ತಾಲೂಕಿನ ಕುಕ್ಕುಂದೂರು ಕೆಂಚಲ್ ಮನೆ ನಿವಾಸಿ ರಾಘು ಮೂಲ್ಯ, ಕಾರ್ಕಳ ಬೇಲಾಡಿ ಮಂಚದಬೈಲುಮನೆ ನಿವಾಸಿ ರಮೇಶ ಮೂಲ್ಯ, ಹೆಬ್ರಿ ಚಾರ ಬಸದಿಯ ನಿವಾಸಿ ಕೃಷ್ಣ, ಉಡುಪಿ ಬ್ರಹ್ಮಾವರದ ಆರೂರು ಕೀರ್ತಿನಗರದ ನಿವಾಸಿ ಕುಮಾರ್ ಕುಲಾಲ್, ಉಡುಪಿ ಬ್ರಹ್ಮಾವರದ ಅರೂರು ಕೀರ್ತಿನಗರದ ನಿವಾಸಿ ಸರೋಜಿನಿ, ಉಡುಪಿ ಹೊಸೂರು ಕರ್ಜೆ ಹಾಡಿಬೆಟ್ಟುವಿನ ಪುಟ್ಟ ಹಾಂಡ, ಕುಂದಾಪುರ ಆಲೂರು ಗ್ರಾಮದ ದೂಮನ ಪಾಲು ನಿವಾಸಿ ಗಣೇಶ ಕುಲಾಲ್, ಕುಂದಾಪುರ ಆಲೂರು ಬಂಗ್ಲೆಯ ನಿವಾಸಿ ರಘುರಾಮ ಕುಲಾಲ್, ಕುಂದಾಪುರ ಆಲೂರಿನ ಹಡಗಿನ ಮುಳ್ಳಿ ನಿವಾಸಿ ನೀಲಾವತಿ, ಕುಂದಾಪುರ ಕಾಲ್ತೋಡು ಮೆಟ್ಟಿನಹೊಳೆ ನಿವಾಸಿ ರಾಜೇಶ ಕುಲಾಲ್, ಕುಂದಾಪುರ ಆಲೂರಿನ ಸುಜಾತ ಕುಲಾಲ್ ಈ ಶ್ರಮ ಸಮ್ಮಾನ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ವ್ಯಕ್ತಿಗಳಾಗಿದ್ದಾರೆ.

ಈ ಒಂದು ಜನ ಕುಂಬಾರಿಕೆ ವೃತ್ತಿನಿರತ ಕುಂಬಾರರನ್ನು ಗುರುತಿಸಿ ಕಾರ್ಮಿಕ ಇಲಾಖೆಗೆ ಅವರ ಕುಂಬಾರಿಕೆ ಕೆಲಸಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಈ ಗೌರವ ಪುರಸ್ಕಾರವನ್ನು ನೀಡಲು ಶ್ರಮವಹಿಸಿದ್ದು ಕುಂಬಾರಿಕೆ ಗುಡಿಕೈಗಾರಿಕ ಸಹಕಾರಿ ಸಂಘ ಪೆರ್ಡೂರು. ಇದರ ಅಧ್ಯಕ್ಷರು ಮತ್ತು ಸಿಬ್ಬಂದಿಗಳ ಶ್ರಮದಿಂದ ಒಂಬತ್ತು ಜನ ಅಸಂಘಟಿತ ವಲಯದ ಕುಂಬಾರರಿಗೆ ಈ ಪುರಸ್ಕಾರ ಒಲಿದು ಬರಲು ಸಾಧ್ಯವಾಗಿದೆ.

ಈ ಶ್ರಮ ಸಮ್ಮಾನ ಗೌರವ ಪುರಸ್ಕಾರವನ್ನು ಮಾರ್ಚ್ ೧, ಶುಕ್ರವಾರದಂದು ಉಡುಪಿ-ಮಣಿಪಾಲದ ಜಿಲ್ಲಾಡಳಿತ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರುಗುವ ಕಾರ್ಮಿಕ ಸಮ್ಮಾನ ದಿನಾಚರಣೆಯ ಸಂಧರ್ಭದಲ್ಲಿ ನೀಡಿ ಪುರಸ್ಕರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ, ಶಾಸಕ ರಘುಪತಿ ಭಟ್ ಇನ್ನಿತರ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಈ ಸಂಧರ್ಭ ಉಪಸ್ಥಿತರಿರಲಿದ್ದಾರೆ.


