ಅಪಘಾತಕ್ಕೀಡಾದ ಕಂದನ ಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆ ಧನಸಹಾಯ


ಕಾಪು (ಫೆ ೧೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ರಾತ್ರಿಯ ಕಾರ್ಯಕ್ರಮಕ್ಕೆ ರಿಕ್ಷಾದಲ್ಲಿ ಹೊರಟಿದ್ದ ಕುಟುಂಬವೊಂದು ಅಪಘಾತದಲ್ಲಿ ಸಿಲುಕಿ ಪುಟ್ಟ ಮಗುವಿನ ಕಾಲೊಂದು ತೀವ್ರ ತರದಲ್ಲಿ ಜಖಂಗೊಂಡಿದ್ದು, ಬಡ ಮಗುವಿನ ಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆಯಿಂದ ಧನ ಸಹಾಯ ನೀಡಲಾಯಿತು.

kaup

ಅಪಘಾತಕ್ಕೀಡಾದ ಮಗುವನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದಾಗ ಜಜ್ಜಲ್ಪಟ್ಟ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ಸೂಚನೆ ನೀಡಿದರು. ಕೂಲಿ ಕೆಲಸ ಮಾಡುತಿದ್ದ ಮಗುವಿನ ಪಾಲಕರು ಶಸ್ತ್ರ ಚಿಕಿತ್ಸೆಗೆ ತಗಲುವ ದುಬಾರಿ ವೆಚ್ಚವನ್ನು ಕೇಳಿಯೇ ಹೌಹಾರಿದ್ದರು. ಮಗುವಿನ ಭವಿಷ್ಯವನ್ನು ನೆನೆದು ಕಣ್ಣೀರಾದ ಪಾಲಕರು ಕಾಪು ಕುಲಾಲ ಯುವ ವೇದಿಕೆಗೆ ಸಹಕಾರಕ್ಕಾಗಿ ವಿನಂತಿಸಿಕೊಂಡರು.

ಕಾಪು ಕುಲಾಲ ಯುವ ವೇದಿಕೆಯು ಪುಟ್ಟ ಮಗು ದೈವಿಕ್ ನ ವಸ್ತುಸ್ಥಿತಿ ವಿವರಣೆಯ ಸಚಿತ್ರ ವರದಿಯೊಂದಿಗೆ ಸಹೃದಯಿ ದಾನಿಗಳಿಂದ ಧನ ಸಹಾಯಕ್ಕಾಗಿ ಮಾಡಿದ ಕಳಕಳಿಯ ಮನವಿಗೆ ಶೀಘ್ರ ಗತಿಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ ಪರಿಣಾಮ ಸಂಗ್ರಹವಾದ 39, 000 ರೂ ಧನಸಹಾಯವನ್ನು ದೈವಿಕ್ ನ ಪಾಲಕರಿಗೆ ದಿನಾಂಕ 17/ 02/ 2019 ರಂದು ಹಸ್ತಾಂತರಿಸಲಾಯಿತು.
ಈ ಸಂದರ್ಭ ಕಾಪು ಕುಲಾಲ ಯುವವೇದಿಕೆ ಅಧ್ಯಕ್ಷ ಉದಯ ಕುಲಾಲ್ ಕಳತ್ತೂರು, ಕಾಪು ವಲಯ ಕುಲಾಲ ಸಂಘದ ಉಪಾಧ್ಯಕ್ಷ ಸಂದೀಪ್ ಬಂಗೇರ ಶಂಕರಪುರ, ಧೀರಜ್ ಕುಲಾಲ್ ಕುತ್ಯಾರು, ದಿನೇಶ್ ಶಂಕರಪುರ,ರವಿರಾಜ್ ಆಚಾರ್ಯರವರು ಉಪಸ್ಥಿತರಿದ್ದರು.
ಮಗುವಿನ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಧನ ಸಹಾಯದ ಅಗತ್ಯವಿರುವ ಕಾರಣ ಸಹಾಯ ಧನ ನೀಡುವ ಸಹೃದಯರು ಮಗುವಿನ ತಂದೆ ಸಂತೋಷ್ ಕುಲಾಲ್ ರವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ : 9945713444


Related News

ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಪ್ರಖಂಡದ ಅಧ್ಯಕ್ಷ ವೇಣುಗೋ...
views 509
ಮಂಗಳೂರು(ಸೆ.೦೯, ಕುಲಾಲ್ ವರ್ಲ್ಡ್ ನ್ಯೂಸ್) : ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಪ್ರಖಂಡದ ಅಧ್ಯಕ್ಷ ವೇಣುಗೋಪಾಲ್ (56) ಅವರು ಅಸೌಖ್ಯದಿಂದ ನಿಧನ ಹೊಂದಿದರು. ಸುರತ್ಕಲ್ ನ ...
ಜ. 5ರಂದು ಕುಂಬಾರರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮ...
views 184
ಮೈಸೂರು (ಜ.೦೩, ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರ ಸಮಾಜದ ವಿವಿಧ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ವಾಭಿಮಾನಿ ಕುಂಬಾರ ಕುಲ ಭಾಂದವರಿಂದ ಜ. 5ರಂದು ಮೈಸೂರು ಜಿಲ್ಲಾಧಿಕಾ...
ಪೆರ್ಡೂರು : ನವಜಾತ ಮಗುವಿನ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ...
views 1101
ಉಡುಪಿ(ಫೆ.೨೦): ಮಾನವೀಯತೆಗೆ ಹಲವು ಮುಖ, ನಾವು ಇನ್ನೊಬ್ಬರಿಗೆ ಸಹಾಯ ಮಾಡಲು ಮನಸು ಮಾಡಿದರೆ ಅದಕ್ಕೆ ನೂರು ದಾರಿಗಳು.. ಅವಧಿಗೆ ಮುನ್ನವೇ ಜನನವಾಗಿ ಸರಿಯಾದ ತೂಕವಿಲ್ಲದೇ ಪ್ರಾಣಾಪಾಯದ...
ಬಡಗ ಕಜೆಕ್ಕಾರು ಕುಲಾಲ ಸಂಘ ಉದ್ಘಾಟನೆ...
views 868
ಪುತ್ತೂರು : ಬಡಗ ಕಜೆಕ್ಕಾರು ಗ್ರಾಮದ ಕೆದಿಮೇಲು ಶ್ರೀಧರ ಮೂಲ್ಯರ ಮನೆಯಲ್ಲಿ ನೂತನ ಕುಲಾಲ ಕುಂಬಾರ ಯಾನೆ ಮೂಲ್ಯರ ಸಂಘವನ್ನು ಉದ್ಯಮಿ ಪದ್ಮ ಮೂಲ್ಯ ಅನಿಲಡೆ ಅವರು ಉದ್ಘಾಟಿಸಿದರು....
ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಷನ್ ಹಾಗೂ ಹಿಂದೂ ಸೇವಾ ವಿ...
views 279
ಮಂಗಳೂರು(ಅ.೨೯,ಕುಲಾಲ್ ವರ್ಲ್ಡ್ ನ್ಯೂಸ್): ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಷನ್ ಹಾಗೂ ಹಿಂದೂ ಸೇವಾ ವಿಭಾಗ್ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ...

Leave a Reply

Your email address will not be published. Required fields are marked *