Related News

ಜ. 8ರಂದು ದ.ಕ ಜಿಲ್ಲಾ ಕುಲಾಲ ಮಾತೃ ಸಂಘದಲ್ಲಿ ಸನ್ಮಾನ-ಅಭಿ...
views 961
ಮಂಗಳೂರು(ಜ.೦೧): ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವು ಜನವರಿ 8, ಆದಿತ್ಯವಾರದಂದು ನಡೆಯಲಿ...
ಮುವಾಯ್ ಥಾಯ್‌ ಫೆಡರೇಷನ್ ಕಪ್ -2018 : ಸುಕ್ರೀತ್ ಕೋಡಿಕಲ್...
views 398
ಮಂಗಳೂರು(ಕುಲಾಲ್ ವರ್ಲ್ಡ್ ನ್ಯೂಸ್): ಜಮ್ಮು ಕಾಶ್ಮೀರದ ಶ್ರೀನಗರದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಮೂರನೇ MINF ಮುವಾಯ್ ಥಾಯ್‌ ಫೆಡರೇಷನ್ ಕಪ್ -2018 ಇದರಲ್ಲಿ ಭಾಗವಹಿಸಿದ ಮಂಗಳೂರಿ...
ನರಿಂಗಾನ ಕಂಬ್ಲ ಬಂಜನ್ ಕುಟುಂಬಸ್ಥರ ಧರ್ಮನೇಮದ ಸಿದ್ಧತಾ ಸಭ...
views 1007
ಮಂಗಳೂರು : ನರಿಂಗಾನ ಗ್ರಾಮದ ಕಂಬ್ಲ ಎಂಬಲ್ಲಿ ಕುಲಾಲ ಸಮುದಾಯದ ಬಂಜನ್ ಕುಟುಂಬಸ್ಥರ ಸೇವೆಯಾಗಿ ನರಿಂಗಾನದ ಶ್ರೀ ಮಲರಾಯ ಬಂಟ ಪಿಲಿಚಾಮುಂಡಿ ದೈವಗಳಿಗೆ ಜನವರಿಯಲ್ಲಿ ಸಮರ್ಪಣೆಯಾಗಲ...
ಶೈಕ್ಷಣಿಕ ಸಾಧನೆ : ಅಂಜಲಿ ಅವರಿಗೆ ರಾಜೀವ ಆಳ್ವ ಟ್ರಸ್ಟ್ ಪ...
views 1453
ಮಂಗಳೂರು(ಜೂ.೧೭): 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಊರಿಗೆ, ವಿದ್ಯಾಸಂಸ್ಥೆಗೆ, ಮನೆಗೆ ಕೀರ್ತಿ ತಂದಿರುವ ಕಾಸರಗೋಡು ಮಂಜೇಶ್ವರ ಮೀ...
ಅಸಹಾಯಕರಿಗೆ ಸಹಾಯಹಸ್ತ ಚಾಚುತ್ತಿರುವ ದೋಹಾ ಕತಾರ್ `ಕುಲಾಲ್...
views 1074
ದೋಹಾ : ಕುಲಾಲ/ಕುಂಬಾರ ಸಮಾಜದ ಇತಿಹಾಸದಲ್ಲಿಯೇ ಪ್ರಪ್ರಥವಾಗಿ ವಿದೇಶದಲ್ಲಿ ಬಲಗೊಂಡ ಏಕೈಕ ಸಂಘ ಎಂದರೆ  ಕತಾರ್ `ಕುಲಾಲ್ ಫ್ರೆಂಡ್ಸ್ '. ೨೦೧೨ ರಲ್ಲಿ ಉದಯವಾದ ಕುಲಾಲ್ ಫ್ರೆಂಡ್ಸ್ ...

Leave a Reply

Your email address will not be published. Required fields are marked *